ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಹನುಮದ್ವಿಲಾಸ

ಶ್ರೀ ಗುರುಭ್ಯೋನಮ:

ಶ್ರೀ ಖಾದ್ರೀ ನರಸಿಂಹ ಮುದ್ರಿಕೆಯಿಂದ ರಚಿಸಿದ ಶ್ರೀಹನುಮದ್ವಿಲಾಸದ

ಕಥಾನುವಾದ

ತ್ರೆತಾಯುಗದಲ್ಲಿ ಭೂಭಾರ ಹರಣಕ್ಕಾಗಿ ಪರಮಾತ್ಮನು ಸೂರ್ಯವಂಶದಲ್ಲಿ ದಶರಥಪುತ್ರನಾಗಿ ಮನುಷ್ಯರಂತೇ ನಟನೆ ಮಾಡುತ್ತಾ ದುಷ್ಟರ ಶಿಕ್ಷೆ ಶಿಷ್ಟರ ರಕ್ಷಣೆ ಮಾಡುವದಕ್ಕಾಗಿಯೂ, ಮನುಷ್ಯರಿಗೆ ( ಜೀವರಿಗೆ ) ಆದರ್ಶಪ್ರಾಯನಾಗಿ ಪಾಠ ಕಲಿಸಲೋಸುಗ ಅವತಾರ ಮಾಡಿದ್ದು, ಮತ್ತು ತನ್ನ ಭಕ್ತ ಶ್ರೇಷ್ಠನಾದ ವಾಯುದೇವನು ಕಪಿ ಕುಲದಲ್ಲಿ ಅಂಜನೇಯನಾಗಿ ತಪಸ್ಸಿನ ಫಲವಾಗಿ ಶ್ರೀರಾಮನ ಸೇವೆಗೆ ಆಂಜನಾದೇವಿಯಲ್ಲಿ ಜನಿಸಿದನು. ಹರಿಯ ಇಚ್ಚೆಯಂತೆ ತಾನೂ ಹರಿಯಂತೆ ನಟನೆ ಮಾಡುವದು, ಇದೆಲ್ಲವು ಹರಿಮತವೇ ಹನುಮನಮತ, ಅಂತಾ ಇಬ್ಬರದೂ ನಟನೆ. ನರರಂತೇ ಕೆಲವು ಕಡೆಗೆ ಕಂಡುಬರುವವು, ಸರ್ವಜ್ಞ ಶಿಖಾಮಣಿಯಾದ ೩೭ ಸಲಕ್ಷಣ ಉಳ್ಳ ವಾಯ ದೇವರ ಜನಿಸಿದಾಕ್ಷಣ, ಉದಯಿಸುತ್ತಿರುವ ಸೂರ್ಯನನ್ನು ನೋಡಿ ಇದು ಚಂದವಾದ ಹಣ್ಣು ಎಂದು ಹಿಡಿಯಲು ಕೂಡಲೇ ಶಿಶು ಆಕಾಶಕ್ಕೇ ಹಾರಿತು. ಗಾಬರಿಗೊಂಡ ಸೂರ್ಯನು ಇಂದ್ರನ ಬೆನ್ನು ಬೀಳಲು ಇಂದ್ರನು ವಜ್ರಾಯಧದಿಂದ ಹೊಡೆದನು. ಆಗ್ಗೆ ಮಗುವು ಮೂರ್ಛೆಯಿಂದ ಮಲಗಿರಲು ತಂದೆ ವಾಯು ದೇವರು ಕೋಪಗೊಂಡ ಬ್ರಹ್ಮನಿಂದ ಹಿಡಿದು ಇರುವೆಯವರೆಗೂ ಎಲ್ಲರ ಶ್ವಾಸ ನಿಗ್ರಹಿಸಿದರು.

ಅದರಿಂದ ಇಡೀ ಜಗತ್ತಿನ ಎಲ್ಲ ಪ್ರಾಣಿಗಳೂ ಉಸಿರಾಡಿಸಲಾಗದೇ ಒದ್ದಾಡುತ್ತಿರಲು, ಬ್ರಹ್ಮಾದಿ ಸಕಲದೇವತೆಗಳೂ ಮಗುವಿನ ಹತ್ತಿರ ಬಂದು ಉಪಚಾರಮಾಡುತ್ತಾ ( ವಜ್ರದೇಹಿಯಾದ ಶಿಶುವಿಗೆ) ಆರೋಗ್ಯದಿಂದಿರು ದೀರ್ಘಾಯವಾಗು ಎಂದು ಹರಿವಾಯುದೇವರಿಗೆ ಪ್ರಾರ್ಥಿಸಿ ಕ್ರಮೆ ಕೇಳಲು, ದಯಾಮಯರಾದ ವಾಯುದೇವರು ಮೊದಲಿನಂತೆ ಶ್ವಾಸ

ಕಾರ್ಯನಡೆಸಿದರು, ಹನು ಅಂದರೆ ಜ್ಞಾನ ಮಗುವಿನ ಹನುಮಂತನೆಂದು ದೇವತಗಳೆಲ್ಲ ನಾಮಕರಣ ಮಾಡಿದರು. ( ಹನುಮಾನ್ = ಅಮೀಚಿನ ಜ್ಞಾನ ) ಇನ್ನು ಗದ್ದಕ್ಕೆ ಹನು ಅಂತಲು ಅನ್ನುವರು, ಆಮೇಲೆ ಸರ್ವಜ್ಞನಾದ ಹನುಮಂತನು ಸೂರ್ಯನಲ್ಲಿ ವೇದಾದಿಗಳನ್ನು, ಇಂದ್ರನಲ್ಲಿ ವ್ಯಾಕರಣವನ್ನು ಆದ್ಯಯನ ಮಾಡಿ, ಆಂಧಳಾದ ತಾಯಿಯ ಹತ್ತಿರ ಬಂದು ಅಮ್ಮಾ ತಂದಿ ಗಾಳಿ ದೇವರು, ನೀನು ಅಂಧಳಿರುವಿ ನಾನುಯಾರನ್ನು ಆಶ್ರಯಿಸಲಿ? ಎಂದು ಕೇಳಿದನು. ಕಂದಾ ನೀನು ಜನಿಸುವಾಗ ನಿನ್ನ ದೇಹದಲ್ಲಿಯೇ ಸರ್ವ ಆಭರಣಗಳನು ಯಜ್ಞೋಪವೀತ ಕಟಿಸೂತ್ರ ಸಹಿತವಾಗಿಯೇ ಜನಿಸಿರುವಿ. ಆವು ಯಾರಿಗೂ ಕಾಣುವದಿಲ್ಲ, ಆವುಗಳನ್ನು ಯಾರು ಕಾಣುವರೋ ಆವರೇ ನಿನಗೆ ಸ್ವಾಮಿ, ಅವರು ದೊರೆಯುವ ವರೆಗೂ ನಿನ್ನ ಸೋದರ ಮಾವನಾದ ಸುಗ್ರೀವನಲ್ಲಿರು ಎಂದು ಹೇಳಿದಳು, ಅದರಂತೆ ಇದ್ದು ಆಜನ್ಮ ಬ್ರಹ್ಮಚರ್ಯದಿಂದಿದ್ದನು. ಸದಾ ತನ್ನ ಸ್ವಾಮಿಯ ಧ್ಯಾನದಲ್ಲೇ ನಿರತನಾಗಿದ್ದನು.

ಇತ್ತ ಅಯೋಧ್ಯೆಯಲ್ಲಿ ದಶರಥನ ೪ ಮಕ್ಕಳಲ್ಲಿ ಮೊದಲನೇಯವನಾಗಿ ಶ್ರೀರಾಮನೆಂದು ಅವತರಿಸಿದ ಸ್ವಾಮಿಯು ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ಬರಬೇಕೆಂದು ಕೇಳಿಕೊಳ್ಳಲು ತಂದೆಯ ಅಪ್ಪಣೆ ಪಡೆದು ಲಕ್ಷ್ಮಣನೊಂದಿಗೆ ಹೋಗಿ ಅಲ್ಲಿದ್ದ ಋಷಿ ಮುನಿಗಳಿಗೆ ಕಂಟಕರಾಗಿರುವಂಥ ಅನೇಕ ರಾಕ್ಷಸರನ್ನು ಸಂಹರಿಸಿ ಅವರಿಗೆಲ್ಲ ಸಂತೋಷ ಬಡಿಸಿದನು, ಅದೇ ವೇಳೆಗೆ ವಿಶ್ವಾಮಿತ್ರರು ಸೀತಾ ಸ್ವಂಯವರದ ವಾರ್ತೆ ಕೇಳೀ ರಾಮ ಲಕ್ಷ್ಮಣರನ್ನು ಕರೆದು ಕೊಂಡು ಹೊರಟರು, ಮಾರ್ಗದಲ್ಲಿ ಪತಿಶಾಪದಿಂದ ಶಿಲೆಯಾಗಿದ್ದ ಅಹಲ್ಯೆಯನ್ನು ಶ್ರೀರಾಮನು ಉದ್ದರಿಸಿದನು, ಮುಂದೆ ಮಿಥಿಲಾ ನಗರಕ್ಕೆ ಬಂದು ಲಗ್ನ ಮಂಟಪದಲ್ಲಿ ನೆರೆದ ಸಾವಿರಾರು ಮಹಾನ್ ಮಹಾನ್ ರಾಜರನ್ನು ಮಣ್ಣು ಮುಕ್ತಿಸಿದ ಶೀವಧನುಸ್ಸುನ್ನು ನೋಡಿದನು, ಆವೇಳೆಗೆ ರಾವಣನು ಒಳ್ಳೇ ಮದದಿಂದ ತನ್ನ ೨೦ ತೋಳುಗಳಿಂದ ಸರ್ವಶಕ್ತಿ ಪ್ರಯೋಗಿಸಿ ಹೇಗೋ ಮಾಡಿ ತೇಕಾಡುತ್ತಾ ಎತ್ತಿ ಅರ್ಧಕ್ಕೇ ಎದೆಮೇಲೆ ಧನುಸ್ಸು ಹಾಕಿಕೊಂಡು ಅಂಗಾತ ಸಭೆಯಲ್ಲಿ ಬಿದ್ದು ಬಿಟ್ಟನು. ಆಗ ಅವನು ಕಣ್ಣು ಕಣ್ಣು ಬಿಡುತ್ತಾ ನರಳುತ್ತಾ ಬಿದ್ದುರಲು ನೂರಾರು ರಾಜದೂತರು ಬಂದು ಅದನ್ನು ಪ್ರಯಾಸದಿಂದ ಎತ್ತಿ ಇಟ್ಟರು. ಇದನ್ನು ಕಂಡು ವಿಶ್ವಾಮಿತ್ರರು ರಾಮನಿಗೆ ನೀನು ಧನುರ್ಭಂಗ ಮಾಡೆಂದು ಸೂಚಿಸಲು. ಕೂಡಲೇ ನಿರಾಯಾಸದಿಂದ ಒಂದು ಹುಲ್ಲು ಕಡ್ಡಿ ಎತ್ರಿದಂತೆ ಎಡಕೈಯಿಂದ ಐತ್ತಿ ಹಿಡಿದು ಒಂದು ಕ್ಷಣದೊಳಗೇ ೪ ತುಂಡು ಮಾಡಿದನು. ಕೂಡಲೆ ಸಖೀ ಜನರೊಂದಿಗೆ ಬಂದು ಸೀತಾದೇವಿಯು ಶ್ರೀರಾಮನ ಕೊರಳಿಗೆ ನವರತ್ನದ ಮಾಲೆ ಹಾಕಿದಳು, ಆಗ್ಗೆ ದೇವತೆಗಳು ಪುಷ್ಪ ವೃಷ್ಟ ಮಾಡಿ ಸ್ತೋತ್ರ ಮಾಡುತ್ತಿರಲು ದೇವದುಂದುಭಿಗಳು ಮೊಳಗಿದವು ಎಲ್ಲೆಲ್ಲಿಯೂ ಜೈ ಜೈ ಕಾರವ್ವು ಪ್ರತಿಧ್ವನಿಸಿತು, ಇದಾದ ಬಳಿಕ ಜನಕರಾಜನು ಅಯ್ಯೋಧ್ಯೆಯಿಂದ ದಶರಥರಾಜನನ್ನು ಪರಿವಾರ ಸಹಿತ ಕರೆಸಿಕೊಂಡು ವೈಭ್ವದಿಂದ ಮದುವೆ ಮಾಡಿ ನಾನಾ ತರದ ವಸ್ತ್ರ ಆಭರಣಗಳನ್ನು ಕೊಟ್ಟು ಬೀಳ್ಕೊಟ್ಟನು, ಮಾರ್ಗದಲ್ಲಿ ಪರಶುರಾಮನು ತನ್ನಲ್ಲಿ ಆಶ್ರಯ ಪಡೆದ ದೈತ್ಯನ ಸಂಹರಿಸುವದಕ್ಕಾಗಿ ರಾಮನೊಂದಗೆ ಯುದ್ಧ ಮಾಡಿ ಸೋತಂತೆ, ನಟಿಸಿ ಆದೈತ್ಯನಿಗೆ ಹೇಳಿದನು ನನಗೆ ಈ ರಾಮನಿಂದ ಸೋಲು ಖಂಡಿತ ನೀನೇ ನಿನ್ನನ್ನು ರಕ್ಷಿಸಿಕೋ ನನ್ನನ್ನಾಶ್ರಯಿಸಿದ ನಿನಗೆ ಕ್ಷೇಮವಿಲ್ಲ, ಅಂತಾ ಹೇಳಲು ಅವನು ಹೊರಗೆ ಹೊರಟನು ಕೂಡಲೇ ಆ ರಾಮಬಾಣವು ಅವನನ್ನು ಸಂಹರಿಸಿತು.

ಆಮೇಲೆ ಅಯೋಧ್ಯೆಯಲ್ಲಿ ಸಕಲ ಪ್ರಜಾ ಜನರೂ ತಮ್ಮ ತಮ್ಮ ಗ್ರಹಗಳನ್ನು ಸಕಲ ಬೀದಿಗಳನ್ನು ಅಲಂಕರಿಸಿ ಶ್ರಿಂಗರಿಸಿದರು . ಒಳ್ಳೇ ಉತ್ಸವದಿಂದ ಮದುವೆ ನಿಬ್ಬಣದವರನ್ನು ಮದುಮಕ್ಕಳನ್ನು ಎದುರುಗೊಂಡು ವೈಭವದಿಂದ ಉಡುಗೊರೆ ಕೊಡುತ್ತಾ ಕಣ್ಣು ಮನ, ದಣಿಯದೇ ನೋಡುತ್ತಾ ತಮ್ಮನ್ನು ತಾವೇ ಮರೆಯುವಂತೆ ನೋಡುತ್ತಿರುವ ಪ್ರಜರನ್ನು ಶ್ರೀರಾಮ ಸೀತೆಯರು ಕರುಣಾದೃಷ್ಠಿಯಿಂದ ಹಸನ್ಮಖರಾಗಿ ನೋಡುತ್ತಾ ಸರ್ವರನ್ನು ಆನಂದ ಪಡಿಸಿದರು.

ಆಗ ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕದ ವಿಷಯವನ್ನು ತಿಳಿಸುತ್ತಾ ನನ್ನ ಸಮಾನ ಪುಣ್ಯ ಯಾರಿಗಿದೆ ? ನಿನ್ನಂಥ ಪುತ್ರನನ್ನು ಪಡೆದ ನಾನೇ ಧನ್ಯನು, ನಾಳೆನಿನಗೆ ಪಟ್ಟಾಭಿಷೇಕಮಾಡಿ ಕೃತಾರ್ಥನಾಗುವೆನು ಅಂತಾ ಹೇಳುತ್ತಾ ತನ್ನ ಆನಂದವನ್ನು ವ್ಯಕ್ತ ಪಡಿಸಿದನು.

ವೃದ್ಧನಾದ ದಶರಥನು ತನ್ನ ಮೂರು ಪತ್ನಿಯರಿಗೆ ಶ್ರೀರಾಮನಿಗೆ ಪಟ್ಟಗಟ್ಟುವ ತನ್ನ ಮನೋಗತವನ್ನು ಒಳ್ಳೇ ಉತ್ಸಾಹದಿಂದ ತಿಳಿಸುತ್ತಿರಲು ಕೌಸಲ್ಯೆ ಆನಂದ ಪಡುವದಂತೂ ಸಹಜವೇ ಸರಿ. ಸವತಿಯರು ಕೂಡಾ ಪರಮಾನನಂದದಿಂದ ಆತುರರಾಗಿ ಮಹಾರಾಜಾ ನಾಳೇ ಈ ಮಂಗಲ ಶುಭ ಕಾರ್ಯ ನೆರವೇರಿಸೆಂದು ಪೋತ್ಸಾಹಿಸಿದರು. ಕೈಕೇಯಿಯು ಆನಂದ ಭರದಲ್ಲಿ ರಾಜನ ಪಾದಗಳಲ್ಲಿ ತಲೆಯನ್ನಿಟ್ಟು ಆನಂದ ಭಾಷ್ಷಗಳಿಂದ ಅವನ ಪಾದ ತೊಳೆದಳು. ಪತ್ನಿಯರ ಒಪ್ಪಿಗೆ ಮನ: ಪೂರ್ವಕ ವಾದದ್ದರಿಂದ ಯಾವ ಆತಂಕ ಅಡ್ಡೀ ಇಲ್ಲದೇ ಮರುದಿನವೇ ಪಟ್ಟಾಭಿಷೇಕವೆಂದು ಡಂಗುರ ಸಾರಿಸಿ, ಹಗಲು ರಾತ್ರಿ ಎನ್ನದೇ ಪಟ್ಟಣ ಶೃಂಗಾರ ಎಲ್ಲೆಲ್ಲಿಯಾ ಈ ಆನಂದ ವಾರ್ತೆ. ಇದಲ್ಲವನ್ನು ಕೈಕೇಯಿಯು ದಾಸಿ ಮಂಥರಿಯು ಕೇಳಿದೊಡನೇ ಓಡಿ ಓಡಿ ಬಂದು ಕೈಕೇಯಿಗೆ ದುರ್ಬೋಧೆ ನಡಿಸಿದಳು, ರಾಮನಪಟ್ಟಾಭಿಷೇಕವಂತೆ, ಕೇಳಿಲ್ಲವೇನೇ ? ಅಂದಳು, ಆಗ ಕೈಕೇಯಿಯು ಅಹುದು, ಅದಕ್ಕಾಗಿಯೇ ಹಚ್ಚಿಗೆ ಉತ್ಸಾಹವಾಗಿದೆ ಎನ್ನಲು, ಎಂಥಾ ಮಬ್ಬು ನೀನು,ಹುಚ್ಚುತನ ನಿನ್ನದು, ಈ ಮಾತು ತಿಳಿದಕೊಡಲೇ ಮುಂದಿನ ನಿನ್ನ ಭವಿಷ್ಯ ಕಣ್ನಿಗೆ ಕಟ್ಟಿದಂತಾಗಿ ನಿನಗೆ ಬುದ್ಧೀಹೇಳಿ ನಿನ್ನ ಮತ್ತು ನಿನ್ನ ಮಗನ ದಾಸತ್ವ ಬರುವದನ್ನು ತಪ್ಪಿಸುವ ಸಲುವಾಗಿ ಧಾವಿಸಿ ಬಂದಿದ್ದೇನೆ ಕೇಳು, ರಾಮನು ರಾಜ, ನೀನು ಮಗನು ಅವನ ಸೇವಕ ಪ್ರಜಾ. ಕೌಸಲ್ಯೆ ರಾಜ ಮಾತೆ, ನೀನು ದೂತ ಮಾತಾ ಚನ್ನಾಗಿ ವಿಚಾರಿಸು, ನಾನು ನಿನ್ನ ಹಿತ ಚಿಂತಕಳೆಂದೇ ನಿನ್ನ ತವರಿನವಳೆಂದೇ ನಿನ್ನ ಯೋಗಕ್ಷೇಮ ನೋಡಿಕೊಂಡಿರಲು ನಿನ್ನ ಜೊತೆಗೆ ಬಂದಿದ್ದೇನೆ, ಮುಂದಿನ ವಿಚಾರ ಮಾಡದೇ ದುಡುಕಿ ಒಪ್ಪಿಗೆ ಕೊಟ್ಟಿರುವಿ, ಈಗಲಾದರೂ ಕೈಮೀರಿಲ್ಲ. ಈ ಕಾರ್ಯಕ್ಕೆ ನಿನು ಅಡ್ಡೀ ಮಾಡು ಎಂದು ಇನ್ನೂ ಅನೇಕ ರೀತಿಯಿಂದ ಬೋಧಿಸುತ್ತಿರಲು. ಹಾಗಾದರೆ ಈಗ ಹೇಗೆ ಮಾಡಲಿ ? ಉಪಾಯ ಸೂಚಿಸೆನ್ನಲು ಮಹಾರಾಣಿ ನಿನಗೆ ಎರಡು ವರ ಕೊಡುವೆನೆಂದು ರಾಜನು ಹೇಳಿದ್ದು, ಈಗ ೧ವರ ದಿಂದ ೧೪ ವರ್ಷ ರಾಮನಿಗೆ ವನವಾಸ, ೨ನೇದ್ದರಿಂದ ಭರತನಿಗೆ ರಾಜ್ಯ ಸಿಂಹಾಸನ, ಆಂತಾ ಕೇಳಿ ಬಿಡು, ಅವನು ಒಪ್ಪದೇ ನಿನ್ನ ಮನ ಒಲಿಸಲು ಪ್ರಯತ್ನ ಪಡಬಹುದು. ನೀನು ಮಾತ್ರ ಈ ಮಾತಿನಿಂದ ಕದಲಬೇಡ ಎಚ್ಚರಿಕೆ.

ಹೀಗೆ ಹೇಳಿ ಅವಳ ಅಮೃತ ತುಂಬಿದ ಹೃದಯ ಬರಿದು ಮಾಡಿ ಹಾಲಾ ಹಲ ವಿಷ ತುಂಬಿ ರಾಜ ಬರುವ ಸಮಯವರಿತು ಮರೆ ಅದಳು. ಇತ್ತು ಮಹಾರಾಜನು ಪ್ರೀತಿಯ ಪತ್ನಿ ಕೈಕೇಯಿಯನ್ನು ಸ್ವತ: ಸಭೆಗೆ ಕರೆದುಕೊಂಡು ಹೋಗ ಬೇಕೆಂದು ಸಂಭ್ರಮದಿಂದ ಬಂದು ನೋಡುವಷ್ಟರಲ್ಲಿ ಕೋಪಾಗಾರದಲ್ಲಿ ಕೂದಲಗಳನ್ನು ಕೆದರಿ ಕೊಂಡು ಎಲ್ಲ ಆಭರಣಗಳನ್ನು ಬಿಚ್ಚಿ ಈಡಾಡಿ ಕಣ್ಣು ತುಂಬ ನೀರು, ಮಖ ಕೆಂಪಗೆ ಮಾಡಿಕೊಂಡು ಆಕ್ರೋಶದಿಂದ ಬಿದ್ದಿರುವಳನ್ನು ಕಂಡು ಗಾಬರಿಗೊಂಡು ಪ್ರೀಯೇ-ನಿನ್ನೆದಿನ ಎಷ್ಟೋ ಹುರುಪಿನಿಂದ ತೀವ್ರ ಪಟ್ಟಾಭಿಷೇಕವಾಗಬೇಕೆಂದು ಆಗ್ರಹ ಮಾಡಿದವಳು ಈ ದಿನ ಏಕಾಏಕಿ ಏನಾಯಿತು ? ಉತ್ಸವದಲ್ಲಿ ಯಾವದೂ ಕಡಿಮೆಯಾಗದಂತೆ ಟೊಂಕಕಟ್ಟಿ ನಿಂತಿದ್ದಾರೆ. ನಿನಗೇನು ಬೇಕು ಹೇಳು ನಿನ್ನ ಮನೋರಥ ಪೂರ್ಣಮಾಡೇ ತೀರುವೆನು ಅಂದನು. ಕೇಳಿ ಅದನ್ನು ಇದು ನಿಜವೇ ? ಎಂದು ಕೇಳಿದಳು. ಅದಕ್ಕೆ ದಶರಥನು ಶಪಥ ಮಾಡಿಹೇಳುವೆ ನಿಜ ಆಂದನು. ಆಗ್ಗೆ ಅವಳು ನಿನು ೨ ವರ ಕೊಡುವೆನೆಂದಿದ್ದಿ ಅವುಗಳನ್ನು ಈಗೇ ಕೊಡಬೇಕು ಅನ್ನಲು; ಕೊಟ್ಟೆ ಕೇಳಿಕೋ ಅಂದನು. ಆಗ ೧ನೇ ವರ ರಾಮನಿಗೆ ೧೪ ವರ್ಷ ವನವಾಸ ೨ನೇದ್ದು ಭರತನಿಗೆ ರಾಜ್ಯ ಆಂತಾ ಇಷ್ಟುಅವಳ ಬಾಯಿಂದ ಬರುವದೇ ತಡ ರಾಜನು ಎಚ್ಚರ ತಪ್ಪಿ ಮೂರ್ಛಿತನಾದನು. ಕೂಡಲೇ ಸಕಲ ಮಂತ್ರಿ ಪರಿವಾರವೆಲ್ಲ ನೆರೆದು ಏನುಪಾಯ ಮಾಡಿದರೂ ಮತ್ತೆ ಮತ್ತೆ ಮೂರ್ಛ ಬಂದು ಮಲಗೇ ಇದ್ದದ್ದು ನೋಡಿ, ರಾಮನು ಕಾರಣವನ್ನು ನೆರೆದವರಿಂದ ಕೇಳಿ ತಿಳಿದುಕೊಂಡನು.ದಶರಥನು ಕೈಕೇಯಿಗೆ ಕೊಟ್ಟ ವರಗಳನ್ನು ಈಡೇರಿಸಲು ಕೈಕೇಯಿಯ ಇಚ್ಚಯಂತೆ ೧೪ ವರ್ಷ ವನವಾಸಕ್ಕೆ ಹೊರಡಲು ತನ್ನ ಆಭರಣ, ರಾಜ ವಸ್ತ್ರಗಳನ್ನು ಕಳಚಿ ನಾರು ಮಡಿಯವನ್ನು ಉಟ್ಟುಕೊಂಡನು ಅವನೊಂದಿಗೆ ಅವನ ಪತ್ನಿ ಸೀತೆ ಹಾಗೂ ತಮ್ಮ ಲಕ್ಷಣರೂ ಸಿದ್ಧರಾದರೂ. ಇಡೀ ಅಯೋಧ್ಯೆಯ ಪ್ರಜರೆಲ್ಲರೂ ಮತ್ತು ಪಶು ಪಕ್ಞಿಗಳು ಕೂಡಾ ಆಹಾರ ತ್ಯಜಿಸಿ ಕಣ್ಣೀರು ಸುರಿಸಿದರು. ಎಲ್ಲೆಲ್ಲಿಯೂ ಇಂದು ತಾಸಿನ ಮೊದಲು ಎಷ್ಟೊಂದು ವೈಭವ ಎಷ್ಟು ಸಡಗರ, ಸರ್ವಾಲಂಕಾರ ಭೂಷಿತರಾದ ಸುವಾಸಿನಿಯರು ಅವರ ಕೈಯ್ಯಲ್ಲಿರುವ ನವರತ್ನದಾರತಿಯಿಂದ ಪ್ರಜ್ವಲಿಸುವ ದೀಫಗಳು, ಸುವರ್ಣ ಕುಂಭ ತುಂಬಿದಗಂಗೋದಕ ಪರಿಮಳೋದಕದಿಂದಲೂ ಕಂಠಕ್ಕೆ ಸುತ್ತಿದ ಮಂದಾರ ಪಾರಿಜಾತದ ಹಾರಗಳಿಂದಲೂ ಶೋಭಾಯಮಾನವಾಗಿದ್ದು ನಾನಾತರದ ವಾದ್ಯ ವೈಭವ, ನರ್ತಕಿಯರ ನಾಟ್ಯ, ವೇದ ವಿದರಾದ ಬ್ರಾಹ್ಮಣರ ವೇದ ಘೋಷಗಳಿಂದ ದಿಮಿ ದುಮಿ ಅನ್ನುವಂಥಾದ್ದೆಲ್ಲ ಒಂದೇ ಕ್ಷಣದಲ್ಲಿ ಮಾಯವಾಗಿ, ಅಯ್ಯೋ ಶ್ರೀರಾಮಚಂದ್ರ, ನಮ್ಮೆಲ್ಲರನ್ನಗಲಿ ವನಕ್ಕೆ ತೆರಳೆದನೇ, ಈ ಪಟ್ಟಣವೇ ಶೂನ್ಯ ವಾಯಿತು. ನಮ್ಮೆಲ್ಲರಿಗೂ ಈ ಅಯೋಧ್ಯ ಅರಣ್ಯವೇ ಆಯಿತೆಂದು ಗೋಳಿಡುವವರ ಧ್ವನಿಯೇ ಎಲ್ಲ ಕಡೆಗೂ ಪಸರಿಸಿತು. ತಾಯಿಯರಿಬ್ಬರಂತೂ ಒಂದು ಕಡೆ ಮಕ್ಕಳನ್ನಗಲಿದ ಶೋಕ ಇನ್ನೊಂದು ಕಡೆಗೆ ಪತಿಯು ಅಡಕೊತ್ತಿನಲ್ಲ ಸಿಕ್ಕಂತಾಗಿ ಸಂಕಟಪಡುತ್ತಿರುವದನ್ನು ನೋಡುತ್ತಾ ಮೂಕ ವೇದನೆ ಪಡುತ್ತಿರಲು ದಶರಥನು ರಾಮನ ವಿಯೋಗ ಸಹಿಸದೆ ಪ್ರಾಣ ಬಿಟ್ಟನು.

ಈ ವಾರ್ತೆ ಕೇಳಿ ಭರತನು ತನ್ನ ಅಜ್ಜನ ಮನೆಗೆ ಹೋದವನುಬಂದನು. ಪ್ರಜಾಜನರ ಬಾಯಿಯಿಂದ ಎಲ್ಲವನ್ನೂ ತಿಳಿದುಕೊಂಡು ಭರತನು ತಾಯಿಗೆ ನಾನಾತರದಿಂದ ಬೈಯುತ್ತಾ ಮಿತಿ ಮೀರಿದ ಕೋಪದಿಂದಲೂ ದು:ಖದಿಂದಲೂ ನಾನೂ ಅರಣ್ಯಕ್ಕೇ ಹೋಗುವೆನು ನೀನೇ ರಾಜ್ಯವಾಳು. ನಿಶ್ಚಿಂತೆಯಿಂದಿರು ಎಂದು ಅನೇಕ ಬಿರುನುಡಿ ನುಡಿಯುತ್ತಿರಲು ಶತೃಘ್ನನು ಕೈಕೇಯಿಯ ಶಿರಚ್ಛೇದ ಮಾಡಲುದ್ಯುಕ್ತನಾದನು. ಅದನ್ನು ನೋಡಿ ಭರತನು ಅಯ್ಯೋ ಇದನ್ನೇನು ಮಾಡುತ್ತಿರುವಿ ? ಹೀಗೆ ಮಾಡಿದರೆ ಶ್ರೀರಾಮನು ನಮ್ಮ ಮುಖಾವಲೋಕನ ಕೂಡಾ ಮಾಡಲಾರ. ಮಾತೃಘಾತಕರೆಂದು ನಮ್ಮನ್ನು ಸಂಪೂರ್ಣ ತ್ಯಜಿಸುವನು ಅಂತಾ ಹೇಳಿ ವಶಿಷ್ಠರ ನೇತೃತ್ವದಲ್ಲಿ ನಾವು ಹೋಗಿ ಅಣ್ಣನನ್ನು ಪ್ರಾರ್ಥಿಸಿ ಕರತಂದು ಅವನನ್ನೇ ಪಟ್ಟಗಟ್ಟಿ ಸಂತೋಷದಿಂದಿರುವದೊಂದೇ ಮಾರ್ಗ, ಜೇಷ್ಠ ಭ್ರಾತೃನನ್ನಗಲಿಸಿದ, ಪತಿ ಪ್ರಾಣ ಘಾತಕಿಯ ಮುಖವನ್ನೇ ನೋಡಲಾರೆ ಎಂದು ಹೇಳಿ ಇಬ್ಬರೂ ವಶಿಷ್ಠರೊಂದಿಗೆ ಆರಣ್ಯಕ್ಕೆ ಹೊರಡುವದಾಗಿ ತಾಯಂದಿರಿಗೆ ಎಲ್ಲ ವಿಚಾರ ಹೇಳಲು ಅವರೂ ಮತ್ತು ಪಶ್ಚಾತ್ತಾಪಯುಕ್ತಳಾದ ಕೈಕೇಯಿಯ ವನಕ್ಕೆ ಹೊರಟರು.

ಇತ್ತ ಶ್ರೀರಾಮನು ಗಂಗಾ ನದಿಯನ್ನು ದಾಟಿಸಲು ನಾವಿಕನನ್ನು ಕರೆದನು, ಅವನು ಸುಜೀವಿಯೇ ಇದ್ದು, ಸ್ವಾಮೀ, ನೀವೂ, ನಾವು, ಒಂದೇ ಧಂಧೇ ಮಾಡುವವರಲ್ಲವೇ? ನಾವು ಕೇವಲ ನದಿ ದಾಟಿಸವೆವು. ಅದು ಕೂಡಾ ನಿಮ್ಮ ಅನುಗ್ರಹದಿಂದಲೇ, ತಾವು ಹುಟ್ಟು ಸಾವು , ಎಂಬ ಥೆರೆಗಳಿರುವ ಭವ ಸಮುದ್ರವನ್ನೇ ದಾಟಿಸುವ ನಾವಿಕರಲ್ಲವೇ: ಅಗತ್ಯವಾಗಿ ಕುಳಿತುಕೊಳ್ಳಿರಿ. ಎಂದು ಸೀತಾ ಲಕ್ಷ್ಮಣರನ್ನು ಮೊದಲು ಕುಳ್ಳಿಸಿರಿ ಸ್ವಾಮೀ ನಿಲ್ಲಿರಿ; ನಿಮ್ಮ ಪಾದ ಮೊದಲು ತೊಳೆಯುವೆನು. ಯಾಕೆಂದರೆ ನಿಮ್ಮ ಪಾದ ಧೂಳಿಯಿಂದ ಶಿಲೆಯು ಹೆಣ್ಣಾದಳೆಂದು ಕೇಳಿದ್ದೇನೆ; ನನ್ನ ನಾವೆಯೂ ಅದರಂತೆ ಹೆಣ್ಣಾದರೆ ನನ್ನ ಧಂದೆಯನ್ನು ಹೇಗೆ ನಡೆಸಲಿ? ಮತ್ತು ಆ ಹೆಣ್ಣನ್ನು ಹೇಗೆ ಸಾಕಲಿ ? ಅಂತಾ ಹೇಳಿ ಚೇಷ್ಟೆ ಮಾಡಿ ಪಾದ ಪೂಜಾ ಮಾಡಿದನಂತೆ.

ಗಂಗಾದಾಟಿ ಋಷಿಗಳಾಶ್ರಮಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿರಲು ಸ್ವಲ್ಪೇ ಸಮಯದಲ್ಲಿ ಭರತ, ಶತೃಘ್ನರು ರಾಜಮರ್ಯಾದೆಗಳೊಂದಿಗೆ ಪ್ರಜರು ರಾಮನನ್ನು ಕರೆಯಲು ಪರಿವಾರ ಸಹಿತವಾಗಿ ಬರುತ್ತಿರುವದನ್ನು ಮೊದಲು ಲಕ್ಷ್ಮಣನು ನೋಡಿ ಸಂತಾಪಗೊಂಡು ಅಣ್ಣಾ ನಮ್ಮನ್ನು ಜೀವದಿಂದಿಡಬಾರದೆಂಬ ಉದ್ದೇಶದಿಂದಲೇ ಭರತನು ಸೈನ್ಯ ತರುತ್ತಿರುವನೆಂದು ತೋರುತ್ತಿದೆ. ಅದೋ ನೋಡು, ಅನ್ನಲು ರಾಮನು ತಮ್ಮಾ ಅವನು ಸಮೀಪಕ್ಕೆ ಬರಲಿ ನೋಡೋಣ. ಅವನು ಅಂಥಹ ಮೂಢನಲ್ಲ. ಅಂತಾ ಹೇಳುತ್ತಿರಲು, ಭರತನು ರಾಮನನ್ನು ದೂರದಿಂದ ಕಾಣುತ್ತಲೇ ಸಾಷ್ಟಂಗವಾಗಿ ನಮಸ್ಕರಿಸುತ್ತ ಓಡಿ ಬಂದು ಅಣ್ಣಾ ಅಂತಾ ಕೂಗುತ್ತಲೇ ಬಂದು ಪಾದಗಳ ಮೇಲೆ ಉರುಳಾಡಿ ಬೇಡಿಕೊಳ್ಳತೊಡಗಿದನು. ಅಣ್ಣಾ ತಿರಗಿ ಬಂದುಬಿಡು. ನೀನಿಲ್ಲದ ಶೂನ್ಯವಾದ ಅಯೋಧ್ಯಗೊಂಡಾರಣ್ಯವೆನಿಸಿದೆ. ಪ್ರಜ ಜನರೂ ಪಟ್ಟಣತ್ಯಾಗ ಮಾಡಿ ಅರಣ್ಯ ಸೇರುವೆವೆಂದೇ ಇಷ್ಟಲ್ಲ ಜನರೂ ಬಂದಿದ್ದಾರೆ. ನಮ್ಮಲ್ಲರ ಮೊರೆ ಕೇಳಿ ಬಂದು ರಾಜ್ಯವಾಳೆಂದು ಪರಿಪರಿಯಾಗಿ ಪ್ರಾರ್ಥಿಸುವದನ್ನೂ, ತಾಯಿಂದಿರೂ, ವಶಿಷ್ಠರೂ ಹೇಳುವದನ್ನು ಕೇಳಿ ಸಮಾದಾನ ಹೇಳಿದನು. ಪಿತ್ರ ವಚನ ಪಾಲಿಸದವನು ಪುತ್ರನೇ ಅಲ್ಲ. ನಾನು ವಚನ ಭ್ರಷ್ಟನಾಗಿ, ನನ್ನ ತಂದೆ ಪಾಪ ಭೂಗಿಸಲು ಬಿಡಲಾರೆ; 14 ವರ್ಪ ಮುಗಿದಾಕ್ಷಣವೇ ಬಂದು ರಾಜ್ಯಪಟ್ಟ ಸ್ವೀಕರಿಸುವೆನು. ಅಲ್ಲಿಯವರೆಗೆ ತಮ್ಮಾ ನೀನೇ ರಾಜ್ಯವಾಳು, ಅನ್ನಲು, ಭರತನು ಅಣ್ಣಾ ನಿನ್ನ ಪಾದುಕೆಯನ್ನು ಕೊಡು ಅವುಗಳನ್ನು ಸಿಂಹಾಸನದಲ್ಲಿಟ್ಟು ನಾನು ನಂದಿಗ್ರಾಮದಲ್ಲಿದ್ದೇ ರಾಜ್ಯಭಾರ ನಡೆಸುವ ವ್ಯವಸ್ಥೆ ಮಾಡುವೆನು. ಆದರೆ ಅವಧಿ ಮುಗಿದ ಕೂಡಲೇ ನೀನು ಬರುವದು ತಡವಾದರೆ ನಾನು ಅಗ್ನಿಪ್ರವೇಶವನ್ನೇ ಮಾಡುವೆನು ಅಂತಾ ಶಪಥ ಮಾಡಿ ಶ್ರೀರಾಮನ ಪಾದುಕೆಯನ್ನು ತಲೆಯ ಮೇಲಿಟ್ಟುಕೊಂಡು ಕಣ್ಣೀರು ಸುರಿಸುತ್ತಾ ಹೊರಟು ಹೋಗಲು, ಲಷ್ಮಣನು ಅವನ ಪ್ರೀತಿ ಭಕ್ತಿ ನೋಡಿ ರಾಮನಿಗೆ ನಮಸ್ಕರಿಸಿ ನಾನೆಂಥ ಭ್ರಾತೃ ದ್ರೋಹಿಯಾಗುತ್ತದ್ದೆ ಎಂದು ಪಶ್ಚಾತ್ತಾಪ ಪಟ್ಟನು.

ಶ್ರೀರಾಮನ ಅವತಾರವಾದದ್ದು ಎರಡು ಕಾರಣಗಳಿಂದ, ದುಷ್ಟರ ಸಂಹಾರ, ಶಿಷ್ಟರ ರಕ್ಷಣ. ಇನ್ನೊಂದು ಆದರ್ಶನಾಗಿ ನಡೆ ನುಡಿಗಳ ಶಿಕ್ಷಣ ಕೊಡಲು ತಾನೇ ಅದರೆಂತೆ ನಡೆದು ಪಾಠ ಕಲಿಸುವದು, ಹರಿಯಂತೇ ವಾಯು ದೇವರು ಕೂಡಾ ಆದರ್ಶ ಸೇವಕನೆನಿಸಿದ್ದು ರಮಾ ನಾರಾಯಣರಿಗೆಂದಿಗೂ ಮಹಾಪ್ರಳಯದಲ್ಲೂ ವಿಯೋಗವೆಂಬುವ ಸೋಕೇ ಇಲ್ಲ. ಇದರಂತೇ ವಾಯುವಿಗೆ ಅಜ್ಞಾನವೇ ಇಲ್ಲ ಹರಿವಾಯುಗಳು ಲೋಕೆಶಿಕ್ಷಣಾರ್ಥವಾಗಿಯೂ, ರಕ್ಷಣಾರ್ಥವಾಗಿಯೂ ಆಡಿದ ನಾಟಕವೇ ಇದೆಲ್ಲ, ದುಷ್ಟನಿಗ್ರಹಕ್ಕಾಗಿಯೇ ವನವಾಸ, ಬಾಲತ್ವದಲ್ಲಿ ತಾಟಕಿ ಮೊದಲಾದಯಜ್ಞ ಕಂಟಕ ದೈತ್ಯರ ಕೊಂದಿದ್ದು, ಈಗ ವನ ವನ ಸಂಚಾರಿಸುತ್ತಾ ದೈತ್ಯರ ಬೇಟಿ ನಡೆಯಿತು. ಖರ, ವಿರಾಧ, ಮೊದಲಾದವರನ್ನೆಲ್ಲ ಕೊಂದನು. ಮಾರೀಚನು ತಪ್ಪಿಸಿಕೊಂಡು ಪಲಾಯನ ಮಾಡಿದನು ಮದುವೆ ಆಗೆಂದು ಪೀಡಿಸುತ್ತಿರುವ ಶೂರ್ಪನಖಿಯ ಕಿವಿ ಮೂಗು ಕತ್ತರಿಸಿದರು. ಮುಂದೆ ಅವಳು ಸಿಟ್ಟಿನಿಂದ ತನ್ನ ಅಣ್ಣನಾದ ರಾನಿಗೆ ಸೀತೆಯ ರೂಪ ಲಾವಣ್ಯವನ್ನು ವರ್ಣಿಸುವದನ್ನು ಕೇಳಿ ಕಾಮಾಂಧನಾದ ರಾವಣನು ಉಪಾಯ ಹೂಡಿ ಮಾರೀಚನಿಗೆ ಸುವರ್ಣ ಬಣ್ಣದ ಜಿಂಕೆ ಯಾಗಿ ಸೀತೆಯ ಮನ ಸೆಳೆಯಲು ಹೇಳಿದನು. ಅವನು ರಾಮ ಬಾಣದ ರುಚಿ ಕಂಡಿದ್ದು, ಇವನಿಗೆ ಈ ಸಾಹಸಬೇಡವೆಂದು ಬುದ್ದಿ ಹೇಳಲು ಸಿಟ್ಟಿನಿಂದ ಖಡ್ಗ ಮೇಲೆತ್ತಿದನು. ಆಗ್ಗೆ ಮಾರೀಚನು ಒಪ್ಪಿಕೊಂಡು ಸೀತಾದೇವಿಯ ಮುಂದೆ ಜಿಂಕೆಯಾಗಿ ಜಿಗಿದಾಡುತ್ತಿರಲು ಅವಳು ಅದು ತನಗೆ ಬೇಕೆಂದು ರಾಮನಿಗೆ ಕೇಳಿಕೊಂಡಳು. ಅವಳ ಅಪೇಕ್ಷೆಯಂತೆ ಅದನ್ನು ಹಿಡಿಯಲು ಅದು ಕೈಗೆ ಸಿಗದೇ ಓಡಿ, ಓಡಿ ರಾಮನನ್ನು ದೂರ ಓಡಿಸಿಕೊಂಡು ಹೋಗಲು ಅವನು ಇದು ರಾಕ್ಷಸರ ಮಾಯಾಮೃಗವೆಂದು ಬಾಣಬಿಟ್ಟನು. ಕೂಡಲೇ ಮಾರೀಚನು ವೇದನೆ ತಾಳಲಾರದೇ ಪ್ರಾಣೋತ್ಕ್ರಮಣ ಸಮಯದಲ್ಲಿಯೂ ಕೂಡಾ ರಾವಣನಿಗೆ ಸಹಾಯವೆಂದು ಹಾ ಲಕ್ಷ್ಮಣ, ಹಾಸೀತೆ, ಅಂತಾ ರಾಮನ ಸ್ವರದಿಂದಲೇ ಒದರಿ ಪ್ರಾಣಬಿಟ್ಟುನು. ಇತ್ತ ಪರ್ಣಕುಟೀರದಲ್ಲಿ ಸೀತೆಯ ರಕ್ಷಣೆಗೆಂದು ತಮ್ಮನಿಗೊಪ್ಪಿಸಿ ರಾಮನು ಹೋಗಿದ್ದ. ಈ ಸ್ವರ ಕೇಳುತ್ತಲೇ ಸೀತೆಯು ರಾಮನಿಗೇನಾಯಿತೋ ಎಂದು ಈಗಿಂದೀಗ ನೀನು ಹೋಗೆಂದು ಮೈದನನಿಗೆ ಬಲವಂತ ಮಾಡುತ್ತಿರಲು, ತಾಯೇ, ಅವನಿಗ್ಯಾರ್ಯಾರೂ ಅಪಾಯ ಮಾಡಲು ಶಕ್ಯವಿಲ್ಲ. ಚಿಂತಿಸದಿರು; ಏಕಾಂಗಿಯಾದ ನಿನ್ನನ್ನು ಬಿಟ್ಟು ಹೋಗಬಾರದೆಂದು ಅಣ್ಣನ ಆಜ್ಞೆ ಆಗಿದೆ ಅನ್ನಲು, ಒಂದು ಕೆಡಕು ಶಬ್ದ ನುಡಿದಳು. ರಾಮನಿಗೆ ಹಾನಿಯಾದರೆ ನನ್ನೊಡನಿರುವ ಚ್ಛೆ ಇದೆಯೇ? ಅಂತಾ. ಈ ಮಾತನ್ನು ಕೇಳಿ ರಾಮ ರಾಮ ಅಂತಾ ಕಿವಿ ಮುಚ್ಚಿಕೊಂಡು ಅನಿವಾರ್ಯವಾಗಿ ಬಾಗಿಲ ಮುಂದೆ 3 ಗೆರೆ ಹಾಕಿ ಅತ್ತಿಗೆ, ಎಂಥ ಪ್ರಸಂಗದಲ್ಲಿಯೂ ನಾವು ಬರುವವರೆಗೆ ಈ ಗೆರೆದಾಟಿ ಹೊರಗೆ ಕಾಲಿರಿಸಬೇಡ ರೆಂದು ಹೇಳಿ ಹೊರಟು ಹೋದನು. ಅದನ್ನೇ ಕಾಯುತ್ತಿದ್ದ ರಾವಣನು ಕಪಟ ಸಾಧು ವೇದಿಂದ ಭಿಕ್ಷ ಬೇಡಿದನು. ಅವಳು ಬೊಗಸಿ ಧಾನ್ಯ ತಂದು ಒಳಬಾಗಿಲಲ್ಲೇನಿಂತು ಕರೆದಳು. ಆ ಗೆರೆ , ವಂಚಕರಿಗೆ ದಾಟಲು ಆಗುತ್ತಿರಲಿಲ್ಲ. ಕಾರಣ ಅವನು ಗೆರೆ 3 ದಾಟಿ ಬಂದು ಹಾಕಿದರೇನೇ ಭಿಕ್ಷೆ ಸ್ವೀಕರಿಸುವೆನೆಂದು ಹಟ ಹಿಡಿಯಲು ಬಿಕ್ಷುಕನನ್ನು ಹಾಗೇ ಕಳಿಸುವದು ವಿಹಿತವಲ್ಲವೆಂದು ಬಗೆದು ತೀವ್ರ ತಿರುಗಿದರಾಯಿತೆಂದು ಗೆರೆ ದಾಟಿ ಕಾಲಿಡುವದೇ ತಡ ಅವಳನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಹೊರಟೇಬಿಟ್ಟನು.ಅಣ್ಣ ತಮ್ಮರು ಆಶ್ರಮಕ್ಕೆ ಬಂದು ನೋಡಲು ಸೀತೆನ್ನು ಕಾಣಲಿಲ್ಲ ಅನೇಕ ಸ್ಥಳಗಳಲ್ಲಿ ಹುಡುಕುತ್ತಾ ನಡೆದರು, ದಣಿದು ಕಿಷ್ಕಿಂಧೆಯ ಸಮೀಪದ ವನದಲ್ಲಿ ವೃಕ್ಷದ ನೆರಳಿಗೆ ವಿಶ್ರಾಂತಿ ಪಡೆಯುತ್ತಿದ್ದರು.

ಅಲ್ಲಿ ಸುಗ್ರೀವನು ಅಣ್ಣನಿಂದ ಪರಾಜಿತನಾಗಿ ರಾಜ್ಯವನ್ನೂ ಹೆಂಡತಿಯನ್ನೂ ಕಳೆದು ಕೊಂಡು ಹನುಮಂತನನ್ನು ಕೆಲವು ಕಪಿಗಳನ್ನು ಕೂಡಿಕೊಂಡು ವಾಸಿಸುತ್ತಿದ್ದನು. ಅವನು ತೇಜಸ್ವಿಯಾದ ಅಯುಧಧಾರಿಗಳಾದ ವರಿಬ್ಬರನ್ನೂ ನೋಡಿ ವಾಲಿಯು ತನ್ನನ್ನೋಡಿಸಿದಂತೆ ಇವರೂ ಯಾಕೋ ತನ್ನನ್ನು ಸ್ಥಳಾಂತರಿಸಲು ಬಂದಿರುವರೇನೋ ಎಂದು ಮಂತ್ರಿಯಾದ ಮಾರುತಿಗೆ ಹೇಳುತ್ತಿರಲು ಚಾಣಾಕ್ಷನಾದ ಮಾರುತಿಯು ಇವರನ್ನು ಕಂಡು ವಿಚಾರಿಸಿ ಬರುವೆನೆಂದು ಹೊರಟನು. ಇವನ ಕಣ್ಣಿಗೆ ಲಕ್ಷ್ಮಣನ ತೊಡಗೆ ತಲೆ ಇಟ್ಟು ಮಲಗಿರುವ ರಾಮನು ಶೇಷ ಶಾಯಿ ನಾರಾಯಣನೆಂದೇ ಕಾಣಿಸಿತು. ಅಷ್ಟರೊಳಗೇ ರಾಮನು ದೃಷ್ಟಿ ತಮ್ಮ ಕಡೆಗೇ ಬರುತ್ತರುವ ಹನುಮಂತನ ಕಡೆಗೆ ಬಿತ್ತು . ಆಗ್ಗೆ ತಮ್ಮ, ಕಪಿ ಯಾರಿರಬಹುದು ?ಉಳಿದ ವನಚರರಂತೆ ಇಲ್ಲ . ಅವನ ಆಭರಣಗಳು ಯಜ್ಞೋಪವೀತ ಕರ್ಣ ಕುಂಡಲ, ಕಿರೀಟಗಳನ್ನು ನೋಡಿದೆಯಾ? ಎಷ್ಟು ಅಂದವಾಗಿವೆ ಅಂತಾ ಹೇಳುತ್ತಿರುವದನ್ನು ಕೇಳಿ ಹನುಮಂತನು ತಾಯಿ ಹೇಳಿದ್ದು ಇಂದು ನಿಜವಾಯಿತೆಂದು ಆನಂದಭರಿತನಾಗಿ ಸ್ವಾಮಿ ದೊರಕಿದನೆಂದು ಫಲ ಪುಷ್ಟಾದಿಗಳನ್ನು ತೆಗೆದುಕೊಂಡು ಬಂದು ಸಮರ್ಪಿಸಿ ದಂಡಾಕಾರವಾಗಿ ಪಾದದಡಿಗೆ ಬಿದ್ದಿರುವ ಮಾರುತಿಯನ್ನು ಮೇಲೆತ್ತಿ ಕುಳ್ಳಿರಿಸಿ ಒಬ್ಬರಿಗೊಬ್ಬರ ಪರಿಚಯವಾದ ನಂತರ ಸುಗ್ರೀವನನ್ನು ಭೆಟ್ಟಿಮಾಡಿಸಿ ರಾಮರ ವಾರ್ತೆ ಅವನಿಗೆ ಹೇಳಿ, ಅವನ ಹೆಂಡತಿಯನ್ನೂ ರಾಜ್ಯವನ್ನೂ, ವಾಲಿಯು ಭೋಗಿಸುವದನ್ನೂ ಹೇಳಿ ಇಬ್ಬರ ಸಖ್ಯ ಮಾಡಿಸಿದನು ಆಮೇಲೆ ಸುಗ್ರೀವನಿಗೆ ವಾಲಿಯನ್ನು ಕೆಣಕಲು ಅಧೈರ್ಯವಾದದ್ದು ನೋಡಿ ದುಂದುಭಿಯ ದೇಹ ೧೦/೨೦ ಯೋಜನ ತುಂಬೆ ಬಿದ್ದಿದ್ದನ್ನು ರಾಮನು ಉಂಗುಷ್ಟದಿಂದ ಚಿಮ್ಮಿ ಹಾರಿಸಿದನು, ತಾಲೆ. ವೃಕ್ಷ ಒಂದೇ ಬಾಣದಿಂದ ತುಂಡರಿಸಿದನು. ಆಮೇಲೆ ಇವನು ವಾಲಿಯನ್ನು ಯುದ್ದಕ್ಕೆ ಕರೆದು ಯುದ್ಧವಾಡುತ್ತಿರಲು, ಸುಗ್ರಿವನನ್ನು ಅರೆಜೀವನನ್ನಾಗಿಸಿ ವಾಲಿಯು ತನ್ನ ಗ್ರಹಕ್ಕೆ ಹೋದನು, ಆಗ್ಗೆ ಉಪಚಾರದ ನಂತರ ಚೀತರಿಸಿಕೊಂಡ ಸುಗ್ರೀವನು ರಾಮನಿಗೆ ಹೇಳದನು. ಅವನ ಎದುರಿಗೆ ನಿಂತಯೋಧರ ಶಕ್ತಿ ಅವನಿಗೆ ಬರುವಂತೆ ವರ ಪಡೆದಿದ್ದಾನೆ. ಆ ಕಾರಣ ಇನ್ನು ನಾನಂತೂ ಅವನನ್ನು

ಕೆಣಕಲಾರೆ ಅನ್ನಲು ಈ ಸಾರೆ ಕೆಣಕಿ ಕರೆ; ಇಂದಿನ ಯುದ್ಧದಲ್ಲಿ ನಿಮ್ಮಿಬ್ಬರದೂ ಒಂದೇ ರೂಪ ಕಾಣಿಸಿ ಯಾರನ್ನು ಕೊಲ್ಲುವದು ತಿಳಿಲಿಲ್ಲ. ಈ ಸಾರೆ ನೀನು ಹಾರ ಹಾಕಿಕೋ ನಾನು ಅವನ ದೃಷ್ಟಿಗೇ ಬೀಳದೆ ಮರೆಯಾಗಿ ನಿಂತು ಬಾಣ ಬಿಡುವೆ, ದೈರ್ಯದಿಂದ ಯುದ್ಧಕ್ಕೆ ಕರೆ. ಅನ್ನಲು ಮತ್ತೆ ಸುರುವಾಯಿತು.ಈ ಸಾರೆ ಗಿಡದ ಹಿಂದೆ ನಿಂತು ರಾಮ ಬಾಣ ಬಿಟ್ಟನು. ಕೂಡಲೇ ವಾಲಿಯು ನೆಲಕ್ಕುರುಳಿದನು. ರಾಮಬಾಣಕ್ಕೆ ಯಾರು ಇದಿರು? ವಾಲಿಗೆ ಇದು ರಾಮ ಬಾಣವೆಂದು ತಿಳಿದು ಹೇರಾಮ, ಬಂದು ನೀನು ಅಂತ್ಯ ಕಾಲಕ್ಕೆ ದರ್ಶನ ಕೊಡು, ಮರೆಗೆ ನಿಂತೇಕೆ ಬಾಣಬಿಟ್ಟಿ? ಅನ್ನಲು ಅವನಿಗೆ ನೀನು ಮಾಡಿದ ಅನ್ಯಾಯದ ಪಾಪಕ್ಕೆ ಪ್ರಾಯಶ್ಚಿತವಾಬೇಕೆಂದೇ ನಾನು ನಿನ್ನನ್ನು ಕೊಲ್ಲವ ವಚನ ಕೊಟ್ಟಿದ್ದೆ, ಎದುರಿಗೆ ಬಂದಿದ್ದರೆ ನೀನೂ ಭಕ್ತನಾದ ಪ್ರಯುಕ್ತ ನನ್ನ ಪಾದಕ್ಕೆ ಬೀಳುತ್ತಿದ್ದಿ. ಶರಣಾಗತರನ್ನು ಕೊಲ್ಲುವದು ಕ್ಷತ್ರಿಯ ಧರ್ಮಕ್ಕೆ ವಿರುದ್ಧ, ಅದಕ್ಕಾಗಿ ಮರೆಗೆ ನನ್ನ ದುಷ್ಕ್ರತ್ಯ ಮರೆತು ಬಿಡು ಅಂಗದನನ್ನು ನೋಡಿ ರಕ್ಷಿಸೆಂದು ಹೇಳಲು ಸುಗ್ರೀವನು ಅಣ್ಣನ ಮುಖಕ್ಕೆ ಮುಖ ಹಚ್ಚಿ ಶೋಕ ಮಾಡುವದನ್ನು ಎಷ್ಟೇ ದ್ವೇಷ ಮಾಡಿದರೂ ಒಬ್ಬಗೆ ಮರಣ ಸಂಭವಿಸಿದಾಗೆ ಇನ್ನೂಬ್ಬನಿಗೂ ದೂ:ಖವಾಗುವದೆಂಬುದಕ್ಕೆ ಮೊದಲ ದಿನ ಗುರುತುಸಿಗಲಿಲ್ಲವೆಂಬ ನೆವದಿಂದ ಕೊಲ್ಲ ಲಿಲ್ಲವೆಂದು ಹೇಳಿ ಸಮಾಧಾನ ಮಾಡಿದನು.

ಆಮೇಲೆ ಸುಗ್ರೀವನಿಗೆ ರಾಜ್ಯಾಭಿಷೇಕ ಅಂಗದನಿಗೆ ಯುವರಾಜ ಪಟ್ಟಕಟ್ಟಿದರು. ಮಳೆಗಾಲ ಪ್ರಾಪ್ತವಾದದ್ದರಿಂದ ಮುಂದೆ ತಿಂಗಳ ನಂತರ ಸೀತಾ ಶೋಧನೆಗೆ ರಾಮನ ಹೇಳಿಕೆಯ ಪ್ರಕಾರ ಮೂರು ದಿಕ್ಕುಗಳಿಗೆ ಬೇರೆ ಬೇರೆ ಕಪಿಗಳನ್ನು ಕಳಿಸಿ ದಕ್ಷಿಣ ದಿಕ್ಕಿಗೆ ಹನುಮಂತ ಜಾಂಬುವಂತ ಅಂಗದನೇ ಮೊದಲಾದ ಕಪಿ ಶ್ರೇಷ್ಠರನ್ನು ಹನುಮಂತನ ವಶಮಾಡಿ ಸುಗ್ರೀವನು ತಿಂಗಳೊಳಗೆ ಶೋಧಿಸಿಕೊಂಡೆ ಬರಬೇಕೆಂದು ಕಟ್ಟಪ್ಪಣೆ ಮಾಡಿ ಕಳಿಸಿದನು. ಹೊರಡುವಾಗ್ಗೆ ಹನುಮಂತನನ್ನು ಕರೆದು ಶ್ರೀರಾಮನು ತನ್ನ ಮುದ್ರೆಯುಂಗುರವನ್ನು ಕೊಟ್ಟು ಅವಳಲ್ಲಿದ್ದ ಚೂಡಾ ಮಣಿಯನ್ನು ತೆಗೆದುಕೊಂಡು ಬಾ. ಎಂದು ಆಶೀರ್ವಾದ ಮಾಡಿ ಬೀಳ್ಕೊಟ್ಟನು. ತನ್ನ ತಂದೆಯ ಗೆಳೆಯನಾದ ಜಟಾಯು ರಾವಣನೊಂದಿಗೆ ಯುದ್ದ ಮಾಡಿ ಸೀತೆಯನ್ನು ಬಿಡಿಸಲು ಸಾಹಸ ಮಾಡಿದರೂ ಕಡೆಗೆ ಅವನಿಂದ ಅರೆಜೀವವಾಗಿ ಬಿದ್ದಿದ್ದು, ರಾವಣ ಲಂಕೆಗೆ ಅವಳನ್ನು ವೈದ ವಾರ್ತೆಹೇಳಿಪ್ರಾಣ ಬಿಟ್ಟತು, ಅದರ ಔರ್ಧಕ್ರಿಯಾ ಮಾಡಿ ಬಂದೆವೆಂಬುವದನ್ನೂ ಹೇಳಿ ಆ ಲಂಕೆಗೆ ಹೋಗುವ ಸಮರ್ಥನೆಂದು ನಿನಗೇ ಹೇಳಿದ್ದೇನೆಂದು ಗುಟ್ಟಾಗಿ ಇನ್ನೂ ಕೆಲವು ಮಾತುಗಳನ್ನು ಹೇಳಿ ಕಳಿಸಿದನು, ಎಲ್ಲ ಕಪಿ ಶ್ರೇಷ್ಟರೂ ಹುಡುಕುತ್ತ ಲಂಕೆಗೆ ಯಾವ ಮಾರ್ಗ ತಿಳಿಯದೇ ತಿರುಗುತ್ತಿರಲು ಸಂಪಾತಿ ಪಕ್ಷಿಯು ಲಂಕೆಯ ಮಾರ್ಗ ಹೇಳಿತು ಆಮೇಲೆ ಸಮುದ್ರ ನೋಡಿ ಇಂಥ ರೌದ್ರಾಕಾರದ ಸಮುದ್ರ ೧೦೦ ಯೋಜನ ಹಾರುವಂಥ ಧೀರರು ಯಾರಿರುವರೆಂದೂ ಇನ್ನು ಮೂರೇ ದಿನ ಅವಧಿಯೊಳಗೇ ಸೀತಾ ಶೋಧ ಆಗದಿದ್ದರೆ ಸುಗ್ರೀವನಿಂದ ತಲೆ ವಡೆಸಿಕೊಂಡು ಮರಣಿಸಬೇಕಾಗುವದೆಂದೂ ಚಿಂತಿತರಾಗಿ ಅನಶನ ವೃತ ಕೈಕೊಂಡರು. ಆಗ್ಗೆ ಜಾಂಬುವಂತನು ಸಭೆ ಮಾಡಿ ಯಾರ್ಯಾರು ಎಷ್ಟೆಷ್ಟು ಹಾರುವಿರಿ? ಅಂತಾ ಪ್ರತಿಯೊಂದು ಗುಂಪಿನವರಿಗೂ ಕೇಳುತ್ತಿರಲು ೧೦ ಯೋಜನದಿಂದ ೮೦ರವರೆಗೆ ಹಾರುವರೆಂಬುವದನ್ನು ತಿಳಿದು; ಸತ್ವಃ ನಾನು ವೃದ್ಧನಾದರೂ ೯೦ ಯೋಜನ ಹಾರುವೆ ಅಂಗದ ೧೦೦ ಯೋಜನ ಹಾರುವನು, ಆದರೆ ತಿರುಗಿ ಬರುವದು, ಮತ್ತು ಅಲ್ಲಿ 3 ಯೋಜನ ದೊಡ್ಡ ಪಟ್ಟಣದಲ್ಲಿ ತಿರುಗಾಡಿ ಹುಡುಕುವದು ಆಗದು.

ಇನ್ನು ಆಮರಣ ಉಪವಾಸ ಒಂದೇ ಹಾದಿ, ಅನ್ನುವಷ್ಟರಲ್ಲಿ ಓಹೋ ನೆನಪಾಯಿತು. ಮುಖ್ಯ ಹನುಮಂತನನ್ನೇ ಮರೆತಿರುವೆವಲ್ಲ. ಅವನನ್ನು ಮರೆತವರಿಗೆ ಮರಣವೇಗತಿ, ಎಂದು ಹೇಳಿ, ಒಂದು ಬಂಡೆಯ ಮೇಲೆ ರಾಮಧ್ಯಾನಾಸಕ್ತನಾಗಿ ಕುಳಿತಿರುವ ಮಾರುತಿಯನ್ನು ಕಂಡು ವಾಯು ಪುತ್ರನೆ ಕೇಳು ನಾವೆಲ್ಲ ಷ್ಟು ವೇಳೆ ವ್ಯರ್ಥವಾಗಿ ವಿಚಾರದಲ್ಲೇ ಕಳೆದೆವು. ಸುದೈವದಿಂದ ಇದೀಗ ನಿನ್ನ ನೆನಪಾಯಿತು. ಒಬ್ಬ ಸೂರ್ಯನಿಂದ ಕಮಲಗಳು ಅರಳುವವಲ್ಲದೇ ನೂರಾರು ಪತಂಗಗಳಿಂದ ಕಮಲ ಅರಳುವದುಂಟೇ? ಕೋಟ್ಯಾಂತರ ನಕ್ಷತ್ರಗಳಿದ್ದರೂ ಸಮುದ್ರ ಉಕ್ಕೇರದು. ಒಬ್ಬ ಚಂದ್ರನಿಂದಲೇ ಸಾದ್ಯ ಸ್ವಾತಿ ನೀರಿನಿಂದಲೇ ಮುತ್ತು ಹುಟ್ಟುವದು; ಉಳಿದ ಎಷ್ಟೊಂದು ನೀರಿನಿಂದ ಆದೀತೆ? ನರಹರಿಯಿಂದಲೇ ಮೋಕ್ಷ ಸಾಮ್ರಾಜ್ಯ ದೊರೆಯುವದು ಹೊರತು 33 ಕೋಟಿ ದೇವತೆಗಳೂ ಸೇರಿದರೂ ಮೋಕ್ಷಕೊಡುವ ಅಧಿಕಾರ ಯಾರಿಗೆದೆ ?ಅದರಂತೆ ಈ ರೌದ್ರಾಕಾರದ ಸಮುದ್ರಹಾರಿ ಸೀತಾ ಸಂದೇಶ ಶೋಧ, ಎಲ್ಲವೂ ನಿನ್ನೂಬ್ಬನಿಂದಲೇ ಸಾದ್ಯ. ಸ್ವಾಮಿ ಕಾರ್ಯ ಧುರಂದರನಾದ ನೀನೇ ಸಮರ್ಥನು ಎಂದು ಹೇಳುತ್ತಿರಲು, ಮನದೊಳಗೆ ಶ್ರೀರಾಮನಿಗೆ ಮಂದಿಸಿ ಜಾಂಬವಂತನಿಗೆ ನಮಸ್ಕಾರ ಮಾಡಿ ಕಣ್ಮುಚ್ಚಿ ಧ್ಯಾನಿಸುತ್ತ ಹೆಜ್ಜೆಗೊಂದು ಯೋಜನ ದಂತೆ ಬೆಳೆಯುತ್ತ ನೋಡ ನೋಡುವಷ್ಟರಲ್ಲಿ ನಕ್ಷತ್ರಗಳು ಅವನು ತಲೆಗೆ ಮುಡಿಸಿದ ಬಿಡಿ ಮಲ್ಲಿಗೆ ಯಂತೆ ಕಂಡು ಕಪಿಗಳೆಲ್ಲ ದಂಗು ಬಡಿದು ನೋಡುತ್ತಿರಲು ತುದುಗಾಲೂ ಕೈಗಳೂ ನೆಲಕ್ಕೆ ಊರಿ ಭೂಮಿಗೆ ದೇಹ ತೂಗಾಡಿಸುತ್ತಾ ಹಣೆ ಹುಬ್ಬುಗಳನ್ನು ಕುಣಿಸುತ್ತಾ ಶ್ವಾಸ ನಿರೋಧ ಮಾಡಿ ಜೈ ಶ್ರೀರಾಮ ಎನ್ನುತ್ತ ನಿರಾಯಾಸವಾಗಿ ಹಾರಿದನು, ಸಮುದ್ರದ ಸಮೀಪದ ಪರ್ವತ ಏರಿ ಜೋರು ಕೊಟ್ಟು ಹಾರಿದ್ದಕ್ಕೆ ಪರ್ವತ ಪಾತಾಳಕ್ಕಿಳಿಯಿತಂತೆ, ಗರುಡನೇ ನಾಚಿಕೊಂಡು ಮರೆ ಆದನಂತೆ ನಾನೇ ಹಾರುವದರಲ್ಲಿ ಶ್ರೇಷ್ಟನೆಂದಿದ್ದೆ ತಪ್ಪಾಯಿತೆಂದು ಕ್ಷಮೆ ಬೇಡಿದನಂತೆ.

ಮಾರ್ಗದಲ್ಲಿ ಸುರಸಿ ಅಂತಾ ರಾಕ್ಷಸಿ ಅಡ್ಡ ಬಂದುದನ್ನು ಕಂಡು ಗುದ್ದಿನಿಂದ ಅವಳನ್ನು ಸಂಹರಿಸಿ, ಹಾಗೇ ಸಾಗುವಾಗ್ಗೆ ಸಿಂಹಿಕೆ ಅಂತಾ ಅವಳು ನೆರಳು ನುಂಗಿದರೆ ಸಾಕು ಆ ವ್ಯಕ್ತಿ ಅವಳ ಹೊಟ್ಟೆಯೊಳಗೇ ಹೋಗುವಂಥ ವರ ಪಡೆದಿದ್ದಳು. ಹನುಮಂತನ ನೆರಳು ನುಂಗಿದಳು ಕೊಡಲೇ ಅವಳು ಹೊಟ್ಟೆಯೊಳಗೆ ಪರ್ವತಾಕಾರವಾಗಿ ಬೆಳೆದು ಅವಳ ಹೊಟ್ಟೆ ಹರಿದು ಮತ್ತೆ ಮುಂದೆ ಸಾಗುತ್ತಿರಲು ಮೈನಾಕ ಪರ್ವತ ಸಮುದ್ರದಿಂದ ಮೇಲೆ ಬಂದು ಆತಿಥ್ಯ ಸ್ವೀಕರಿಸು ನಿನ್ನ ತಂದೆ ನನಗೆ ಜೀವದಾನ ಮಾಡಿದ್ದಾನೆಂದು, ಕಾರ್ಯಾನಂತರ ಬರುವೆನೆಂದು ಹೇಳಿ ಹಾಗೆ ಹಾರುತ್ತಾ ಸುವೇಲ ರ್ವತಕ್ಕೆ ಬಂದು ನಿಂತನು.

ಹಿಂದೆ ರ್ವತಗಳಿಗೆಲ್ಲ ರೆಕ್ಕಗಳಿದ್ದು ಅವು ಬೇಕಾದಲ್ಲಿ ಹಾರಿ ಬಂದು ಬೇಕಾದಲ್ಲಿ ಕೂಡುತ್ತಿರುದರಿಂದ ಅನೇಕ ಜೀವಿಗಳು ಮರಣೆಸುತ್ತಿರಲು ಇಂದ್ರನು ವಜ್ರದಿಂದ ಎಲ್ಲ ಪರ್ವತಗಳ ರೆಕ್ಕೆಗಳನ್ನೂ ಕತ್ತರಿಸುವಾಗ ಈ ಪರ್ವತ ವಾಯು ದೇವರಿಗೆ ಶರಣು ಬರಲು ಅವರು ಈ ಸಮುದ್ರ ಮಧ್ಯದಲ್ಲಿರಿಸಿದ್ದರಂತೆ ಆಮೇಲೆ ೧/೨ ನಿಮಿಷ ಆ ಲಂಕಾ ಪಟ್ಟಣವನ್ನು

ಸುತ್ತೂ ಕಡೆಗೆ ನೋಡುತ್ತಾ ಅದರ ವೈಭವವನ್ನು ಕೊಂಡಾಡಿದನು, ಕತ್ತಲೆಯಾದ ಮೇಲೆ ಸೂಕ್ಷ್ಮರೂಪ ಧರಿಸಿ ಲಂಕಾ ಪಟ್ಟಣಕ್ಕೆ ಹೊರಟಾಗ್ಗೆ ಕಂದಕಗಳು ಸಮುದ್ರದಂತೆ ಇದ್ದವುಗಳನ್ನು ಸಣ್ಣ ಗಟಾರ ದಾಟಿದಂತೆ ಜಿಗಿಯುತ್ತಾ ಮುಗಿಲ ಮುಟ್ಟುವಂಥ ಕೋಟೆಗೋಡೆಗಳಿದ್ದು ನೂರು ಯೋಜನ ಸಮುದ್ರ ಹಾರಿದವನಿಗೇನು ಇದು ದೊಡ್ಡದೇ ? (ಪರ್ವತ ಎತ್ತಿ ಬೀಸಾಡುವಂಥವನಿ ಕಡ್ಡಿಎತ್ತುವಂತೆ ) , ನಿರಾಯಾಸವಾಗಿ ಲಂಕಾ ಮುಟ್ಟಿದನು.

ಅಲ್ಲಿ ಕಾವಲಿಗಾಗಿ ಇದ್ದ ಲಂಕಿಣಿಯನ್ನು ನಿರ್ವಿಣ್ಯ ಮಾಡಿ ಪುರ ಪ್ರವೇಶ ಮಾಡಿ ಸಂದು ಗೊಂದು ಬಿಡದೇ ಒಂದೂ ಮನೆ, ದೇವಾಲಯ ಯಾವದನ್ನೂ ಬಿಡದೇ ಇರುವೆ ಪ್ರವೇಶಿಸವಂಥಾ ಸ್ಥಳಗಳನ್ನೂ ಬಿಡದೇ ೩ ಸಾರೆ ಸುತ್ತಾಡಿ ಹುಡುಕಿ ಬೇಸತ್ತು ಕಡೆಗೆ ಬಾಲಕ್ಕೆ ಈ ಪಟ್ಟಣವನ್ನೇ ಕಿತ್ತಲು ಆಜ್ಞೆ ಮಾಡುವೆನು, ಆಮೇಲೆ ಇದನ್ನು ವೈದು ಶ್ರೀರಾಮನ ಮುಂದಿಡುವನು ಎಂದು ವಿಚಾರಿಸುತ್ತಿರಲು ಬಾಲಕ್ಕೆ ಆಜ್ಞೆ ಮಾಡಬೇಡ, ಸ್ವಲ್ಪ ತಾಳು ಇದೀಗ ನಿನಗೆ ಸೀತಾ ಮಾತೆ ಗೋಚರಿಸುವಳೆಂದು ಆಕಾಶವಾಣಿ ಆಯಿತು , ಮುಂದೆ ಸ್ವಲ್ಪೇ ವೇಳಗೆ ದಕ್ಷಿಣ ದಿಕ್ಕಿನಿಂದ ಸುವಾಸನೆ ಬರುವದನ್ನು ಕಂಡು ಆದೇ ಮಾರ್ಗವಾಗಿ ಹೋಗಲು ಅಶೋಕ ವನವೆಂಬುದನ್ನು ನೋಡಿದನು, ಅಲ್ಲಿಯೂ ಕೂಡಾ ಪ್ರತಿಯೊಂದು ಕಡೆಗೆ ಕಣ್ಮನ ಸೆಳೆಯುವಂಥಾ ವೃಕ್ಷದ ಉಯ್ಯಾಲೆಗಳು ಕ್ರೀಡಾ ಮಂಟಪಗಳೂ ಇದ್ದು ಒಂದನ್ನೂ ಬಿಡದೆ ಹೊಕ್ಕು ಹೊಕ್ಕು ಹುಡಕುತ್ತಾ ತಿರುಗುತ್ತಿರಲು ಒಂದು ಕಡೆಗೆ ೧ಶಿಂಶುಪ ವೃಕ್ಷದ ಕೆಳಗೆ ಸೀತಾಕೃತಿಯನ್ನು ನೋಡಿದನು. ಮರದ ಮೇಲೆ ಕುಳಿತು ಅವಳ ಇರುವಿಕೆಯನ್ನು ನೋಡುತ್ತಾ ಮನದೊಳಗೆ ವಂದಿಸಿದನು, ಮೋಡ ಆವರಿಸಿದ ಸೂರ್ಯನಂತೆ ರಾಹು ಆಕ್ರಮಿಸಿದ ಚಂದ್ರನಂತೆ ಆ ದೈತ್ಯ ಸ್ತ್ರೀಯರ ಮಧ್ಯದಲಿ ಅತ್ತಿತ್ತ ನೋಡದೇ ಕೆಳಗೆ ಮುಖ ಮಾಡಿ ಮೂಗಿನ ತುದಿಗೆ ದೃಷ್ಟಿಯನ್ನಿರಿಸಿ ಏಕ ಚಿತ್ತದಿಂದ ರಾಮಧ್ಯಾನ ಮಾಡುತ್ತಿರುವಂಥಾ ಮತ್ತು ಆನ್ನಾಹಾರಂಗಳನ್ನೂ ನಿದ್ರೆಯನ್ನೂ ತೊರೆದು ಕೃಶಳಾಗಿದ್ದು ಮಲಿನವಾದ ವಸ್ತ್ರಧರಿಸಿದಂಥಾ ಸೀತಾ ಮಾತೆಯನ್ನು ನೋಡಿ ಕಳವಳ ಗೊಂಡನು, ಅವಳ ಸುತ್ತುಗಟ್ಟಿ ದೈತ್ಯ ಸ್ತ್ರೀಯರು ಕುಳಿತು ಅವಳಿಗೆ ರಾವಣನನ್ನೇ ಲಗ್ನವಾಗೆಂದು ಮೇಲಿಂದ ಮೇಲೆ ತೊಂದರೆ ಕೊಡುವ ಅವರ ಮುಖದ ಕಡೆಗೆ ನೋಡಿದನು. ಹುಲಿ, ಸಿಂಹ ಶರಭ ಕರಡಿಗಳ ಮುಖದವರಿದ್ದು, ಖಡ್ಗ, ತ್ರಶೂಲ, ಕಠಾರಿ ಮುಂತಾದ ಆಯುಧಗಳನ್ನು ಕೈಯ್ಯಲ್ಲಿ ಹಿಡಿದು ಗರ್ಜಿಸುವ ಆ ರಾಕ್ಷಸಿಯರೆಲ್ಲರನ್ನೂ ಈಗಿಂದೀಗೇ ಸಂಹರಿಸಿ ಬಿಡಬೇಕೆನ್ನಿಸಿತು. ಅದೇ ವೇಳೆಗೆ ರಾವಣನ ಸವಾರೀ ಅಲ್ಲಿಗೆ ಬರುವ ಸೂಚನೆ ತಿಳಿದು ಈಗ ಏನೇನು ನಡೆಯುವದೋ ನೋಡಿ ಮುಂದಿನ ವಿಚಾರ, ಮತ್ತು ಮಾತೆಯ ದರ್ಶನ ಮಾಡುವೆನು ಅಂತಾ ವೃಕ್ಷದ ಮೇಲೆ ಕುಳಿತಿದ್ದನು.

ರಾವಣನು ಬಂದು ನಾನಾ ರೀತಿಯಿಂದ ಅವಳ ಮನ ಒಲಿಸಲು ಪ್ರಯತ್ನ ಮಾಡಿದ್ದಾಗಿ ಯಾವದೂ ಫಲಕಾರಿಯಾಗದಿರಲು ಆ ಸುತ್ತಲಿರುವ ಸ್ತ್ರೀಯರಿಗೆ ನೀವೆಲ್ಲ ಅವಳ ಮನ ಒಲಿಸಿರೆಂದು ಹೇಳಿ ಹೊರಟ ಹೋದನು. ಆಮೆಲೆ ರಾಕ್ಷಸಿಯರೆಲ್ಲ ನಿದ್ರೆಗೈಯ್ಯತ್ತಿರಲು ತ್ರಿಜಟಗೆ ಸ್ವಪ್ನವಾಗಿದ್ದನ್ನು ಹೇಳಿದಳು ಅಮ್ಮಾ ನಿನ್ನ ಪತಿಯ ಕ್ಷೇಮ ವಾರ್ತೆ ಕೇಳಿ ನಿನಗೆಏನೋ ಒಂದು ಗುರುತು ಕೊಟ್ಟು ಒಂದು ಕಪಿ ಬಂದು ನಿನ್ನನ್ನೂ ಬಂಧನದಿಂದ ಬಿಡಿಸಲು ರಾಮ ಬರುವನು ಎಂದು ಹೇಳಿತು. ಹೀಗೆ ಕನಸಾಯಿತೆಂದು ಹೇಳಿ ಮತ್ತೆ ಅವಳೂ ನಿದ್ರೆ ಹೋದಳು.

ಆಮೇಲೆ ಹನುಮಂತನು ಮಾತಾಡಲು ಇದೇ ಸಮಯವೆಂದು ಕುಳಿತಲ್ಲಿಂದಲೇ ಕ್ಷೇಮ ಶಬ್ದ ಮೊದಲು ಸುರು ಮಾಡಿ ಕ್ಷೇಮದಿಂದ್ದಾನೆ ರಾಮ, ಅಂತಾ ಹೇಳುತ್ತಾ ಸಮಗ್ರವಾಗಿ ಕ್ಷೀರ ಸಾಗರದಲ್ಲಿದ್ದಾಗಿನಿಂದಾ ಅವತಾರ ಮಾಡಿದ್ದು ಹಿಡಿದು ಸೀತಾಚಿಗರಿ ಅಪೇಕ್ಷಿಸಿದ್ದು, ಆಮೇಲೆ ರಾವಣ ವೈದದ್ದು ಹುಡುಕುತ್ತಾ ಅವರು ಬಂದು ತನ್ನನ್ನು ದೂತತ್ವೇನ ಸ್ವೀಕರಿಸಿದ್ದೂ ಹೇಳಿ ೪ ದಿಕ್ಕಿಗೆ ನಿಮ್ಮನ್ನು ಹುಡುಕಲು ಕಳಿಸಿದ್ದರಿಂದ ಬಂದಿದ್ದೇನೆಂದೂ ಹೇಳಿದನು. ಮೊದಲು ರಾಮ ಅಂತಾ ಉಚ್ಚರಿಸಿದರೆ ಅದೇ ಧ್ಯಾನದಲ್ಲಿದ್ದ ಅವಳು ಕ್ಷೇಮ ಎದೆಯೊಡೆದುಕೊಳ್ಳಬಹುದೆಂದು ಮೊದಲು ಕ್ಷೇಮ ಅನ್ನುವದರೊಳಗೇ ಏನಾಯಿತೋ ರಾಮಗೆ ಅಂತಾ ಉಚ್ಚಾರ ಮಾಡಿದನು. ಆಗ ಸೀತಾದೇವಿಯು ಮುಖ ಮೇಲೆ ಮಾಡಿ ನೋಡಿ ರಾಕ್ಷಸರ ಮಾಯೆಯೋ ಏನೋ ಅನಿಸಿ ಮತ್ತೆ ಸುಮ್ಮನೇ ಕುಳಿತಳು. ಅದನ್ನು ಕಂಡು ಮತ್ತೆ ಹನುಮಂತನೇ, “ ಅಮ್ಮಾ ಸಂಶಯ ಬೇಡ. ನಮ್ಮ ಸ್ವಾಮಿಯ ಪ್ರೀತಿಯ

ಮಹಾರಾಣೀಯೇ ನಿನ್ನಲ್ಲಿರುವ ಕೆಲವು ಲಕ್ಷಣಗಳನ್ನು ನನಗೆ ಹೇಳಿ ಕಳಿಸಿದ್ದಾನೆ. ನಿನ್ನ ಗಲ್ಲದ ಮೇಲೆ ಹಚ್ಚಿ ಬಟ್ಟಿದೆಯಂತೆ ಮತ್ತೆ ಎಡ ತೊಡೆಯ ವಳಭಾಗದಲ್ಲಿ ಚಂದ್ರವರ್ಣದ್ದು ಸುವರ್ಣವರ್ಣದ್ದು, ೨ಮಚ್ಛೆ ರೇಖೆಗಳಿವೆಯಂತೆ. ಇನ್ನೊಂದು ವಿಷಯ ಪಂಚವಟಿಯಲ್ಲಿ ಇದ್ದಾಗ್ಗೆ ಕಾಗಿಯರೂಪದಿಂದ ಒಬ್ಬ ದೈತ್ಯ ಬಂದು ನಿಮ್ಮ ಕುಚಗಳಿಗೆ ಕೊಕ್ಕಿನಿಂದ ಚುಚ್ಚಿ ನೋವು ಮಾಡಿದನಂತೆ; ಆ ಕಾಗಿ ಗುಂಪುಗಳಿಗೆಲ್ಲ ೧ಕಣ್ಣು ಕಳೆದು ಜೀವದಿ ಉಳಿಸಿದ್ದು ಗೌಪ್ಯವಾಗಿ ತಿಳಿಸೆಂದು ಆ ಸ್ವಾಮಿ ಹೇಳಿದ್ದೆಲ್ಲವನ್ನೂ ತಮಗೆ ನಿರೂಪಣೆ ಮಾಡಿದ್ದಾಯಿತು ಇನ್ನಾದರೂ ಸಂಶಯವೇಕಮ್ಮ. “ ಆಗ ಅವಳಿಗೆ ಹಿಂದಿನ ವೃತ್ತಾಂವೆಲ್ಲ ಒಂದೂ ಬಿಡದೇ ಕೇಳಿದ ಮೇಲೆ ಇನ್ನಿಷ್ಟು ಖಾತ್ರಿ ಮಾಡಿಕೊಳ್ಳಲು ಮುಖ ಮೇಲೆತ್ತಿ ಪ್ರಶ್ನೆ ಮಾಡುತ್ತಾ ಕೇಳಿದಳು, “ ವಾನರ ಶ್ರೇಷ್ಟನೇ ನೀನ್ಯಾರು ? ಸದ್ಗುಣಿಗಳ ಶಿರೋಮಣಿಯೇ ನಗೆ ಬಂದ ಕೆಲವು ಸಂಶಯ ಹೋಗಲು ಕೇಳುತ್ತಿದ್ದೇನೆ”

೧. “ ಶ್ರೀರಾಮನು ಮನುಜರೂಪನು ನೀನು ಚಿಕ್ಕ ಮರ್ಕಟ ರೂಪನು ನಿಮ್ಮಿಬ್ಬರಲ್ಲಿ ಮಿತ್ರತ್ವವೆಂದರೆ ವಿತ್ರವೆನಿಸಿದ, ಇದಿರಲಿ, ಅವನು ಸಾರ್ವಭೌಮ ರಾಜನು. ನೀನು ಅಡವಿಯ ವಾಸನ, ನಿಮ್ಮೊಳಗೆ ಸಖ್ಯತ್ವವೆಂದರೆ ಯಾರಿಗೆ ನಿಜವೆನಿಸೀತು ? “

. “ ರೌದ್ರಾಕಾರವಾದ ದುಷ್ಟ ಜಲ ಚರಗಳಿಂದ ತುಂಬಿದ ಸಮುದ್ರವನ್ನು ೧೦೦ ಯೋಜನ ಚಿಕ್ಕ ಕಪಿ ಹಾರಿತು ಅಂದರೆ ಜಗದೊಳಗೆ ಎಂಥವರಿಗೂ ನಂಬಿಕೆ ಬಾರದು. “

೩. “ ಇನ್ನು ಈ ಲಂಕಾ ಪಟ್ಟಣದ ಸೌಂದರ್ಯ ನೋಡಲಿಚ್ಛಿಸಿ ಬಂದು ಹೋಗ ಬೇಕೆಂದರೆ ಬ್ರಹ್ಮ ರುದ್ರೇಂದ್ರರಿಗೂ ಆ ದೈತ್ಯನ ಅನುಮತಿ ಆಜ್ಞೆ ಆಗದೇ ಸಾಧ್ಯವಿಲ್ಲ. ಸೂರ್ಯ-ಚಂದ್ರರ ಕಿರಣಗಳು ಬೀಳುವದಕ್ಕೂ ಸುಂಕ ಕೇಳುವರು,”

. ‘ ನಿನ್ನ ತಂದೆ ತಾಯಿಗಳ್ಯಾರು ? ನಿನಗೆ ಮದುವೆ ಆಗಿದೆಯ?ಮಕ್ಕಳಿರುವರೇ? ಮನುಷ್ಯರಂತೆ ಮಾತಾಡುವಿ ಈ ಎಲ್ಲದಕ್ಕೂ

ಸವಿಸ್ತಾರವಾಗಿ ನಿನ್ನ ವೃತ್ತಾಂತವನ್ನು ನೀನು ಲಂಕಾಪಟ್ಟಣ ಪ್ರವೇಶ ಹೇಗೆ ಮಾಡಿದಿ, ಈ ವನಕ್ಕೆ ಆತಂಕವಿಲ್ಲದೇ ಹೇಗೆ ಬಂದಿ? ಎಲ್ಲ ಹೇಳಿ ನನ್ನ ಸಂಶಯ ಪರಿಹಾರ ಮಾಡೆಂದು ಆಜ್ಞೆ ಮಾಡಿದಳು.

ಅವಳ ಇಚ್ಚೆಯಂತೆ ಆಜ್ಞೆ ಶಿರಸಾವಹಿಸಿ, “ಅಮ್ಮಾ ಕೇಳು ನಾನು ವಾಯುದೇವರ ಪ್ರಸಾದದಿಂದ ಅಂಜನಾದೇವಿಯಲ್ಲಿ ಜನಿಸಿದೆನೆಂದೂ ಹುಟ್ಟುತ್ತಲೇ ಸೂರ್ಯನನ್ನು ಹಣ್ಣೆಂದು ತಿಳಿದು ಮುಗಿಲಿಗೆ ಹಾರಿದ್ದು ದೇವತೆಗಳು ವರವಿತ್ತದ್ದು ಎಲ್ಲವನ್ನೂ ಹೇಳಿ ತನ್ನ ತಾಯಿ ಹೇಳಿದ್ದರಿಂದ ತನ್ನನ್ನು ಅವರು ಆಭರಣ ಸಹ ಗುರುತಿಸಿದ್ದರಿಂದ ಅವರ ದಾಸತ್ವ ಮಿತ್ರತ್ವ ವಹಿಸಿದೆನೆಂದೂ ಕಿಷ್ಕಿಂದೆಯಲ್ಲಿ ತನ್ನ ಮತ್ತು ಶ್ರೀರಾಮರ ಸಮಾಗಮ ವಾಯಿತೆಂದೂ ಸುಗ್ರೀವನ ಸೈನೈವನ್ನು ತನ್ನೊಂದಿಗೆ ಬಂದು ಸಮುದ್ರದಾಚಿಗೆ ನಿರಶನ ವೃತದಿಂದ ಕುಳಿತಿರಲು ತಾನೊಬ್ಬನೇ ಲಂಘಿಸಿ ಬಂದೆನೆಂದೂ ಹೇಳಿ, ಮತ್ತೆ ಲಂಕಾ ಪಟ್ಟಣ ಪ್ರವೇಶಕ್ಕೆ ನಿರ್ಬಂಧ ಮಾಡಿದ ಲಂಕಿಣಿಯನ್ನು ನಿರ್ಮಿಣ್ಯ ಮಾಡಿ ನಿಮ್ಮನ್ನು ಹುಡುಕುವದಕ್ಕಾಗಿ ಅತಿ ಸೂಕ್ಷ್ಮ ದೇಹ ಧರಿಸಿ, ಇರವೆ ಅಡ್ಡಾಡುವಂಥಾ ಸ್ಥಳದಲ್ಲಿ ಕೂಡಾ ಹುಡಕಿದೆ. ೩ಸಾರೆ ಇಡೀಲಂಕಾ ಪಟ್ಟಣವೆಲ್ಲ ಸುತ್ತಾಡಿದ್ದಾಗಿ ಕಡೆಗೆ ಈ ಪಟ್ಟಣವನ್ನೇ ಕಿತ್ತಿ ಶ್ರೀರಾಮನ ಮುಂದೆ ಇಡಬೇಕೆಂದು ನಿಶ್ಚಯಿಸದ ಕೂಡಲೇ ಗಗನ ವಾಣಿಯಿಂದ ನೀವಿರುವ ಸ್ಥಳ ತಿಳಿದು ಬಂದೆ, ನಿಮ್ಮ ರಮಣನ ದಯದಿಂದ ಅಣು ಆಗಲು ಮಹತ್ ಆಗಲು ಬಲ್ಲೆನಮ್ಮಾ ಈ ದೇವ ದೈತ್ಯರುಗಳನ್ನೆಲ್ಲ ಹುಲ್ಲ ಕಡ್ಡಿಗೆ ಸಮವೆಂದು ಅನಿಸುವ ಶಕ್ತಿಕೊಟ್ಟಿರುವ ಅವನ ಕೃಪೆಯಿಂದ ನನಗೆ ಯಾವದೂ ಅಸಾಧ್ಯಾವೆಂಬುವದೇ ಇಲ್ಲ. ಮತ್ತೇನಾದರೂ ಕೇಳುವಂತಿದ್ದರೆ ಅನುಮಾನಿಸದೇ ಕೇಳು ತಾಯೇ.”

ಸೀತಾದೇವಿಯು ಸರ್ವಸಂಶಯನಿವಾರಣೆ ಆದರೂ ಇನ್ನೂ ಒಂದು ವಿಷಯ ಕೇಳೋಣವೆಂದು ಶ್ರೀರಾಮನ ರೂಪಗುಣ ಲಕ್ಷ್ಮಣಗಳನ್ನು ತಿಳಿದಿದ್ದರೆ ಹೇಳು ಅನ್ನಲು. “ಅಮ್ಮಾ ಆತನ ಗುಣ ರೂಪಗಳನ್ನು ವರ್ಣಿಸುವದು ೨ ಸಾವಿರ ನಾಲಿಗೆಯಿಂದ ಹೇಳಲು ಆದಿಶೇಷನಿಗೂ ಆಗದು.ಅನಂತ ಕಲ್ಯಾಣಗುಣ ಪೂರ್ಣನಾದವನನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಕೂಡಾ ತಿಳಿಯದು. ವೇದಾದಿಗಳೂ ವರ್ಣಿಸಿ ದಣಿಯವು ಅಷ್ಟೇಕೆ ಸ್ವತ: ಸದಾ ಅವನನ್ನಗಲದೇ ಪ್ರಳಯದಲ್ಲೂ ಜೊತೆಯಾಗಿರುವ ನಿತ್ಯಾವಿಯೋಗಿನಿ ಯಾಗಿರುವ ನಿಮಗೇ ಅವನ ರೂಪ ಗುಣಗಳ ಅಂತ ಹತ್ತಲಾರದ ಅನಂತನನು ಮರ್ಕಟನಾದ ನಾನೇನು ತಿಳಿಯ ಬಲ್ಲೇ? ಇದ್ದರೂ ತಿಳಿದಷ್ಟು ವರ್ಣಿಸುವೆ ನೆಂದು ಸಾಧ್ಯ ವಿದ್ದಷ್ಟು ಅವನ ರೂಪಗುಣಗಳನ್ನು ವರ್ಣಿಸಿದ್ದಾಗಿ ಅವಳ ಮನೋಗತ ತಿಳಿದನು.

ಆಮೇಲೆ ವೃಕ್ಷಾಗ್ರದಿಂದಳಿದು ಪ್ರದಕ್ಷಿಣೆ, ನಮಸ್ಕಾರ ಮಾಡಿ ತನ್ನ ಬಲಹಸ್ಥ ಮುಷ್ಟಿಯಲ್ಲಿ ಹಿಡಿದಿದ್ದ ರಾಮ ಮುದ್ರಕೆ ಉಂಗುರ ಕೊಟ್ಟರೆ ಅವಳ ಇಚ್ಚೆ ಪೂರೈಸುವದೆಂದು ನಿಶ್ಚಯಿಸಿ ಸ್ವತ: ತಾನು ಆ ಉಂಗುರವನ್ನು ಕಣ್ಣಿಗೊತ್ತಿಕೊಡು ಸೀತಾದೇವಿಗೆ ಭಕ್ತಿಯಿಂದ ಸಮರ್ಪಿಸಿದನು.

ಆಗ್ಗೆ ಅವಳು ಪರಮಾನಂದದಿಂದ ಕೈನೀಡಿ ಸ್ವೀಕರಿಸಿದಾಕ್ಷಣ ಶ್ರೀರಾಮನನ್ನೇ ಕಂಡಂತೆ ಸಂತೋಷ ಉಕ್ಕಿ ಆನಂದ ಭಾಷ್ಟಗಳುದುರುತ್ತಿರಲು ಕಣ್ಣಿಗೊತ್ತಿಕೊಂಡು ತಲೆಯ ಮೇಲಿಟ್ಟುಕೊಳ್ಳುವದು, ಚುಂಬಿಸುವದು, ಗಲ್ಲ ಕ್ಕೊತ್ತಿಕೊಳ್ಳವದು, ಅನೇಕ ತರದಿಂದ ಆದರಿಸಿ ರಾಮನೆದುರು ಸಂಭಾಷಿಸಿದಂತೇ ಮಾತಾಡುವದು. ( ಶ್ರೀರಾಮನೇ ಈ ಮುದ್ರಿಕೆ) ಅಂದರೆ ಪರಮಾತ್ಮನ ರೂಪವೇ ಅವನ ಆಭರಣ. ಶಂಖ, ಚಕ್ರಾದಿ ಆಯುಧಗಳು ಎಲ್ಲವೂ ಭಗವದ್ರೂಪಗಳೇ ಹೀಗಾಗಿ ಅವಳು ಆ ಉಂಗುರ ಹಿಡಿದು ನೋಡುತ್ತಾ ತೃಪ್ತಿ ಆಗುವವರೆಗೂ ಮಾತಾಡಿ ನಂತರ ಹನುಮಂತನ ಮುಖ ನೋಡುತ್ತಾ “ ಇತ್ತ ಬಾರಯ್ಯಾ ಕಂದಾ ನನಗೆ ಎಂಥಾ ಮಹಿಮೋಪೇತವಾದ ಸ್ವಾಮಿಯ ಉಂಗುರ ಕೊಟ್ಟಿರುವಿ, ಶ್ರೀ ಜಯ, ಕಾಂತಿ ಸುಜ್ಞಾನ, ವಿಜ್ಞಾನ, ಯಶ, ದೀರ್ಘಾಯು, ಭಕ್ತಿ ಮೊದಲಾದ ಸಕಲ ಸೌಭಾಗ್ಯ ಕೊಟ್ಟು ಕಡೆಗೆ ಮೋಕ್ಷ ಸಾಮ್ರಾಜ್ಯ ಕೊಡುವಂಥ ಉಂಗುರವ ಕೊಟ್ಟು ನನ್ನನ್ನು ಸಂತೋಷ ಸಾಗರದಲ್ಲಿ ಈಜಾಡಿಸಿದಿ, ನಿನ್ನನ್ನು ಎಂದೆಂದಿಗೂ ಮರೆಯಲಾರೆ ಕೇಳು ಮಗನೇ ರಾವಣನೆಂಬ ಸೂರ್ಯಕಿರಣಗಳಿಂದ ಒಣಗಿದ ನನ್ನ ಮನವೆಂಬ ನೈಲೆ ಕಮಲಕ್ಕೆ ಚಂದ್ರನನ್ನು ತಂದಿತ್ತು ಸಂತೈಸಿದಂತೆ, ಇದರಂತೆ ತಾವರೆ ಕಮಲ ಆ ದೈತ್ಯನ ತಾಪವೆಂಬ ಚಂದ್ರನಿಂದ ಬಾಡಿದಾಗ್ಗೆ ಸೂರ್ಯನ ದರ್ಶನವಿತ್ತು ಪಲ್ಲವಿಸಿದಂತೆ, ಮತ್ತು ಕೆಟ್ಟ ಬೇಸಿಗೆ ಉರಿಬಿಸಿಲಿನಿಂದ ಸಣ್ಣ ಸಸಿಗಳು ಬಾಡಿ ಬಳಕುತ್ತಿರುವಾಗ್ಗೆ ಮಳೆ ಸುರಿಸಿ ಕಾಪಾಡಿದಂಥ, ಉತ್ತಮ ಪತಿವೃತೆಯು ಪತಿ ಪರದೇಶಕ್ಕೆ ಹೋಗಿದ್ದು ಸದಾ ಅವನ ಧ್ಯಾನದಲ್ಲೇ ನಿರತಳಾಗಿರುವಾಗ ಅವಳ ಪತಿ ಬಂದರೆ ಎಷ್ಟು ಆನಂದವೋ ಮತ್ತೂ ಜನಮಗಳನೇಕ ಪಡೆದು ಪಡೆದು ರೋಶಿ ಹೋದ ಜೀವನಿಗೆ ಪರಮಾತ್ಮನು ಒಲಿದು ನಿನಗೆ ಮೋಕ್ಷ ಕೊಟ್ಟಿದ್ದೇನೆ. ಎಂದಾಗ ಎಂಥ ಆನಂದವೋ ಅಂಥ ಆನಂದ ಮಾಡಿದಿ. ನಿನಗೆ ಏನು ಕೊಟ್ಟು ದಣಿಯಲಿ ?.

“ದೀರ್ಘಾಯು ಆಗೆನ್ನಲಾ ಸರ್ವ ಜೀವರಿಗೆಲ್ಲ ಸಾರ್ವಭಾಮ ಸತ್ವಶಾಲಿಯಾಗು ಅನ್ನಲ್ಲಾ? ಇಂಥ ರೌದ್ರಾಕಾರದ ಸಮುದ್ರ ಸಣ್ಣ ಹಳ್ಳದಂತೆ ಆಯಿತು. ಆರೋಗ್ಯದಿಂದಿರು ಅನ್ನಲಾ ವಜ್ರ ಶರೀರ, ಭುಜ ಪರಾಕ್ರಮದಿಂದ ಪೂಜ್ಯನಾಗೆಂಬುವೆನೇ ನಿನಗೆ ೩ ಲೋಕಗಳೊಳಗೆಲ್ಲ ಈ ದೈತ್ಯರೆಂಬುವರು. ಹುಲ್ಲು ಕಡ್ಡಿಗೆ ಸಮಾನ. ಏನೆಂದು ಆರ್ಶಿರ್ವಾದ ಮಾಡಿ ಸಂತೋಷಪಡಿಸಲಿ? ರಘು ರಾಮನ” ಪಾದ-ಕಮಲ ಮಧುಪಾ, ಪರಮು ಭಕೋತ್ತಮ ವರ ಜಗತ್ಪ್ರಾಣ ಭವ್ಯ ಚರಿತ್ರ ಎಂದು ಹೊಗಳಿ ದಣಿಯದ ಜಗನ್ಮಾತೆಯು ಆನಂದ ಭಾಷ್ಪಳಾಗಿ ಆಡಿದ ಮಾತು ಕೇಳಿ ತಲೆಬಾಗಿ ಹೇಳಿಕೊಳ್ಳಲು ಉದ್ಯಕ್ತನಾದನು.

“ತಾಯೇ, ಈಗ ನನಗಿರುವ ಈ ಎಲ್ಲ ಸೌಭಾಗ್ಯ ಸೌಕರ್ಯಗಳೆಲ್ಲ ಮಾತಾಪಿತೃಗಳಾದ ನಿಮ್ಮ ಅನುಗ್ರಹದ ಕೊಡುಗೆಯೇ ಅವೆ, ಇಷ್ಟೆಲ್ಲ ನೀವೆ ಕರುಣಿಸಿದ್ದರೂ ಏನು ಕೊಡಲಿ? ಅಂತಾ ನೀವು ಯೋಚಿಸುವದ್ಯಾಕೆ? ಮಗನು ಎಂಥ ದೊಡ್ಡ ಸಾರ್ವಮನಾದರೂ ತಾಯಿ ಕೈಯೊಳಗಿಂದ ಬಂದ ಒಂದು ತುತ್ತು ಆಹಾರ ವಿದ್ದರೂ ಅಮೃತವಲ್ಲವೆ? ಅದಕ್ಕಾಗಿ ಅಮ್ಮಾ ನಿಮ್ಮ ಚರಣ ಕಮಲಗಳಲ್ಲಿ ಭಕ್ತಿ ಜ್ಞಾನ ಕೊಟ್ಟು ಕ್ಷಣ, ಮಾತ್ರ, ಬಿಡದೇ ನಿಮ್ಮೀರ್ವರ ಪಾದಸೇವೆ, ಸ್ಮರಣೆ ಅನುದಿನವೂ ಕರುಣಿಸಮ್ಮಾ ಭೂಪುತ್ರೇ ಕಾಳಮ್ಮಾ ನೀನು ಕೃಪಾದೃಷ್ಟಿಯಿಂದ ಯಾವ ಜೀವನನ್ನು ನೋಡಿ ಇವನು, ಇಂದ್ರ ನಾಗಲಿ, ಚಂದ್ರನಾಗಲಿ, ಬ್ರಹ್ಮನಾಗಲಿ, ರುದ್ರನಾಗಲಿ, ಅಂತಾ ಹರಸುವಿಯೋ ಆ ಜೀವನು ಆ ಪದವಿಗೇರುವನು ನಿನ್ನ ಆಜ್ಞಾಧಾರಕಾನಾದ ನನಗೆ ಏನಾದರೂ ಕುರುಹು ದಯಪಾಲಿಸಿದರೆ ಅದನೊಯ್ದು ರಾಘವೇಶನಿಗೆ ಅರ್ಪಿಸಿದರೆ ಅವನೂ ನಿನ್ನಂತೇ ಸಂತುಷ್ಟನಾಗುವನು; ಎನ್ನ ದೂತತ್ವ ಸಾರ್ಥಕವಾಗುವದು. ನನ್ನ ಜನ್ಮ ಸಫಲವಾಗುವದು.” ಎಂದು ಹೇಳಿದ ಮಾರುತಿಗೆ ತನ್ನ ತಲೆಯೊಳಗಡಗಿಸಿದ್ದ ಚೂಡಾಮಣಿಯನ್ನು ತೆಗೆದು ಕೊಟ್ಟಳು. ಅದನ್ನು ಕುಡಿಗೈಯಿಂದ ಒಳ್ಳೇ ಆದರಿಂದ ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ಚನ್ನಾಗಿ ಅದನ್ನು ತಿರುತಿರುವಿ ನೋಡುತ್ತಾ, “ಅಮ್ಮಾ ನೀವು ಆ ರಾವಣನ ಬಂಧೀ ಆದಾಗ್ಗೆ ಆಕಾಶಮಾರ್ಗವಾಗಿ ಹೊರಟ ಸಮಯದಲ್ಲಿ ಋಷ್ಯಮುಖ ಪರ್ವತದಲ್ಲಿ ಸರ್ವ ಆಭರಣಗಳನ್ನು ಬಿಚ್ಚಿ ವಸ್ತ್ರದಲ್ಲಿ ಕಟ್ಟಿ ವಗೆದಿದ್ದಿರಿ. ಅವುಗಳನ್ನು ಶ್ರೀರಾಮ ಬಂದಾಗ್ಗೆ ಕೊಟ್ಟೆವು. ಅವುಗಳಲ್ಲಿ ಚೂಡಾರತ್ನ ಒಂದಿಲ್ಲ. ಅದೊಂದೇ ನಿಮ್ಮಲ್ಲಿದೆ; ಆದನ್ನೇ ಗುರುತಿಗಾಗಿ ಕೊಡುವಳು, ತಂದು ಕೊಡೆಂದು ಆಜ್ಞೆ ಮಾಡಿದ್ದನು. ಇದಕ್ಕೆ ಚೂಡಾರತ್ನವನ್ನುವೆರೇನಮ್ಮಾ,. ಇದು ಕೂಡಾ ಮಹಾ ಮಹಿಮೋಪೇತವಾಗಿದೆ. ಉಂಗುರದಂತೇ ಅನಿಸುತ್ತಿದೆ, ಹೆಜ್ಜೆ ಹೆಜ್ಜೆಗೂ ನನ್ನನ್ನು ನೆನಿಸುತ್ತಾ ನಿನ್ನ ಶೋಧಕ್ಕಾಗಿಯೇ ಹಗಲಿರಳೂ ಸ್ವಲ್ಪವೂ ವಿರಾಮವಿಲ್ಲದೆ ಅಣ್ಣ ತಮ್ಮರು ಪ್ರಯತ್ನ ಮಾಡುತ್ತಿದ್ದಾರೆ. ನಿನ್ನ ಮೈದುನನ್ನು ಎಷ್ಟು ವರ್ಣಿಸಿದರೂ ತೀರದು. ಅಣ್ಣನ ಆಯುಧಗಳನ್ನು ಸಹತನ್ನ ಬೆನ್ನಮೇಲೆ ಧರಿಸಕೊಂಡು ಎಡೆ ಬಿಡದೆ ಅವನ ಸೇವೆ ಮಾಡುತ್ತಾ ಬೆನ್ನಹಿಂದೇ ಇದ್ದು ಕಣ್ಣನ್ನು ರೆಪ್ಪೆ ಹೇಗೆ ಕಾಯುವದೋ? ಹಾಗೆ ಕಾಯುವನಮ್ಮಾ ಜಾನಕಿಯೇ.”

ಆಗ್ಗೆ ಹೇಳುತ್ತಾಳೆ, “ ನೀನು ಸಕಾಲಕ್ಕೆ ಬಂದು ನನಗೆ ಜೀವದಾನ ಮಾಡಿದಿ. ಇವತ್ತಿನವರೆಗೆ ರಾಮನ ವಾರ್ತೆ ನನಗೆ, ನನ್ನ ವಾರ್ತೆ ಆ ಸ್ವಾಮಿಗೆ ಮುಟ್ಟಿಸುವ ಸಮರ್ಥರೇ ಇಲ್ಲವೆಂದೂ ಇಂಥ ದುರ್ಗಮ ಪ್ರದೇಶದಲ್ಲಿ ನನ್ನನ್ನು ಬಂದಿಸಿಟ್ಟು ಆಗಾಗ್ಗೆ ಬಂದು ಪೀಡಿಸುತ್ತಿರುವ ಆ ರಾಕ್ಷಸನ ಕಾಟತಾಳಲಾರದೇ ಶ್ರೀರಾಮ ಅವನನ್ನು ನಿಗ್ರಹಿಸಿ ನನ್ನನ್ನು ಬಿಡುಗಡೆ ಮಾಡುವ ಸಂಭವವೂ ಕಾಣದೇ ನನ್ನ ಕೂದಲುಗಳಿಂದಲೇ ಪಾಶ ಹಾಕಿಕೊಂಡ ಪ್ರಾಣಬಿಡುವದೆಂದು ನಿಶ್ಚಯಿಸಿ ರಾಮ ಧ್ಯಾನದಲ್ಲಿರುವ ವೇಳೆಗೆ ನೀನು ಬಂದು ಶ್ರೀರಾಮ ಸಂದೇಶ ಹೇಳಿ ಅವನೂ ನಿರಾಶನಾಗಿರಬಹುದೆಂಬ ನನ್ನ ಯೋಚನೆ ಬಿಡಿಸಿ ಧೈರ್ಯ ತಂದು ಕೊಟ್ಟರುವಿ ಇದರಿಂದ ಸಂತುಷ್ಟಳಾಗಿ ವರಕೊಡುವೆನು. ಊರೂರುಗಳಲ್ಲಿ ನಿನ್ನನ್ನು ಸ್ಥಾಪಿಸಿ ಭಕ್ತಿಯಿಂದ ಸೇವಿಸುವರ ಇಷ್ಟಾರ್ಥ ಸಿದ್ಧಸಲಿ. ಅಂಥಾ ಭಕ್ತರಿಗೆಲ್ಲ ನನಗೆ ಹೇಗೆ ಅನಾಥಳೆಂದು ನಾನು ಹಂಬಲಿಸುತ್ತಿರುವಾಗ ಆನಾಥ ರಕ್ಷಕನಾಗಿಯೂ ಇಂಥ ಆಪತ್ತಿನಲ್ಲಿ ಆಪದ್ಬಾಂಧವ ನಾಗಿಯೂ ಬಂದು ಒದಗಿ ನನಗೆ ಸಂತೋಷ ಗೊಳಿಸಿದಿಯೋ ಹಾಗೆ ನಿನ್ನ ಭಕ್ತರಿಗೂ ಅಭಯವಿತ್ತು ರಕ್ಷಕನಾಗು ಈ ವರವನ್ನು ನನ್ನಮನ ಪ್ರಸನ್ನತೆ ಯಿಂದ ಕರುಣಿಸಿರುವೆ ನೆಂದಳು.

ಆಮೇಲೆ ಕೈಮುಗಿದು ತಲೆಬಾಗಿ, ಅಮ್ಮಾನೀವು ಗೋಚರಿಸುವವರೆಗೂ ಅಶನ ಕೊಳ್ಳಬಾರದೆಂದು ಸಂಕಲ್ಪ ಮಾಡಿದ್ದೆ ಅದು ಸಿದ್ದಿಸಿತು. ಹಸಿವು ಬಹಳವಾಗಿದೆ.ನೀವು ಆಜ್ಞೆಗೈದರೆ ಈ ವನದಲ್ಲಿ ಆಹಾರ ಕೊಳ್ಳುವೆನೆನ್ನಲು., “ ಆಯ್ಯೋ ಮಗೂ ಉಪವಾಸದಿಂದ ಎಷ್ಟೊಂದ ಬಳಲಿರುವಿ ಈ ದೈತ್ಯರೆಲ್ಲ ಬಹಳ ಕಠೋರರು. ಈ ದುಷ್ಟ ರಾಕ್ಷಸರಿಗರಿಯದಂತೆ ಮರಗಳಿಗೆ ಧಕ್ಕೆಯಾಗದಂತೆ ನೆಲಕ್ಕೆ ಗಾಳಿಯಿಂದ ಉರಳಿ ಬಿದ್ದ ಫಲಗಳನ್ನು ಅಲ್ಪೋಪಹಾರ ಮಾಡಿ ನೀನು ಬಂದ ಸುಳವು ಯಾರಿಗೂ ತಿಳಿದಂತೆ ಬೇಗನೇ ಹೊರಟು ಹೊಗಪ್ಪಾ ಅಂದಳು. ಇಷ್ಟು ಆಜ್ಞೆ ಆಗುವದೊಂದೇ ತಡ ಅವಳು ಧ್ಯಾನ ಮಗ್ನಳಾಗಿರಲು ಇವನು ವನ ಭಂಗ ಕಾರ್ಯ ಕೈಕೊಂಡು ಇಡೀ ಸುಂದರವಾದ ವನವನ್ನೆಲ್ಲ ಕ್ರೀಡಾ ಮಂಟಪಗಳು ನಾನಾತರದ ಫಲ ಪುಷ್ಪಗಳ ವೃಕ್ಷಗಳು ಒಂದೂ ಉಳಿಯದಂತೆ ನಿರ್ನಾಮ ಮಾಡುತ್ತಿರಲು ಅನೇಕ ರಾಕ್ಷಸರು ಎದ್ದು ಕಣ್ಣುಜ್ಜುತ್ತಾ ನೋಡುತ್ತಾರೆ. ಸಕಲ ವೃಕ್ಷಗಳೂ ಕೆಳಗೆ ನಿದ್ರೆಗೈದಂತಿವೆ ಅಷ್ಟರೊಳಗೇ ಎದುರಾದವರನ್ನು ಗುದ್ದುಗಳಿಂದಲೂ ಒದಿಕೆಯಿಂದಲೂ ನಾನಾರೀತಿಯಿಂದ ಸಂಹರಿಸಿ ಒಬ್ಬನನ್ನು ರಾವಣನಿಗೆ ಸುದ್ದಿ ಮುಟ್ಟಿಸೆಂದು ನಿರ್ವಿಣ್ಯ ಮಾಡಿ ಕಳಿಸಿದನು.

ಆಗ ಅವನು ಊರ್ಧ್ವಶ್ವಾಸ ಬಿಡುತ್ತಾ ಹಿಂದೆ ನೋಡುತ್ತಾ ಓಡಿ ಬಂದು ಒಂದು ಕಪಿ ಬಂದು ಇಡೀ ಅಶೋಕ ವನವನ್ನೇ ಗುರುತು ಸಿಗದಂತೆ ಮಾಡಿ ಸಕಲ ವನ ಪಾಲಕರನ್ನು ಕೊಂದು ಸುದ್ದಿ ಮುಟ್ಟಿಸಲು ನನ್ನೊಬ್ಬನನ್ನೇ ಉಳಿಸಿ ಯಮನಂತೆ ಬಂದಿದ್ದಾನೆ. ಈ ಧೊರೆತನದ ಠೀವಿ ಉಳಿಯದೋ ರಾವಣಾಸುರನೇ ಎಂದು ಹೇಳಿದನು ಅದನ್ನು ಕೇಳಿ ಕೋಪಾವಿಷ್ಟನಾಗಿ ಉರಿದೇಳುವ ತಂದೆಯನ್ನು ನೋಡಿ ಆಕ್ಷ ಕುಮಾರನು, “ಪಿತನೇ ಉಗುರಿನಿಂದಾ ಚಿವುಟಬಹುದಾದ ಕೆಲಸಕ್ಕೆ ಆಯುಧವೇ ಯಾಕೆ? ಒಂದು ಕಪಿಯನ್ನು ಹಿಡಿಯಲು ಮಹಾರಾಜನಾದ ನೀನು ಹೊರಟೆಯಾದರೆ ಜನರೆಲ್ಲ ನಗೆ ಯಾಡುವರಲ್ಲವೇ? “ಎಂದು ತಂದೆಯನ್ನು ಮೆಚ್ಚಿಸಿ ವೀಳ್ಳ ಕೈಕೋಡನು ೨೦೦ ತಮ್ಮಂದಿರು ಅನೇಕ ಸೈನ್ಯ ಸಹ ಹೊರಟು ಬರುತ್ತಿರುದನ್ನು ತೋರಣ ಕಂಬದ ಮೇಲೆ ಉಪಹಾರ ಮಾಡುತ್ತಾ ಕುಳಿತ ಹನುಮಂತನು ನೋಡಿ ಅವರ ಸಮಾಚಾರಕ್ಕೆಂದು ಇಳಿಯುತ್ತಿರಲು, ಎಲೇ ಎಲೇ ನೋಡಿದಿರೇನೋ ಕೋತಿ ಹೆದರಿದೆ ನಮ್ಮ ಸೈನ್ಯನೋಡಿ ಓಡಿ ಹೋಗುವ ಹಾಗಿದೆ. ತೀವ್ರ ಬಲೆ ಬೀಸಿ ಹಿಡಿದು ಜೀವಂತವಾಗಿ ಇದ್ದನ್ನೊಯ್ದ ಬಂಧಿಸಿಡೋಣ ಇಂಥಶೂರ ಕಪಿಯಿಂದ ಪ್ರಸಂಗದಲ್ಲಿ ನಮಗೆ ಉಪಯೋಗವಾಗುವದೆಂದು ಅನ್ನುತ್ತಿರುವದನ್ನುಕೇಳಿ ನೀವು ಯಾರಾದರೂ ಉಳಿದರೆ ತಾನೇ ಮುಂದಿನ ಮಾತು , ಎಂದು ಒಂದು ಕ್ಷಣದೊಳಗೇ ಆ ತೋರಣ ಕಂಬವೆನ್ನೇ ಕಿತ್ತಿ ಒಂದು ಹುಳ ಕೂಡಾ ಉಳಿಯದಂತೆ ಸಂಹಾರ ಮಾಡಿದನು. ಈ ಸಾರೆ ಸುದ್ದಿ ಮುಟ್ಟಿಸಲು ಕೂಡಾ ಮಾರುತಿಯ ಸಮೀಪಕ್ಕೆ ಬಂದು ತಿರುಗಿ ಹೊರಡುತ್ತಿರಲು ಬ್ರಹ್ಮನು ರಾವಣನು ಕೋಪದೊಂದಿಗೆ ಪುತ್ರ ಶೋಕವೂ ಬೆರೆತು. ಸಂತಾಪದಿಂದಲೂ ರಭಸದಿಂದಲೂ ಎದ್ದು ಹೊರಡುವದನ್ನು ಕಂಡು ಇಂದ್ರಜಿತು, ಕುರಿಯ ಜೊತೆ ಕದನಕ್ಕೆ ಹರಿ(ಸಿಂಹ) ದ್ರಾದಿಗಳನ್ನು ಗೆದ್ದ ರಥ ಕುದುರೆ ಸೈನ್ಯ ಎಲ್ಲವನ್ನೂ ತೆಗೆದುಕೊಂಡು ಹೊರಟನು. ಮತ್ತೆ ಹನುಮಂತನು ಮೊದಲು ಕುಳಿತಲ್ಲಿಯೇ ರಾಮಧ್ಯಾನ ಮಾಡುತ್ತಾ ಕುಳಿತವನು, ಈ ಸೈನ್ಯ ಸಾಗರ ತನ್ನ ಕಡೆಗೆ ಬರುತ್ತಿರುವದನ್ನು ಕಂಡು ಸಂತೋಷಗೊಂಡು ಮುಂದೆ ರಾಮ-ರಾವಣರ ಯುದ್ಧದಲ್ಲಿಯ ಅರ್ಧ ಬಾಗ ಸವಿಸಿದಂತಾಗಿ ಆಗ್ಗೆ ಆರ್ಧ ಶ್ರಮ ಕಡಿಮೆ ಆಗುವದೆಂದು ಹುರುಪಿನಿಂದ ಸಂಹಾರ ಕಾರ್ಯ ನಡೆಸಿದನು. ಯಾವ ಬಾಣ ಪ್ರಯೋಗಿಸಿದರೂ ವ್ಯರ್ಥವೇ ಆಗುತ್ತಿರುವದನ್ನು ಕಂಡು ಇಂದ್ರಜಿತು, ಈ ಕಪಿ ಸಾಮಾನ್ಐನಲ್ಲ ಬ್ರಹ್ಮಾಸ್ತ್ರವನ್ನೇ ಬಿಟ್ಟು ಇವನನ್ನು ಜೀವಂತ ವೈಯಬೇಕು, ಎಂಥೆಂತ ಅಸ್ತ್ರದಿಂದಲೂ ಈ ಕಪಿಯ ೧ ರೋಮಕ್ಕೂ ಕೂಡಾ ಧಕ್ಕೆಯಾಗಲಿಲ್ಲ. ಈಗಾಗಲೇ ನಮ್ಮ ಸೈನ್ಯವನ್ನೆಲ್ಲ ಈ ಕಪಿ ಒಬ್ಬನೇ ನಾಶಮಾಡಿ ಬಿಟ್ಟನು. ಇನ್ನು ವಿಲಂಬ ಮಾಡುವದುಚಿತವಲ್ಲ ಎಂದು ಬ್ರಹ್ಮಾಸ್ತ್ರವನ್ನೇ ಬಿಟ್ಟನು. ಅದು ಪ್ರಜ್ವಿಲಿಸುತ್ತ ಮಾರುತಿಗೆ ಹೇಳಿದನು ನಾವಿಬ್ಬರೂ ಸಮಾನರೇ ಇದ್ದು, ಈ ಸಮಯದಲ್ಲಿ ಈ ಅಸ್ತ್ರ ನಿನ್ನದೆಂದೇ ಈ ದೈತ್ಯರೆಲ್ಲ ಈ ಅಸ್ತ್ರಕ್ಕೆ ಏನೂ ಮುಂದೆ ಮಹತ್ವ ಕೊಡಲಾರರು ಎಂದು ಸೂಚಿಸಲು ತಿರುಗಿ ಹೊರಟ ಅಸ್ತ್ರವನ್ನು ಆವ್ಹಾನಿಸಿ ತನ್ನ ವಜ್ರ ದೇಹದಲ್ಲಿ ಪ್ರವೇಶಿಸಲು ಸ್ಥಳ ಕೊಟ್ಟು ಮೂರ್ಛೆಯಿಂದ ಬಿದ್ದವನಂತೆ ನಟಿಸಿದನು.

ಆಗ್ಗೆ ಅತಿಶಯವಾದ ಸಂತೋಷದಿಂದ ತನ್ನ ಪರಾಕ್ರಮ ಹೊಗಳಿಕೊಳ್ಳುತ್ತಾ ಅವನನ್ನು ಬಂಧಿಸಿ ರಥದಲ್ಲಿರಿಸಿ ಕೊಂಡು ಹೋಗಿ ರಾಜ ಸಭೆಯಲ್ಲಿರಿಸಿದನು, ಯಮದೇವರನ್ನೇ ಸಭೆಗೆ ಕರೆತಂದಂತೇ ಆಯಿತು ಇವನನ್ನು ನೋಡಿ ಪ್ರಹಸ್ತನು ಹತ್ತಿರ ಬಂದು ಪ್ರಶ್ನೆ ಕೇಳುತ್ತಾ, “ಎಲೋ; ಕಪಿಯೇ ನೀನ್ಯಾರು? ರಣಶೂರಾ ಘೋರಾಕಾರನಾದ ಮಹಾ ಧೀರನಾದ ನೀನು ಎಲ್ಲಿಂದ ಬಂದಿ? ಇಲ್ಲಿ ಏತಕ್ಕಾಗಿ ನಿಂದಿ? ಮತ್ತೆ ಮುಂದೆಲ್ಲಿಗೆ ಹೋಗವಿ? ಇಲ್ಲಿ ನಿನ್ನಕೆಲಸವೇನಿತ್ತು?ಸುಂದರವಾದ ನಮ್ಮ ವನವನ್ನೇಕೆ ಹಾಳು ಮಾಡಿ ದೈತ್ಯರನ್ನೆಲ್ಲ ಯಾಕೆ ಕೊಂದಿ? ಮಹಾಶೂರನಾದ ನೀನು ನಮ್ಮ ಇಂದ್ರಜಿತ್ತನ ಕ್ಷುಲ್ಲಕ ಬಾಣಕ್ಕೆ ಯಾಕೆ ಸಿಲಿಕಿದಿ? ಈ ರೌದ್ರಾಕಾರದ ಶರಧಿಯನ್ನು ಹೇಗೇ ದಾಟಿದಿ? ಮತ್ತು ನಮ್ಮ ಈ ಲಂಕೆಯನ್ನು ನೋಡಚ್ಛಿಸಿದರೆ ಅಪ್ಪಣೆ ಇಲ್ಲದೆ ಗರುಡ ಶೇಷ ರುದ್ರಾದಿಗಳಿಗೂ ಪ್ರವೇಶಸಲು ಸಾಧ್ಯವಿಲ್ಲ. ನೀನು ಹೇಗೆ ಬಂದಿ? ಇನ್ನು ತಿರುಗಿ ಹೇಗೆ ಹೋಗುವಿ? ನೀನು ಯಾವ ರಾಜರ ದೂತ, ಯಾರು ಕಳಿಸಿದ್ದಾರೆ? ತ್ರಿಮೂರ್ತಿಗಳೂ ನೆರೆದರೂ ನನ್ನನ್ನು ಯಾರಿಗೂ ಬಿಡಿಸಲಾಗದು. ಯಾಕೆ ಗಾಬರಿಯಾಗಿದೆಯೇ?ಪಿಳಿ ಪಿಳಿ ಕಣ್ಣು ಬಿಡುವದು, ಮುಚ್ಚುವದು ಮಾಡುತ್ತಿರುವಿ? ಭಯಗೊಂಡಿದ್ದರೆ ಮುಚ್ಚುಮರೆ ಇಲ್ಲದೆ ಸತ್ಯವಾಗಿ ಹೇಳು, ನಿಮ್ಮ ಸ್ವಾಮಿಯ ಆಣೆಯಾಗಿ ನಿನ್ನನ್ನು ಕೊಲ್ಲುವದಿಲ್ಲ ತಿಳಿಯಿತೆ? “

ಅನ್ನಲು, “ಏಲೋ ನೀನು ಯಾರು? ಈ ದೈತ್ಯರಿಗೆ ಅರಸನೋ ಪ್ರಧಾನಿಯೋ, ಮಿತ್ರನೋ? ಏನಾದರಾಗು, ನೀನು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಒಮ್ಮೆ ಉತ್ತರಕೊಡುವೆನು ಲಕ್ಷವಿಟ್ಟು ಕೇಳು-ಕ್ಷೀರ ಸಾಗರದಲ್ಲಿದ್ದ ಶ್ರೀಮನ್ನಾರಾಯಣನು ಭೂಮಿಗೆ ಭಾರಭೂತರಾದ ದುಷ್ಟರನ್ನು ಸಂಹಾರ ಮಾಡಿ ಭೂಭಾರ ಇಳಿಸಲು ಬ್ರಹ್ಮಾದಿ ದೇವತೆಗಳಿಂದ ಪ್ರಾರ್ಥಿತನಾಗಿ ಭೂದೇವಿಯ ಮೊರೆ ಕೇಳಿ ಶ್ರೀರಾಮನೆಂದು ಅವತರಿಸಿದಂಥಾ ಮಹ್ಮಾತ್ಮನ ದೂತನ ನಾನು , ಆತನ ಅವತಾರವೇ ದುಷ್ಟರದಮನ, ಶಿಷ್ಟರ ಪರಿಪಾಲನಕ್ಕಾಗಿ, ಚಿಕ್ಕಂದಿನಿಂದಲೇ ದೈತ್ಯ ಸಂಹಾರ ಕಾರ್ಯ ಪ್ರಾರಂಭವಾಗಿ ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಹೋಗಿ ಅನೇಕದೈತ್ಯರ ಸಂಹಾರ ಮಾಡಿದ್ದಾನೆ. ಎತ್ತಲಿಕ್ಕಾಗದ ಶಿವಧನುಸ್ಸುನ್ನು ಲೀಲಾಜಾಲವಾಗಿ ಎಡಗೈಯಿಂದ ಎತ್ತಿ ೪ ತುಂಡು ಮಾಡಿ ಸೀತಾಸಮೇತ ಅಯೋಧ್ಯೆಗೆ ಬಂದು ಪಿತೃ ವಾಕ್ಯ ಪಾಲಿಸಲು ಮುನಿ ರೂಪದಿಂದ ಪತ್ನಿ, ತಮ್ಮ, ಸಹಿತ ವನಕ್ಕೆ ಬಂದು ಖರದೂಷಣಾದಿ ದೈತ್ಯರನ್ನು ಕೊಂದು ಶೂರ್ಪನಖಿಯ ಕಿವಿ ಮೂಗು ಕತ್ತರಿಸಿ ಹಾಗೇ ದೈತ್ಯರನ್ನು ಸಂಹರಿಸುತ್ತಾ ಒಂದು ಪರ್ಣ ಕುಟೀರದಲ್ಲಿ ವಾಸಿಸುತ್ತಿದ್ದಾಗ್ಗೆ ದುಷ್ಟ ರಾವಣನ ಸಹಾಯಾರ್ಥವಾಗಿ ದುರಳನಾದ ಮಾರೀಚನು ಮಾಯೆಯಿಂದ ಸುವರ್ಣ ವರ್ಣದ ಜಿಂಕೆಯಾಗಿ ಸುಳಿದಾಡುತ್ತಿರಲು ಸೀತೆಯಿಂದ ಪ್ರಾರ್ಥಿತರಾಗಿ ಅಣ್ಣತಮ್ಮರು ಅದನ್ನು ಹಿಡಿದು ತರಲು ಬೆನ್ನಟ್ಟಿ ಹೋದ ಸಮಯದಲ್ಲಿ ಆ ಕಾಮಾಂಧನಾದ ರಾವಣನು ಕಪಟ ಸನ್ಯಾಸೀ ವೇಷದಿಂದ ಬಂದು ಅವಳನ್ನು ಅಪಹರಿಸಿಕೊಂಡು ಹೋದನಂತರ ತಿರುಗಿ ಮಾರೀಚನನ್ನು ಕೊಂದು ಬಂದು ಅವಳನ್ನು ಕಾಣದೇ ಹುಡುಕುತ್ತಾ ವನ ವನ ತಿರುಗುತ್ತಾ ಕಿಷ್ಕಿಂದೆಗೆ ಬರಲು ಸುಗ್ರೀವನ ಮಿತ್ರತ್ವವಾಗಿ, ನನ್ನನ್ನು ದೂತತ್ವೇನ ಸ್ವೀಕರಿಸಿ ವಾಲಿಯನ್ನು ಒಂದೇ ಬಾಣದಿಂದ ಸಂಹರಿಸಿ, ಕಪಿ ಸೈನ್ಯ ಕೂಡಿಸಿ ೪ ದಿಕ್ಕಿಗೆ ಸೀತಾ ಶೋಧನೆಗೈದು ಬರಬೇಕೆಂದು ಆಜ್ಞೆ ಮಾಡಿದ ಆ ನಮ್ಮ ಪ್ರಭು ರಾಮಚಂದ್ರನ ದೂತನಾದ ನಾನು ಈ ಕಡೆಗೆ ಬಂದಿದ್ದೇನೆ. ಆ ನಮ್ಮ ಸಮುದ್ರವನ್ನು ಚಿಕ್ಕೆ ಮಕ್ಕಳು ಗಟಾರ ದಾಟಿದಂತೆ ಹಾರಿದೆ. ಲಂಕಾ ಪ್ರವೇಶ ಮಾಡಿದ್ದು ಲಂಕಿಣಿಯ ಅವಸ್ಥ ಏನಾಗಿದೆ ಹೋಗಿ ನೋಡಿಕೋ. ನಿರ್ಭಯವಾಗಿ ಇಡೀ ಲಂಕಾ ಪಟ್ಟಣವನ್ನೆಲ್ಲ ಮೂರು ಸಾರಿ ತಿರುಗಿ ಹುಡುಕುತ್ತಾ ಕಡೆಗೆ ನಿಮ್ಮ ಅಶೋಕ ವನದಲ್ಲಿ ನಿಮ್ಮ ದುಷ್ಟನೀಚ ಅಕರಾಳ ವಿಕರಾಳ ದೈತ್ಯರ ಸ್ತ್ರೀಯರ ಕಾವಲಿನಲ್ಲಿದ್ದ ಜಗನ್ಮಾತೆಯ ಪಾದವನ್ನು ಕಂಡು ಅವಳಿಗೆ ರಘುಪತಿ ಕ್ಷೇಮ ವಾರ್ತೆ ಹೇಳಿ ಅವಳಿಗೆ ರಾಮನ ಮುದ್ರಿಕೆ ಕೊಟ್ಟು ಅವಳಿಂದ ಶಿರೋರತ್ನ ಪಡೆದು ಕೊಂಡು ಹಾಗೇ ತಿರುಗಿ ಹೋಗುವದೆಂದರೆ ಕಳವಿನಿಂದ ಬಂದು ಹೋಗುವದು ವೀರರ ಲಕ್ಷಣವಲ್ಲ. ಅದು ರಾವಣನು ಕಳವಿನಿಂದ ಸೀತಾ ಮಾತೆಯನ್ನು ತಂದಂತೆ, ನಾನು ಮಾಡುವದು ಯೋಗ್ಯವಲ್ಲವೆಂದು ತಿಳಿದು ನಿಮ್ಮೆಲ್ಲರಿಗೆ ನಾನು ಬಂದ ವಾರ್ತೆ ತಿಳಿಸೇ ಹೊಗುವದೆಂದು ನಿರ್ಣಯಿಸಿ ನಿಂತಿದ್ದೇನೆ. ಮತ್ತೆ ಕೇಳು ೧೪ ಲೋಕದೊಡೆಯನ ದೂತನಾದ ನಾನು ನಾನಾಗಿಯೇ ಸಭೆಗೆ ಹೇಗೆ ಬರಬೇಕು? ಮತ್ತು ಆ ಹೆಂಗಸು ಕಳ್ಳನಿಗೆ ನಮ್ಮ ಸ್ವಾಮಿಯ ಶೌರ್ಯ ಪರಾಕ್ರಮ ಹೇಳಿ ಸಾಮದಿಂದ ಬುದ್ದೀ ಹೇಳಿ ಅವನ ಜೀವ ಉಳಿಸುವಸಲುವಾಗಿ ಆ ವನವನ್ನು ಕೆಡಿಸಿದೆ. ಅದರಿಂದ ನೀವು ಇಲ್ಲಿಗೆ ನನ್ನನ್ನು ಕರೆತಂದಿರಿ ನಿನ್ನ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇನೆ. ಇವನ್ನು ಆ ರಾವಣನೆಂಬವನ್ಯಾರು? ತೀವ್ರವಾಗಿ ತೋರಿಸು ಅವನನ್ನುಮಾತಾಡಿಸಿ ಬೇಗನೇ ಶ್ರೀ ರಾಮರ ಸನ್ನಿಧಿಗೆ ಹೋಗುವದಿದೆ; ಮುಂದಿನ ಕಾರ್ಯವನ್ನು ಶೀಘ್ರದಲ್ಲಿ ಮಾಡಬೇಕಾಗಿದೆ.

ಆಗ್ಗೆ ಅವನ ಮಾತುಗಳನ್ನು ಕೇಳಿ ಮಂತ್ರಿ ಮೊದಲಾಗಿ ಇಡೀ ಸಭೆಯವರಲ್ಲ ಭಯ, ಆಶ್ಚರ್ಯಗಳಿಂದ ದಂಗಾಗಿರಲು, ಪ್ರಹಸ್ತನು ಎಲೊ ಕಪಿಯೇ ನೋಡು, ಪುಲಸ್ತ್ಯವಂಶದ ಚಂದರನಾದ ಮನ್ಮಥಾಂಗನಾದ ೧೦ ಮುಖ ೨೦ ತೋಳುಗಳುಳ್ಳಂಥ ಪ್ರಚಂಡನನ್ನು, ದೇವತೆಗಳ ಮನೋತ್ಸಾಹ ಭಂಗನಾದ ವೈರಿರಾಯರಿಗೆ ಗಂಡನಾದ ರಾವಣನೆಂಬ ಹೆಸರಿನ ಸರ್ವಭೌಮ ಇವನೇ ಎಂದು ಅವನನ್ನು ತೋರಿಸಿದನನ್ನು ನೋಡಿ ಮಾರುತಿಯು ತನ್ನ ಬಾಲವನ್ನೇ ಬೆಳಿಸಿ ಆಸನವನ್ನು ಸಿಂಹಾಸನಕ್ಕಿಂತ ೪ ಅಡಿ ಎತ್ತರ ಮಾಡಿಕೊಂಡು ಕುಳಿತು ಅವನನ್ನು ಹುಲ್ಲು ಕಡ್ಡಿಗೆ ಸಮನಾಗಿ ಭಾವಿಸಿ ಮಾತಾಡಿದನು. ಎಲೋ ನೀನೇ ಏನೋ ಜಾನಕಿಯನ್ನು ಕಳವು ಮಾಡಿತಂದವ ನೀನ ಏನು? ಶೂರ,ಧಿರ ಆಂತಾ ಹೊಗಳಿಸಿಕೊಳ್ಳುವ ನೀನು ಹೀಗೆ ಕಳ್ಳತನ ಮಾಡಬಹುದೇ? ಹಿಂದೊಮ್ಮೆ ನನ್ನ ಸಮನಾರೆಂಬ ಗರ್ವದಿಂದ ಕೈಲಾಸ ಪರ್ವತ ನೆಗುವುತ್ತಿದ್ದಾಗ್ಗೆ ೨೦ತೋಳುಗಳೂ ಕೆಳಗೆ ಸೇರಿಸಿ ನೆಗಿವಾಗ್ಗೆ ಶಿವನು ಭಾರ ಹಾಕಿದಾಗ್ಗೆ ಸಾವಿರ ವರ್ಷಗಳ ವರೆಗೆ೨೦ ತೋಳುಗಳು ಜಜ್ಜಿದಂತಾಗಿ ನರಿನರಳದಂತೆ ನರಳಿದ ಧೀರನು ನೀನೇನೇ?

ಬ್ರಹ್ಮನ ವರದಿಂದ ಕೊಬ್ಬಿ ಕಾರ್ತವೀರ್ಯನ್ನು ಕೆಣಕಿ ಹೆಮ್ಮೆ ತೋರಿಸುತ್ತಿರಲು ಅವನಿಂದ ಪರಾಜಿತನಾಗಿ ಅವನಸೆರೆ ಮನೆಯಲ್ಲಿದ್ದು ಒದ್ದಾಡಿ ಬಂದವ ನೀನೇ ಅಲ್ಲವೇ? ಮತ್ತೊಮ್ಮೆ ಬಲ ಪ್ರದರ್ಶನ ಮಾಡುತ್ತಾ ಜಲಕ್ರಿಡೆಗಾಗಿ ಹೋಗಿ ಸಮುದ್ರದಲ್ಲಿ ೨೦ ತೋಳುಗಳಿಂದ ಒಡ್ಡು ಕಟ್ಟಿದಂತೆ ನೀರು ಅತ್ತಿತ್ತ ಹೋಗಿದಂತೆ ಮಾಡಿದಾಗ್ಗ ವಾಲಿಯು ಸಂಧ್ಯಾವನೆಗಾಗಿ ಬಂದಾಗ್ಗೆ ನೀರು ಯಾಕೆ ಕಡ್ಮಿ ಆಗಿವೆ ನೀರು ಒಂದೇ ಕಡೆಗೇಕೆ ಅವೆ ಏನಾದರೂ ಅಡ್ಡವಿದೆಯೋ ಏನೋ ಎಂದು ನೋಡುವದಕ್ಕಾಗಿ ಕೈಯಾಡಿಸುತ್ತಾ ನಿನ್ನ ಟೊಂಕ ಹಿಡಿದು ಎತ್ತಿ ನೋಡಿ ಓಹೋ ೧೦ ಮುಖದಹುಳವಿದ್ದು ಎಷ್ಟು ಮೋಜಾಗಿದೆ ಎಂದು ಎತ್ತಿ ಬಗಲ್ಲಿ ಹಿಚುಕಿ ಹಿಡಕೊಂಡೇ ೪ ದಿಕ್ಕಿನ ಸಮುದ್ರಕ್ಕೆ ಹಾರಿ ಹೋಗಿ ಸಂಧ್ಯಾವಂದನೆ ಅರ್ಘ್ಯ ಮುಗಿಸಿ ಮನೆಗೆ ಬಂದು ಅಂಗದನ ತೊಟ್ಟಿಲಕ್ಕೆ ಚಟ್ಟಿನಂತೆ ಕಟ್ಟಿದ್ದನಂತೆ. ಆಗ್ಗೆ ಆ ಕೂಸು ಪಾದ ಅಗಳಾಡಿಸಲು ನಿನ್ನ ಮುಖಕ್ಕೆ ತಾಕಿ ಹಲ್ಲು ಕಿರಿಯುತ್ತಿದ್ದೆಯಂತೆ ಅದೇ ರಾವಣನಲ್ಲವೇ?

ಅವನ ಹಿಂದಿನ ಚರಿತ್ರೆಯನ್ನೆಲ್ಲವನ್ನು ಅವನಿಗೆ ನೆನಪಿಸಲು ಮತ್ತೆ ಹೇಳುತ್ತಾನೆ.”ಎಲೋ, ಕಾಮಾಂಧನಾದವನೇ ಕಾಮ ವಿಕಾರದಿಂದ ಎಷ್ಟೋ ಪತಿವ್ರತೆಯರ ವ್ರತ ಭಂಗ ಮಾಡಿದ್ದು ಸಾಕೆನಿಸದೇ ವೇದವತಿಯನ್ನು ಕಾಮಿಸಿ ಹಿಡಿಯ ಹೋಗಿ ಅವಳಿಂದ ಶಾಪಪಡೆದಿದ್ದು ನೆನಪಿಲ್ಲವೇ? ಮತ್ತೆ ಸೀತಾ ಸ್ವಂಯವರದಲ್ಲಿ ಯಾವ ಧನುಸ್ಸನ್ನು ಬಾಲ್ಯದಲ್ಲಿಯೇ ಸೀತಾದೇವಿ ಕುದುರೆ ಮಾಡಿ ಆಡುತ್ತಿದ್ದಳೋ ಆಧನುಸ್ಸನ್ನು ಎತ್ತಲು ಪ್ರಯತ್ನ ಮಾಡಿ ಸಕಲ ಶೂರ ರಾಜರೂ ಸಾಧಸಲಾರದೆಂದು ತಮ್ಮ ಸ್ಥಳಗಳಲ್ಲಿ ಕುಳಿತಿರಲು ಮದದಿಂದಲೂ, ದರ್ಪದಿಂದಲೂ ಬಂದು ಸರ್ವ ಶಕ್ತಿ ಪ್ರಯೋಗಿಸಿ ಎತ್ತುವದೇನೋ ಎತ್ತಿ ನಂತರ ಆದರ ಭಾರ ಸಹಿಸದೇ ಎದೆಯ ಮೇಲೆ ಹಾಕಿಕೊಂಡು ಅಂಗಾತ ಸಭೆಯೊಳಗೆ ಬಿದ್ದು ನಗೆಗೀಡಾಗಿ ಆ ಧನುಸ್ಸನ್ನು ನೂರಾರು ಸೇವಕರಿಂದ ತೆಗೆದಿರಿಸಿದ ಮೇಲೆ ಧೂಳು ಝಾಡಿಸಿಕೊಂಡು ನೀನು ಚೀತರಿಸಿಕೊಳ್ಳುವದರೊಳಗೇ ಶ್ರೀರಾಮನು ಒಂದು ಕೈಯಿಂದ ನೆಗವಿ ೪ ತುಂಡು ಮಾಡಿದನು, ಆಗ್ಗೆ ಸೀತಾದೇವಿ ಮಾಲೆ ಹಾಕಿದಳು. ಅದೆಲ್ಲ ನೆನಪಿಸಿಕೋ ಎಂಥಾ ನಾಚಿಕೆಗೇಡಿತನವಿದು, ಯಾವ ಸೀತಾದೇವಿಯ ಸ್ವಂಯವರದಲ್ಲಿ ಹಾಸ್ಯಕ್ಕೀಡಾಗಿ ಮುಖ ತಗ್ಗಿಸಿಕೊಂಡು ಹೋಗಿದ್ದೆಯೋ, ಅದೇ ಸೀತಾದೇವಿಯನ್ನು ಕಳವಿನಿಂದ ತಂದ ನಿನ್ನ ಶೌರ್ಯ ನೀನೇ ನೋಡಿಕೋ, ನಿನ್ನ ಪ್ರಜರಿಗೆಲ್ಲ ನಿನ್ನ ಖ್ಯಾತಿ ತಿಳಿದು ಇಲ್ಲಿ ಜಾಣರ್ಯಾರಾದರು ಇದ್ದರೆ ನಿನಗೆ ಬುದ್ದೀ ಹೇಳಲಿ ಅಂತಾ ಈ ಸಭೆಯಲ್ಲಿ ನಿನ್ನ ಖ್ಯಾತಿ ಪ್ರಚಾರ ಮಾಡಿದ್ದೇನೆ.” ಅಂತಾ ಹೇಳುತ್ತಿದ್ದನ್ನು ಕೇಳಿ ರಾವಣನು ಸಹಿತಾಗಿ ಎಲ್ಲರೂ ಸ್ಥಬ್ದರಾಗಿದ್ದದ್ದನ್ನು ತಿಳಿದು ಮತ್ತೆ ರಾವಣನ ಮನಸ್ಸಿನಲ್ಲಿ ಏನಾದರೂ ಪರಿಣಾಮವಾಗುವಂತೆ ರಾಮನ ಶೂರತನ ವನ್ನೆಲ್ಲ ಹೇಳತೊಡಗಿದನು.

ಎಲೋ, ರಾವಣಾಸುರನೇ ನೀನು ಪುಲಸ್ತ್ಯವಂಶದಲ್ಲಿ ಜನಿಸಿ, ದೀಪಿತ ಆಗಮಗಳನ್ನು ಬಲ್ಲೆಯಲ್ಲೋ, ಹಿಗೇಕೆ ಮೂಢ, ಮೂರ್ಖನಾದೆ? ಅವಿವೇಕ ಶಿಕಾಮಣಿಯಾಗ ಬೇಡ, ಶ್ರೀರಾಮಚಂದ್ರನನ್ನು ನರಮನುಷ್ಯನೆಂಬ ಭ್ರಮೆಯನ್ನು ಬಿಟ್ಟುಬಿಡು. ಪರಾತ್ಪರನಾದ ಆತನಿಂದಲೇ ಸೃಷ್ಟ್ಯಾದಿ ಕಾರ್ಯಗಳು ನಡೆಯುವವು, ಬ್ರಹ್ಮಾದಿಗಳೂ ಅವನ ಆಜ್ಞಾಧಾರಕರು. ಆತನೇ ದೇವ, ದೈತ್ಯನರಾದಿಗಳಿಗೆಲ್ಲ ಧೈರ್ಯ, ಶೌರ್ಯ, ಐಶ್ಚರ್ಯಾದಿಗಳೆಲ್ಲವನ್ನೂ ಅನುಗ್ರಹಿಸಿ ಕೊಡತಕ್ಕವನು, ಮಂಗಳಕರ ಮಹಾ ಮಹಿಮ ಸದ್ಗುಣಗಳ ಧಾಮ, ಜಗದಭಿರಾಮ, ಮೇಘಶ್ಯಾಮನಾದ ಆ ಪರಮಾತ್ಮನನ್ನು ವೇದಾದಿಗಳು ಸುತ್ತಿಸುತ್ತಾ ಮನದಣಿಯವು. ಕಳ್ಳನನ್ನು ನೀರಿನಲ್ಲಿ ಅಡಗಿದ್ದರೂ ಮೀನಾಗಿ ಹಿಡಿದು ಸಂಹರಿಸಿದನು. ಭೂಮಿಯ ಕದ್ದೊಯ್ದ ದೈತ್ಯನನ್ನು ವರಾಹ ರೂಪದಿಂದ ಸಂಹರಿಸಿದನು ಇದರಂತೆ ಆಗಾಗ್ಗೆ ೧೦ ಅವತಾರ ತಾಳಿ ಲೋಕಕಂಟಕರನ್ನೆಲ್ಲ ನಿರ್ನಾಮ ಮಾಡುತ್ತಾ ದುಷ್ಟನಿಗ್ರಹ ಶಿಷ್ಟ ಪಾಲನೆಗಾಗಿಯೇ ಅವನ ಅವತಾರಗಳೆಂಬುವದನ್ನು ನಂಬು. ನೀನು ಮಾಡಿದ ಈ ನೀಚಕಾರ್ಯಕ್ಕೆ ಕ್ಷಮೆ ಬೇಡಿ, ಆ ಸ್ವಾಮಿಯ ಸನ್ನಿಧಿಗೆಅವಳನ್ನೊಪ್ಪಿಸಿ ಕೃತಾರ್ಥನಾಗು. ಆತನು ನಿಜವಾಗಿಯ ನಿನ್ನ ತಪ್ಪು ಕ್ಷಮಿಸಿ ನಿನ್ನನ್ನು ಮನ್ನಿಸುವನು ವ್ಯರ್ಥವಾಗಿ ಹಾಳಾಗಬೇಡ.

ನನಗೆ ಬ್ರಹ್ಮನ ವರವಿದೆ ಸಮುದ್ರ ಮಧ್ಯದಲ್ಲಿ ಓಳ್ಳೇ ಭದ್ರವಾದ ಪಟ್ಟಣ ನಿರ್ಮೀಸಿದ್ದೇನೆ. ಅನೇಕ ಶೂರಧಿರ ದೈತ್ಯರನ್ನು ಕಾವಲಿಟ್ಟಿದ್ದೇನೆ, ಎಲ್ಲ ದೇವತೆಗಳು ಕೂಡ ನನ್ನ ಭಯದಿಂದ ನಡುಗುವಂತೆ ಮಾಡಿದ್ದೇನೆ ಅಂತಾ ಗರ್ವದ ಪರ್ವತ ಶಿಖರವನ್ನು ಏರಿ ಮಧಾಂಧನಾಗ ಬೇಡ ಈ ಎಲ್ಲ ಹಿತದ ಮಾತುಗಳನ್ನು ಅಲಕ್ಷ್ಯ ಮಾಡಿದ್ದಾದರೆ ಮಾರೀದೇವಿಗೆ ಆಹಾರವಾಗುವಿ. ಕೈಲಾಸ ಪರ್ವತ ನಿಗಹಿದಾಗ್ಗೆ ನಿನ್ನ ಕೈಗಳನ್ನು ಜಿಜ್ಜಿ ನರಳಿಸಿದ ಮಹಾದೇವನು ಸತಿ ಸಹಿತನಾಗಿ ಅಹೋರಾತ್ರಿ ಆ ರಾಮನ ಧ್ಯಾನವನ್ನು ಕ್ಷಣವೂ ಬಿಡದೇ ಮಾಡುತ್ತಿರುವನು ಮತ್ತೆ ನಿನ್ನನ್ನು ಕಾರಾಗ್ರಹದಲ್ಲಿಟ್ಟ ಆ ಕಾರ್ತವೀರ್ಯನೂ ವೀರಾಧಿ ವೀರರನ್ನೂ ಸಂಹಾರ ಮಾಡಿದ ಪರಶುರಾಮನನ್ನೇ ಸೋಲಿಸಿವಂಥಾ ಮಹಾತ್ಮನೊಂದಿಗೆ ವಿರೋಧಿಸಿ ಬದುಕಲಾರೆ. ಇದಲ್ಲದೆ ನಿನ್ನನ್ನು ೧೦ ತಲೆಯ ಹುಳವೆಂದು ಕಂಕುಳಲ್ಲಿ ಹಿಚುಕಿಕೊಂಡು ವೈದು ಮಗನ ತೊಟ್ಟಿಲಕ್ಕೆ ಚಟ್ಟಿನಂತೆ ಕಟ್ಟಿದ ಧೀರನಾದ ವಾಲಿಯನ್ನು ಒಂದೇ ಬಾಣದಿಂದ ಸಂಹರಿಸಿದ್ದು ಕೇಳಲ್ಲವೇ? ನಿನ್ನಂಥಾ ಅನೇಕ ವೀರಾಧಿ ವೀರರನ್ನೂ ನಿನ್ನನ್ನೂ ಪರಾಭವ ಗೊಳಿಸಿದಂಥಾ ಶಿವಧನುಸ್ಸನ್ನು ಕಡೀ ಮುರಿದಂತೆ ಮುರಿದು ಸೀತಾ ಪಾಣಿಗ್ರಹಣ ಮಾಡಿದವನ ಸತಿ ಶಿರೋಮಣಿಯನ್ನು ನೀನು ಯಾವ ಮುಖದಿಂದ , ಮತ್ತು ಯಾವ ದೈರ್ಯದಿಂದ ತಂದಿರುವಿ? ಜಿವಿಸಬೇಕೆಂಬ ಇಚ್ಛೆ ಇದ್ದರೆ ಇನ್ನಾದರೂ ಚಿನ್ನಾಗಿ ವಿಚಾರಿಸು. “ ಆಂತಾ ಹೇಳುತ್ತಿರಲು ದಂಗು ಬಡಿದವನಂತೆ ಸ್ಥಬ್ದನಾಗಿ ಕುಳಿತಿರುವ ರಾವಣನನ್ನು ಕಂಡು ವಿಭೀಷಣನೇ ಮೊದಲಾದ ಕೆಲವು ಸಭೆಯೂಳಗೆ ಇದ್ದ ಬುದ್ದಿವಂತರವಿ, ಇದೆಲ್ಲವನ್ನೂ ಕೇಳಿದ್ದಕ್ಕೆ ವಿಚಾರಮಾಡಿ ಮನಸ್ಸು ಬದಲು ಮಾಡಿ ಸೀತಾದೇವಿಯನ್ನು ರಾಮನಿಗೆ ಒಪ್ಪಿಸಬುಹುದೆಂದು ವಿಚಾರಿಸುತ್ತಿದ್ದರು.

ಇಷ್ಟೆಲ್ಲ ಹೇಳುತ್ತಿದ್ದರೂ ಡಬ್ಬಹಾಕಿದ ಕೊಡದ ಮೇಲೆ ನೀರು ಸುರುವಿದಂತೆ ವ್ಯರ್ಥ ವೇಳೆ ಹೋಯಿತೆಂದು ಮಾರುತಿಯು ಸಂತಾಪಯುಕ್ತನಾಗಿ ಆ ನಾರೀ ಚೋರನನ್ನುದ್ದೇಸಿಸಿ, ಎಲೋ ಪಂಕ್ತಿ ಕಂಠಾಕ್ಷೀರ ಸಮುದ್ರ ದಂತಿದ್ದ ಇಂಥ ಶುದ್ಧ ಸಾತ್ವಿಕ ವಂಶದಲ್ಲಿ ವಿಷ ಹುಟ್ಟದಂತೆ ಪಾಪಿಗಳ ನೆಂಟನಾದ ನೀನು ಏಕೆ ಜನಿಸಿದಿ? ದುಷ್ಟಾತ್ಮಾ ದುರ್ಮಾರ್ಗ ವೃತ್ತಾ. ಪುಷ್ಟನಿಶಾಚರ ಪರಧನ ಪರಾಂಗನಾಸಕ್ತ. ನಿರುತ ಸಚಾರ ಅದಾರಹಿತಾ,ಮಹಾ ವೈಷ್ಣವ ದ್ವೇಷಿಯಾದ ಎಲೋ ರಾವಣಾಸುರನೇ ಕೇಳು, ನಿನ್ನನ್ನು ನಿನ್ನ ಪುತ್ರ ಮಿತ್ರ ಕಳತ್ರ ಮಿತ್ರಾದಿ ಸಕಲ ನಿನ್ನ ಪರಿವಾರವನ್ನು , ನಿನಗೆ ಬೆಂಬಲರಾಗಿ ಬರುವರನ್ನೂ ನಿನ್ನ ಈ ಅಲಂಕಾರ ಸಹಿತವಾದ ಲಂಕಾ ನಗರವನ್ನು ಸಹಿತವಾಗಿ ಒಂದೇ ಕ್ಷಣದೊಳಗೆ ಸಂಹಾರ ಮಾಡಿ ಜಗನ್ಮಾತೆಯಾದ ಸೀತಾದೇವಿಯನ್ನು ಕರೆದುಕೊಂಡೇ ಕೋದಂಡಧರನಾದ ಸದ್ಗುಣ ಸಾಂದ್ರನಾದ ಸದಾಶೌರ್ಯನಾದ ಶ್ರೀರಾಮಚಂದ್ರನ ಸಂದರ್ಶನ ಮಾಡುವ ಸಮರ್ಥನಿದ್ದೇನೆ, ಆದರೆ ಅವನ ಆಜ್ಞೆ ಇಲ್ಲ. ತಾನೇ ನಿನ್ನನ್ನು ಸಂಹರಿಸುವದಾಗಿ ಪ್ರತಿಜ್ಞೆಮಾಡಿದ್ದಾನೆ. ಆತನ ಪ್ರತಿಜ್ಞಾಪಾಲನೆಗಾಗಿ ನಿನ್ನನ್ನು ಜೀವದಿಂದ ಉಳಿಸಿರುವೆನೆಂದು ತಿಳಿದಿರು ಎಂದು ಗಂಭೀರವಾಗಿ ಗರ್ಜಿಸುತ್ತ ಭ್ರಕುಟಿ ಬದ್ಧನಾಗಿ ಪ್ರಳಯ ಫಾಲಾಕ್ಷನಂತೆ ವಿಷ ಕಾರುವ ಸರ್ಪದಂತೆ ಸಿಟ್ಟಿನಿಂದ ಬುಸುಗುಟ್ಟುತ್ತಾ ಸಿಟ್ಟಿಗೆದ್ದ ಸಿಂಹದಂತೆ ಘಡು ಘಡಿಸಿ ಮೌನ ತಾಳಿ ರಾಮನಾಮವನ್ನು ಮನದಲ್ಲೇ ಭಜಿಸತೊಡಗಿದನು.

ಇದೆಲ್ಲವನ್ನು ಕೇಳುತ್ತಿದ್ದ ರಾವಣನಿಗೆ ಈ ವಚನ ಜಾಲಗಳೆಂಬ ಬಾಣಗಳು ಕಿವಿಯೊಳಗಿಟ್ಟಂತೆಯಾಗಿ, ಎರಕಕಾಶಿ ಹೊಯಿದಂತೆಯಾಗಿ ಮಗನಿಗೆ, “ಕೇಳಿದೆಯಾ ಈ ವನಚರನ ದುಷ್ಟ ವಚನಗಳನ್ನು ಇವನಿಗೆ ಪ್ರತ್ಯುತ್ತರ ಕೊಡುವದು ಉಚಿತವಲ್ಲ. ಎಷ್ಟೆಂದರೂ ಮನುಷ್ಯನ ಭ್ರತ್ಯನಿವನು ನಮಗೆ ಸರಿಯೇ? ಕಾರಣ ಇವನನ್ನು ವೈದು ನಮ್ಮ ಶ್ರೀನಿಕುಂಭಿಣಿಗೆ ಬಲಿಯ ಕೊಡಲ ಶೂಲಕ್ಕೇರಿಸು, ದೇವಿಗೆ ಸಂತೋಷ ಪಡಿಸು, “ಎಂದು ಆಜ್ಞೆ ಮಾಡಿದ್ದನ್ನು ಕೇಳಿ ವಿಭೀಷಣನು, “ ರಾಮ” ಎನ್ನುತ್ತಾ ಕಿವಿಗಳನ್ನು ಮುಚ್ಚಿಕೊಂಡು, “ಆಣ್ಣಾ ದೂತರು ತಮ್ಮ ಸ್ವಾಮಿಯನ್ನು ಹೊಗಳುವದು ಜಗದ ನಿಯಮವೇ ಇದ್ದು ಸ್ವಾಮಿಯನ್ನು ಕೊಂಡಾಡಿದ್ದು ಧರ್ಮವೇ ಆಗಿದೆ. ರಾಜನೀತಿ ತಿಳಿದವನಾದ ನೀನು ದೂತನನ್ನು ಕೊಲ್ಲವದು ಹೆಚ್ಚಿನ ಅನ್ಯಾಯವಲ್ಲವೇ? ಇದೆಲ್ಲ ಹಿರಿಯನಾದ ನಿನಗೆ ಗೂತ್ತಿದೆ, ವಿಚಾರಿಸು. “ ತಮ್ಮನ ಮಾತಿಗೆ ಸಮ್ಮತಿಸಿ ಬೇರೆ ಅಜ್ಞೆಮಾಡಿದನು. ನಮ್ಮ ತಂಗಿಗೆ ಕಿವಿ ಮೂಗು ಕೊಯಿದಿದ್ದರಿಂದ ನೀವೂ ಇವನ ಕಿವಿ ಮೂಗುಗಳನ್ನು ಕತ್ತರಿಸಿರಿ ಅಂತಾ ಹೇಳಲು. ಆಗಿಂದಾಗ್ಗೇ ಶಸ್ತ್ರ ತಂದು ಕತ್ತರಿಸುತ್ತಿರಲು ಅವೆಲ್ಲವೂ ಕಿವಿ. ಮೂಗಿಗೆ. ತಗಲುತ್ತಲೇ ತುಂಡು ತುಂಡಾಗಿ ಬೀಳುವದನ್ನು ಕಂಡು ಆಶ್ಚರ್ಯದಿಂದ ಮತ್ತೋದು ಉಪಾಯ ಯೋಚಿಸಿ ಕಪಿಗಳಿಗೆ ಬಾಲದ ಮೇಲೆ ಪ್ರೀತಿ ಬಹಳವಿರುವದೆಂದೂ ಬಾಲಕ್ಕೇ ಬೆಂಕೀ ಹಚ್ಚಿ ಕಳಿಸಿರೆಂದು ಆಜ್ಞಾಪಿಸಿ ಬಾಲ ಉರಿಸುತ್ತಾ ತನ್ನಸ್ವಾಮಿಕಡೆಗೆ ಬೊಬ್ಬೆ ಹೊಡೆಯುತ್ತಾ ಹೋಗಲೆಂದು ತನ್ನ ದೂತರಿಗೆ ಹೇಳಿದನು.

ಅದನ್ನು ಕೇಳಿ ಹನುಮಂತನು, “ನೀನು ಎಂಥೆಂಥ ದುಷ್ಕಾರ್ಯವನ್ನು ಮಾಡಿದ್ದರೂ ಇನ್ನೂದರೂ ಶ್ರೀರಾಮನ ಕಾರ್ಯಕ್ಕೆ ಸಹಾಯ ಮಾಡುತ್ತಿರುವಿ ಎಂದು ನನಗೆ ಸಂತೋಷವಾಗಿ ಆನಂದದಿಂದಲೇ ಹೋಗುವೆನು. ಆದರೆ ನೀವು ಮಾತ್ರ ಬೊಬ್ಬೆ ಹೊಡೆಯುವಿರಿ ನೆನಪಿರಲಿ” ಅಂತಾ ಹೇಳಿ ತನ್ನ ಬಾಲವನ್ನು ಬೆಳಿಸುತ್ತಾ ಮತ್ತೆ ಧ್ಯಾನಾಸಕ್ತನಾದನು. ಮೊದಲು ೧೦/೨೦ ಶೀರೆ ಧೋತರಗಳನ್ನು ಸುತ್ತಿದರು ಒಂದು ಇಂಚಿನಷ್ಟು ಕೂಡಾ ಆಗಲಿಲ್ಲ. ದಷ್ಟ ಉದ್ದ ಎರಡು ರೀತಿಯಿಂದ ಬಾಲ ಬೆಳೆಯುತ್ತಲೆ ಇತ್ತು. ಊರವರೆಲ್ಲರ ಮನೆಗಳಿಂದಲೂ ಅರೆಮನೆಯೊಳಗಿನವೂ ಸಹ ಸೀರೆ ಶಾಲು ರುಮಾಲ ಮಕ್ಕಳ ಬಟ್ಟೆಗಳು ಎಲ್ಲವನ್ನು ಪಟ್ಟಣದವರೆಲ್ಲರಲ್ಲಿ ಸುಲಿಗೆ ಮಾಡಿ ಪರ್ವತದಂತೆ ತೂಂದೊಡ್ಡುತ್ತಲೇ ಇದ್ದರು ಮತ್ತಷ್ಟೇ ರಾಕ್ಷಸರು ಬಾಲಕ್ಕೆ ಸುತ್ತುತ್ತಾ ಸುತ್ತತ್ತಾ ಶೀರೆ ಕಳೆದ ದುಶ್ಯಾಸನನಂತೆ ಬಳಲಿ ಕೆಳಗೆ ಬೀಳುತ್ತಿದ್ದರು ಕಡೆಗೆ ಇಂದ್ರಾದಿಗಳು ತನಗೆ ಕಾಣಿಕೆಯಾಗಿ ಕೊಟ್ಟ ವಸ್ತ್ರಗಳನ್ನೂ ತರಿಸಿ ಸುತ್ತಿರೆಂದು ಅವುಗಳು ಮುಗಿದರೂ ಬಾಲ ಬೆಳೆಯುತ್ತಲೇ ಇತ್ತು; ಇದನ್ನು ಕಂಡು ರಾವಣನು ಪುರಜನರು ಮಾನ ರಕ್ಷಣೆಗೆ ಧರಿಸಿದ ವಸ್ತ್ರಗಳನ್ನೂ ತರಬೇಕೆಂದು ಹೇಳಲು ರಾಮ ಭಕ್ತನು ಕಿವಿಮುಚ್ಚಿಕೊಂಡು ಈ ಚಂಡಾಲನು ಸ್ತ್ರೀ ಪುರುಷರ ಮಾನ ಭಂಗ ಮಾಡುವದಕ್ಕೂ ಹಿಂಜರಿಯನು. ಅದನ್ನು ನೋಡುವದುಚಿತವಲ್ಲ ಅಂತಾ ಬಾಲವನ್ನು ಸಂಕೋಚ ಮಾಡಿಕೊಂಡನು ಕೂಡಲೇ ಆದೈತ್ಯ ಸೈನ್ಯವೆಲ್ಲ ಆನಂದದಿಂದ ಕುಣಿದಾಡಿದರು.

ಆಮೇಲೆ ದಣಿದು ಬಳಲಿದವರೂ ಉತ್ಸಾಹದಿಂದ ಎದ್ದು ನಾನಾ ತರದ ಎಣ್ಣೆಗಳನ್ನು ತಂದು ಸಾವಿರಾರು ಕೊಡಗಳನ್ನು ಸುರುವುವರನೇಕರು ಮತ್ತು ಕೆಲವರು ಬಾಲಕ್ಕೆ ಸುತ್ತಿದ ಬಟ್ಟೆಗಳನ್ನು ಚನ್ನಾಗಿ ತೊಯಿಸುವರು. ಆಮೇಲೆ ಮಸಿಯಿಂದ ಹಣೆಯ ಮೇಲೆ ದಪ್ಪವಾಗಿ ನಾಮ ಬಡಿದರು. ಕೊರಳಲ್ಲಿ ಕಣಗಿಲ ಹೂವಿನ ಮಾಲೆ ಹಾಕಿ ಕೇ ಕೇ ಹಾಕುತ್ತಾ ಮನ ಬಂದಂತೆ ಕುಣಿದಾಡುತ್ತಾ ಒದರುತ್ತಾ ನಾನಾ ತರದ ವಾದ್ಯ ವೈಭವದಿಂದ ಇಡೀ ಲಂಕಾ ಪಟ್ಟಣದ ಎಲ್ಲ ಕಡೆಗೂ ಮೆರಿಸುತ್ತಾ ಕುಣಿಸುತ್ತಾ ನಡೆಯೋಣವೆನ್ನುವದೆಲ್ಲವನ್ನು ಮೌನದಿಂದ ಕೇಳುತ್ತಿದ್ದನು. ಆಮೇಲೆ ಬಾಲಕ್ಕೆ ಉರಿ ಹಚ್ಚಲಿಕ್ಕೆಂದು ೪/೫ ಮೈಲಿನವರೆಗೂ ಬೆಳೆದ ಬಾಲನೋಡಿ ಸಾವಿರಾರು ರಾಕ್ಷಸರು ಕೈಯ್ಯಲ್ಲಿ ಹಿಲಾಲ, ಕಕ್ಕಡ ಹಿಡಿದುಕೊಡು ಅಲ್ಲಲ್ಲಿಗೆ ನಿಂತು ಸಾಲದೀಪಗಳನ್ನು ಹಚ್ಚುವಂತೆ ಎಲ್ಲರೂ ಹಚ್ಚುತ್ತಾ ಎಲ್ಲ ಕಡೆಗೂ ಉರಿಯು ಹತ್ತಿರ ಕೂಡಲೇ ಮೆರಿಸಲು ಸುರುಮಾಡಿ ಸಂದಿ ಗೊಂದಿ ಬಿಡದೇ ಎಲ್ಲ ಕಡೆಗೂ ಮೆರಿಸತ್ತಾ ಆಗಸಿ ಬಾಗಿಲಿಗೆ ಬಂದು ಅವನನ್ನು ಮತ್ತೆ ಇಲ್ಲಿಗೆ ಬರುವಿಯಾ ಎಂದು ಚೇಷ್ಟ ಮಾಡಿ ಹಂಗಿಸಿ ಬಿಟ್ಟು ತಾವು ತಿರುಗಿ ಹೋದರು.

ಅಷ್ಟರಲ್ಲಿ ಬ್ರಹ್ಮನಿಗೆ ವಚನ ಕೊಟ್ಟ ಸಮಯ ಮುಗಿಯಿತು ಆ ಆಸ್ತ್ರದಿಂದ ಮುಕ್ತನಾಗಿ ಶ್ರೀರಾಮನಿರುವ ದಿಕ್ಕಿಗೆ ಬಾಲದ ಉರಿಯಿಂದ ಸ್ವಾಮಿಗೆ ಮಂಗಳಾರತಿ ಮಾಡಿ ಪುನಃ ಲಂಕೆಯ ಸಭೆಗೇ ನಡೆದನು. ಅಲ್ಲಿ ಎಲ್ಲಕ್ಕೂ ಮೂದಲು, ರಾವಣಾಸುರನೇ ನೀನೇ ಶ್ರೀರಾಮನಿಗೆ ಮಾಡಿದ ಮಂಗಳಾರತಿ ತೆಗೆದುಕೋ ಎಂದು ಹೇಳುತ್ತಾ ಅವನು ಮುಖಗಳಿಗೂ ಹಿಡಿದ. ಆಮೇಲೆ ಅವನು ಉಟ್ಟ ಉಡಿಗೆ ತೊಡಿಗೆಗಳಿಗೂ ಬಾಲದ ಉರಿಯನ್ನು ತಗಲಿಸಲು ಗಡ್ಡಮೀಸೆಗಳ ಸಹಿತ ಮೈಮೇಲಿನ ಬಟ್ಟೆಗಳೂ ಸುಟ್ಟು ವಿವಸ್ತ್ರನಾಗಿ ಅಂತಃಪುರಕ್ಕೆ ಓಡುತ್ತಿರಲು ಅವನ ಬೆನ್ನು ಬಿಡದೇ ಉರಿಯುವ ಬಾಲ ಹಿಡಿದೇ ಓಡಿ ತಿರಗಿ ಬರುವಾಗ್ಗೆ ತನ್ನನ್ನು ಕುಣಿಸುತ್ತಾ ಮಣಿಸುತ್ತಾ ಚೇಷ್ಟೆ ಮಾಡುತ್ತಿರುವರನ್ನೆಲ್ಲರನ್ನೂ ಆವರೇ ಹಚ್ಚಿದ ಉರಿ ಯಿಂದ ಅವರನ್ನೇ ಸಂಹರಿಸುತ್ತಾ ಆ ಪಟ್ಟಣದಲ್ಲಿ ಒಂದೂ ಸ್ಥಳ ಬಿಡದೇ ಸುಂದರವಾದ ಮನೋಹರವಾದ ಮುಖ್ಯ ಮುಖ್ಯ ಅರಮನೆ, ಚಂದ್ರಶಾಲೆ ಮುಂತಾದ ಎಲ್ಲ ಸೌಂದರ್ಯದ ಸ್ಥಳಗಳನ್ನು ಹುಡುಕಿ, ಹುಡುಕಿ, ಸಕಲ ರಾಕ್ಷಸರ ಮನೆಗಳನ್ನೂ ಅಗ್ನಿಗೆ ಅಹಾರ ಒದಗಿಸಿದನು. ಅಷ್ಟೆಲ್ಲ ಸುಟ್ಟರೂ ವಿಭೀಷಣನ ಅರಮನೆ ಕಂಡು ಇವನು ಯೋಗ್ಯ ಹರಿ ಭಕ್ತನಿದ್ದು ಮುಂದೆ ಈ ರಾಜ್ಯಕ್ಕೆ ಅಧಿಪತಿ ಆಗುವನೆಂದು ಎಡ ಬಲದ ಮನೆಗಳೆಲ್ಲ ಸುಟ್ಟು ಅವನ ಮನೆಯನ್ನು ರಕ್ಷಿಸಿದನು. ಸೀತಾದೇವಿಯ ಕಾವಲು ಮಾಡುತ್ತಿರುವ ದೈತ್ಯ ಸ್ತ್ರೀಯರಿಗೆ ಒಬ್ಬಳು ಬಂದು ಇಲ್ಲಿ ಬಂದ ಕಪಿಯ ಬಾಲಕ್ಕೆ ಉರಿಹಚ್ಚಿ ವಳ್ಳೇ ಸಡಗರದಿಂದ ಮೆರಿಸುತ್ತಿದ್ದಾರೆ, ಇಷ್ಟರೊಳಗೆ ಹೇಳಿದ್ದನ್ನು ಕೇಳಿ ಸೀತಾದೇವಿಯು ಅಗ್ನಿಯನ್ನು ಪ್ರಾರ್ಥಿಸುತ್ತಾ ರಕ್ಷಾ ಮಂತ್ರ ಜಪಿಸುತ್ತಿದ್ದಳು. ಅದರಿಂದ ಚಂದನ ಲೇಪಿಸಿದಂತೆ ಆಗಿ ಅವನು ಆನಂದದಿಂದ ತಂದೆಯ ಗೆಳೆಯನಾದ ಅಗ್ನಿಗೆ ಅರ್ಪಿತವಾಗುವಷ್ಟು ತೃಪ್ತಿಪಡಿಸಿ ಒಂದೇ ದಿನದಲ್ಲಿ ೮೦ ಕೋಟಿ ದೈತ್ಯರ ಸಂಹಾರಮಾಡಿ ಶ್ರೀಕೃಷ್ಣಾರ್ಪಣವೆಂದನು. ಪುನಃಸಮುದ್ರಕ್ಕೆ ಬಂದು ಅಗ್ನಿಯನ್ನು ಬೀಳ್ಕೋಟ್ಟು ಸೀತಾದೇವಿಗೇನಾದರೂ ತೊಂದರೆಯಾಗಿದೆಯೋ ಏನೋ ಇನ್ನೊಮ್ಮೆ ದರ್ಶಣ ಪಡೆದು ಲಂಕಾ ದಹನದ ವಾರ್ತೆ ಹೇಳಿ ಅಪ್ಪಣೆ ಪಡೆದು ಸಾಂತ್ವನ ಹೇಳಿ ಹೊರಡಲು ಆ ತಾಯಿಗೆ ಬಂದು, “ಮತ್ತೇನು ಹೇಳಬೇಕಮ್ಮಾ ಚಿಂತಿಸಿಬೇಡ” ಎಂದು ನಮಸ್ಕಾರ ಮಾಡಿ ಕೈಮುಗಿದು, ತಾಯೇ, ನಿನ್ನಂತೇ ಅವನೂ ನಿನ್ನೇ ಧೇನಿಸುತ್ತಾ ಚಿಂತಿಸುತ್ತಿರುವದರಿಂದ ತೀವ್ರವಾಗಿ ಹೋಗುವೆನು ಒಂದು ತಿಂಗಳೊಳಗೇ ಸೈನ್ಯಸಹಿತವಾಗಿ ಸದ್ಗುಣ ಸಾಂದ್ರರಾದ ಶ್ರೀರಾಮಚಂದ್ರ ಲಕ್ಷ್ಮಣರನ್ನು ಕರೆದುಕೊಂಡ ಬಂದು ರಾವಣಾದಿ ರಾಕ್ಷಸರನ್ನು ಸಂಹರಿಸಿ ನಿಮ್ಮನ್ನು ಕರೆದುಕೊಂಡು ಹೋಗವ ಅವರಸವಿದೆ ಅಪ್ಪಣೆ ದಯಪಾಲಿಸಮ್ಮಾ” ಎನ್ನಲು. ಆನಂದಾಶ್ರುಗಳಿಂದ ಆರ್ಶಿವಾದ ಮಾಡಿ ಹೋಗಿಬಾರಯ್ಯ ಸ್ವಾಮಿಕಾರ್ಯ ಧುರೀಣನೇ ನಿನಗೆ ಕಲ್ಯಾಣವಾಗಲಿ ಯುದ್ಧದ ಅರ್ಧಭಾಗ ನೀನೊಬ್ಬನೇ ಸಂಹರಿಸಿ ರಾಮನಿಗೆ ಸಹಾಯ ಸಲ್ಲಿಸಿರುವಿ. ಎಂದು ತಲೆಯ ಮೇಲೆ ಕೈಯಿಟ್ಟು ಅಂತಃಕರುಣದಿಂದ ಸೇವಕಾಗ್ರಣಿಯೇ ಹೋಗಿ ಬಾ ಎಂದು ಬೀಕ್ಕೂಟ್ಟಳು. “ ಜೈ ಶ್ರೀರಾಮ” ಅನ್ನುತ್ತಾ ಸಮುದ್ರ ಲಂಘಿಸುತ್ತಿರಲು ಮಾರ್ಗದಲ್ಲಿ ಮೈನಾಕ ಪರ್ವತದಲ್ಲಿ ಸತ್ಕಾರ ಪಡೆದು ಜಾಂಬುವಂತ ಮೊದಲಾದ ಕಪಿ ಸೈನ್ಯದಲ್ಲಿ ಬಂದು ಎಲ್ಲರಿಗೂ ಈ ಸಂತೋಷ ವಾರ್ತೆ ಹೇಳಿ ಆನಂದಪಡಿಸಿದನು.

ಮುಂದೆ ಲಂಕೆಯಲ್ಲಿ ನಡೆದ ವೃತ್ತಾಂತವನ್ನೆಲ್ಲ ಒಂದೂ ಬಿಡದೇ ಸವಿಸ್ತಾರವಾಗಿ ಹೇಳಿ ಆಶನ ವೃತದಿಂದಿದ್ದ ಎಲ್ಲ ಕಪಿಗಳಿಗೂ ಸುಗ್ರೀವನ ಮಧು ವನದಲ್ಲಿ ಎಥೇಚ್ಚೆವಾಗಿ ಹಣ್ಣು ಹಂಪಲಗಳನ್ನು ಪಾರಣೆಮಾಡಿಸಿ ಉತ್ಸಾಹದಿಂದ ಜೈ ಜೈ ಕಾರ ಮಾಡುತ್ತಾ ಶ್ರೀರಾಮನ ಸನ್ನಿಧಿಗೆ ತೆರಳಿದರು. ಆಗ್ಗೆ ರಾಮನು ತನ್ನ ಬರುವನ್ನೇ ನಿರೀಕ್ಷಿಸುತ್ತಾ ಸಹೋದರ ಸೇವಕರೊಂದಿಗೆ ಕುಳಿತುಕೊಂಡು ಅವರೆಲ್ಲರೂ ಹೇಳುತ್ತಿರುವದನ್ನು ಕೇಳುತ್ತಾ ಕುಳಿತಿರುವದನ್ನು ಹನುಮಂತನು ದೂರದಿಂದಲೇ ಕಂಡು ಅಲ್ಲಿಂದಲೇ ನಮಸ್ಕಾರ ಮಾಡಿ ಅವರೆಲ್ಲ ಆಡುವ ಮಾತುಗಳನ್ನು ಆಲಿಸುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತಾ ನಡೆದನು. ಬಲಭಾಗದಲ್ಲಿ ಲಕ್ಷ್ಮಣನು ಒಳ್ಳೇ ಭಕ್ತಿಯಿಂದ ಧರ್ನುಧಾರಿಯಾಗಿ ಕೈ ಜೋಡಿಸಿ ನಿಂತಿದ್ದು, ಸೀತಾಮಾತೆ ಸಮಾಚಾರ ತಿಳಿದ ತಕ್ಷಣದಲ್ಲಿ ದೆತ್ಯಕುಲವನ್ನೇ ನಾಶಮಾಡಿ ಅವಳನ್ನು ಕರತರುವೆನೆನ್ನುತ್ತಿದ್ದರೂ ಎಡಭಾಗದಲ್ಲಿ ಸುಗ್ರೀವನು ನಿಂತಿದ್ದು, ಇದೀಗ ಮಾರುತಿ ಬಂದು ಮಾತೆಯ ಕ್ಷೇಮ ವಾರ್ತೆ ತಿಳಿಸುವನು ಎಂದು ಹೇಳುತ್ತಿದ್ದದನ್ನೂ ನಗಮುಖದಿಂದ ಕೇಳುತ್ತಿರುವ ಸ್ವಾಮಿಯನ್ನು ನೋಡಿದನು.

ಮತ್ತೆ ರಾಮನ ಹಿಂಬದಿಗೆ ಭಲ್ಲೂಕ ಗೋಪುಚ್ಛಗಳ ಅನೇಕ ಕಪಿಗಳ ಸಮೂಹ ವೆಲ್ಲ ನೆರೆದಿದ್ದು ಮಾರುತಿ ಬರುತ್ತಲೇ ನಾವೆಲ್ಲರೂ ಶಕ್ತ್ಯಾನು ಸಾರ ಯುದ್ಧದಲ್ಲಿ ಸಹಾಯ ಮಾಡಿ ಶ್ರೀರಾಮನ ಕಾರ್ಯದಲ್ಲಿ ಭಾಗವಹಿಸಿ ತೀವ್ರವೇ ಜಗನ್ಮಾತೆಯನ್ನು ಕರೆತರುವೆ ವೆಂಬ ತವಕದಲ್ಲಿದ್ದದ್ದನ್ನು ಕಂಡನು ಮುಂಭಾಗದಲ್ಲಿ ಸುಕ್ಷೆಣ, ನಳ, ಕೇಸರಿ, ಮೊದಲಾದ ಕಪಿ ಶ್ರೇಷ್ಠರನೇಕರು ನೆರೆದಿದ್ದು ಶ್ರೀರಾಮ ಕಾರ್ಯಕ್ಕೆ ಕಂಕಣ ಬದ್ಧರಾಗಿದ್ದು ಎಲ್ಲರೂ ತನ್ನ ಬರುವಿಕೆಯ ಮಾರ್ಗ ನಿರೀಕ್ಷಿಸುತ್ತಿರುವದನ್ನು ಮತ್ತು ನಕ್ಷತ್ರಗಳನೇಕಗಳ ಮಧ್ಯದಲ್ಲಿ ಹುಣ್ಣಿಮೆ ಚಂದ್ರನಂತೆ ಮುಖ ಕಮಲ ಮೇರು ಸಮಾನ ಧೈರ್ಯ ಶಾಲಿಯಾದ ಸದ್ಗುಣಗಳ ಧಾಮನಾದ ಶ್ರೀರಾಮನನ್ನು ಪ್ರೀತಿ ವಾತ್ಸಲ್ಯದಿಂದ ಸಮ್ಮುಖದಲ್ಲಿ ಕುಳ್ಳಿರಿಸಿದನು. ಕೈ ಮುಗಿದು ಕೊಂಡು ವಿನಯದಿಂದ ತಲೆ ಬಾಗಿ ಕುಳಿತಿರುವ ಮಾರುತಿಯು ಮಾಡಿದ ಕಾರ್ಯವನ್ನೂ ವಯೋವೃದ್ದನಾದ ಜಾಂಬುವಂತನು ಅಲ್ಲಿ ತಾವು ಸೀತಾನ್ವೇಷಣೆಗೆ ಹೊರಟಾಗಿನಿಂದ ಹಿಡಿದು ಹನುಮಂತನೊಬ್ಬನೇ ಲಂಕೆಗೆ ಹೋಗಲು ಶಕ್ತನು ಅನ್ನುವದನ್ನು ನಿರ್ಣಯಿಸಿ ಅವನಿಗೇ ಬಿನ್ನವಿಸಲು ಅಲ್ಲಿ ಅವನು ಅದ್ಬುತ ಕಾರ್ಯಗಳೆಲ್ಲವನ್ನೂ ಸೀತಾದೇವಿಗೆ ಕ್ಷೇಮ ವಾರ್ತೆ ಅರುಹಿ ಮುದ್ರಿಕೆ ಕೊಟ್ಟುಶಿರೋರತ್ನವನ್ನು ತಂದದಷ್ಟೇ ಅಲ್ಲದೆ. ಇಡೀ ಲಂಕಾ ಪಟ್ಟಣವನ್ನೆಲ್ಲ ಅಗ್ನಿ ದೇವರಲ್ಲಿ ಹೋಮಿಸಿ ಒಂದೇ ದಿನದಲ್ಲಿ ೮೦ ಕೋಟ್ಟಿ ದೈತ್ಯರನ್ನು ಸಂಹರಿಸಿದ್ದನ್ನು ನಾವೆಲ್ಲರೂ ಎಷ್ಟೊಂದು ವರ್ಣಿಸಿದರೂ ತೀರದು. ಸ್ವಾಮೀ ಇವನ ಬಲ, ಧೈರ್ಯ ಶೌರ್ಯಾದಿಗಳನ್ನು ಆಕಾಶದಲ್ಲಿ ದೇವತೆಗಳೆಲ್ಲ ನೆರೆದು ನೋಡುತ್ತಿದ್ದು ಲಂಕಾ ದಹನ ಮಾಡಿದ ಮಹತ್ವವನ್ನು ವರ್ಣಿಸಿದರೂ ಮಹಾದೇವರು ಮುಪ್ಪುರ ವಹಿಸಿದ್ದೇನು ದೊಡ್ಡ ಮಾತು? ಮಾರುತಿಯೊಬ್ಬನೇ ಅಂಥಾ ಲಂಕಾ ಪಟ್ಟಣ ದಹಿಸಿ ೮೦ ಕೋಟಿರಾಕ್ಷಸರನ್ನು ನಾಶಮಾಡಿ ಸ್ವಾಮಿಯ ಕಾರ್ಯ ಮಾಡಿದವರಲ್ಲಿ ಇವನ ಸಮಾನರ್ಯಾರೂ ಇಲ್ಲವೇ ಇಲ್ಲ ಅಂತಾ ಹೊಗಳಿ ಸುತ್ತಿಸುತ್ತಿದ್ದರು ಇಂಥ ನಿಮ್ಮ ಭಕ್ತಶಿರೋಮಣಿಯು ಮಾಡಿದ ಕಾರ್ಯವನ್ನೆಲ್ಲ ನಿವೇದಿಸಿದ್ದೇನೆ ಅಂತಾ ಹೇಳುವಾಗ ಶ್ರೀರಾಮನು ಮಾರುತಿಯ ಕಡೆಗೆ ನೋಡಿದನು

ಆಗ್ಗೆ ಹನುಮಂತನು ತನ್ನ ಕಡೆಗೆ ಕೃಪಾದೃಷ್ಟಿಯಿಂದ ನೋಡುತ್ತಿರುವ ಶ್ರೀರಾಮ ಚಂದ್ರನಿಗೆ ಬಲಹಸ್ತ ಮುಷ್ಟಿಯೊಳಗೆ ಹಿಡಿದಿದ್ದ ಚೂಡಾರತ್ನವನ್ನು ಎರಡೂ ಕೈಗಳಿಂದ ನಯ, ಭಯ, ಭಕ್ತಿಯಿಂದ ಸಮರ್ಪಿಸಿದನು. ಅವನಿಜೆಯು ಕೊಟ್ಟ ಶಿರೋರತ್ನವನ್ನು ಕಿಂಕರ ರತ್ನನಾದ ಹನುಮಂತನು ಅವನೀಶ್ವರ ರತ್ನನಾದ ಶ್ರೀರಾಮಚಂದ್ರನಿಗೆ ಅರ್ಪಿಸಲು ಆತಿಶಯ ಸಂತೋಷಯುಕ್ತನಾಗಿ ಅದನ್ನು ನಿದ್ರಾ ಆಹಾರಗಳನ್ನು ತೊರೆದು ಕೇವಲ ನಿಮ್ಮ ನಾಮಾಮೃತ ಪಾನದ ಬಲದಿಂದಲೇ ಜೀವಿಸಿರುವಳು ಜಡೆ ಕೂಡಾ ಹಾಕದೇ ದೀನಳಾಗಿ ಕೃಶಳಾಗಿದ್ದಾಳೆ. ೧ ತಿಂಗಳೊಳಗೇ ನಿಮ್ಮ ಶುಭ ಚರಣಗಳ ದರುಶನವಾಗದಿದ್ದರೆ ಜೀವಕ್ಕ ಈ ದೇಹದಲ್ಲ ಸ್ಥಳವೇ ಇರದೆಂದು ಹೇಳಿದ್ದಾಳೆಂದು ಹೇಳಿ ಲಕ್ಷ್ಮಣನ ಕಡೆಗೆ ತಿರುಗಿ ನೋಡಿ, “ ಸುವರ್ಣ ಜಿಂಕೆಯನ್ನು ತರಲು ಶ್ರೀರಾಮನು ತೆರಳಿದಾಗ್ಗೆ ಒಂದು ಆಡಬಾರದ ಮಾತನ್ನು ಆಡಿದ್ದೆ ಅದರ ದೋಷದಿಂದ ಈಗ ಕಷ್ಟ ಆನುಭವಿಸುತ್ತಿದ್ದೆನೆಂದು ಲಕ್ಷ್ಮಣನಿಗೆ ತಿಳಿಸೆಂದು” ಹೇಳಿದ್ದಾಳೆಂದು ಹೇಳಿದನು.

ಆ ಶಿರೋರತ್ನವನ್ನು ನೋಡುತ್ತಾ ಪ್ರತ್ಯಕ್ಷ ಸೀತೆಯನ್ನು ಕಂಡಂತೆ ಆನಂದ ಪಟ್ಟು ಇದೇ ಅಲ್ಲವೇ ಲಕ್ಷ್ಮಣಾ? ಅನ್ನಲು ಅವನು ನಾನು ಆ ಮಾತೆಯ ಯಾವ ಆಭರಣಗಳನ್ನು ನೋಡೇ ಇಲ್ಲ. ಕಾಲಲ್ಲಿಯ ಕಾಲುಂಗುರ ಮಾತ್ರ ನಿತ್ಯ ಅವಳಿಗೆ ನಮಸ್ಕರಿಸುತ್ತಿದ್ದಾಗ್ಗೆ ನೋಡುತ್ತಇದ್ದೆನೆಂದು ಹೇಳಿ ತನ್ನ ಕೈಯಲ್ಲಿ ರಾಮನು ಕೊಟ್ಟ ಆ ಶಿರೋಮಣಿಯನ್ನು ದಿನ ಮಣಿಯ ಸುತನಾದ ಸುಗ್ರೀವನ ಕೈಯೆಳಗೆ ಇದನ್ನು ಕೊಡುತ್ತಾ “ ಜಾನಕಿಯ ಆಭರಣಗಳೆಲ್ಲ ನೀನೇ ಇಟ್ಟಿರುವಿ ಅದರ ಜೊತೆಗೇ ಇದನ್ನು ಇಡು. ಅವಳು ಬಂದ ನಂತರ ಕೊಡಬಹುದು; ನೀನು ನಮಗೇ ಅನ್ಯನಲ್ಲ. ನಮ್ಮ ವಂಶಜನೇ ಆಗಿರುವಿ” ಎಂದು ನುಡಿದನು. ಇಷ್ಟಾದ ಬಳಿಕ ಶ್ರೀರಾಮಚಂದ್ರನು ಸುಗ್ರೀವನಿಗೆ,; ಈ ಹನುಮಂತನನ್ನು ಸ್ಮರಿಸುವರಿಗೆ ಬುದ್ದಿರ್ಬಲಂ, ಯಶೋಧೈರ್ಯ, ನಿರ್ಭಯತ್ವಂ ಅರೋಗತಾಮ್. ಅಜಾಡ್ಯಂ ವಾಕ್ಷಟು ತ್ವಂಚ ಹನುಮಂತ ಸ್ಮರಣಾಧ್ಭವೇತ್. ಎಂಬ ಗ್ರಂಥಾರ್ಥದಂತೆ ಈ ಅಷ್ಟು ಗುಣಗಳು ಪ್ರಾಪ್ತವಾಗುವವು. ಈತನು ನಮಗೆ ಶಿಷ್ಯನಾಗಿದ್ದರಿಂದ ನಮ್ಮ ಕೀರ್ತಿ, ಶೌರ್ಯಗಳೆರಡೂ ನ್ಯೂನ ರಹಿತವಾಗಿ ಯಾವತ್ತೂ ಸದಕಾಲ ಬೆಳೆಯುವಂತಾಯಿತು ನಮ್ಮ ಪುಣ್ಯಕ್ಕೆ ಸಮಾನವಿಲ್ಲ” ವೆಂದು ಹೇಳಿ ಮುಖ್ಯಪ್ರಾಣನಿಗೆ ಮುಖ್ಯಪ್ರಾಣಾಂತರ್ಗನಾದ ಸಮಸ್ತ ಭದ್ರ ಫಲದಾಯಕನಾದ ಶ್ರೀರಾಮಚಂದ್ರನು, “ಕೇಳು ಹನುಮಂತಾ, ಸೂರ್ಯ ವಂಶ ಶ್ರೇಷ್ಠನಾದ ದಶರಥ ರಾಜನಿಗೆ ನಾವು ನಾಲ್ಕು ಜನ ಮಕ್ಕಳೆಂದು ಇಷ್ಟದಿನ ತಿಳಿದಿದ್ದೇವು. ನೀನು ಇವತ್ತಿನಿಂದ ೫ನೇ ಯವನೆಂದು ನಮ್ಮ ಅಂತರಂಗದಲ್ಲಿ ತಿಳಿದಿದ್ದೇವೆ.ಒಂದು ದೇಹಕ್ಕೆ ಪಂಚಪ್ರಾಣಗಳಿರುವಂತೆ ಆಗ ಪೂರ್ಣವಾಯಿತು, ಸದ್ವಜ್ರಕಾಯನಾದ ಪ್ರಾಣರಾಯಾ ಭಾಗವತಗೇಯಾ, ಭೃತ್ಯನೀನಲ್ಲ ನಮ್ಮೊಡ ಹುಟ್ಟಿದವನೇ, ಎನ್ನ ಚಿನ್ನರನ್ನ ಪರಮ ಪಾವನಾ” ಎಂದು ನಾನಾ ರೀತಿಯ ವಿಶೇಷಣಗಳಿಂದ ದೂರದಲ್ಲಿ ಕೈಮುಗಿದು ತಲೆ ಬಾಗಿ ನಿಂತಿರುವ ಹನುಮಂತನ ಸಮೀಪಕ್ಕೆ ಬಾರೆಂದು ಕರೆದು ಪರಮ ಲಕ್ಷಣವಾದ ಶ್ರೀರಮಾರೂಪಿಯಾದ ಸೀತಾ ದೇವಿಯನ್ನು ತಕ್ಕ್ಯೆಸುವ ಆಜಾನು ಬಾಹುಗಳಿಂದ ಗಾಢಾಲಿಂಗನವನ್ನು ಮಾಡಿ ತನ್ನ ಸಮುಖದಲ್ಲಿ ಕುಳ್ಳಿರಿಸಿಕೊಡು ಅಕ್ಕರೆಯಿಂದ ಮೈಮೇಲೆ ಕೈಯಾಡಿಸಿ ವಜ್ರಾಂಕುಶಧ್ವಜಗಳ ರೇಖೆಗಳಿಂದ ಮಂಗಲಕರವಾದ ತನ್ನ ಅಭಯ ಹಸ್ತವನ್ನು ಅವನ ತಲೆಯ ಮೇಲಿರಿಸಿ ಅನುಗ್ರಹ ಪೂರ್ವಕವಾಗಿ ಭವಿಷ್ಯದ್ಬ್ರ ಹ್ಮನಾಗೆಂದು ಆಶೀ ರ್ವಾದ ಮಾಡುತ್ತಿರಲು ಸಮಸ್ತವಾದ ಕಪಿ ಸಮೂಹವೆಲ್ಲಾ ಸಮುದ್ರ ಘೋಷದಂತೆ ಜಯಜಯವೆಂದು ಒದರುವ ಶಬ್ದಗಳು ಭೋರ್ಗರೆಯುವದು ಇಡೀ ಬ್ರಹಾಂಡದ ತುಂಬೆಲ್ಲ ಭೋರ್ಗರೆದು ಪ್ರತಿಧ್ವನಿಸಿದವು.

ಆಕಾಶದಲ್ಲಿ ನೆರೆದು ನೋಡುತ್ತಿರುವ ದೇವತೆಗಳ ಸಮೂಹವೆಲ್ಲ ಆನಂದದಿಂದ ದುಂಧುಭಿಧ್ವನಿ ಮಾಡುತ್ತಿರಲು ತುಂಬುರು ನಾರದರು ವೀಣಾ ಬಾರಿಸುತ್ತಾ ಹರಿ ವಾಯುಗಳ ಮಹಿಮೆ ಪಾಡುತ್ತಿರಲು ಗಂಧರ್ವರ ಗಾಯನಗಳು ರಂಭಾದಿ ಅಪ್ಸರೆಯರನಾಟ್ಯಗಳಿಂದಲೂ, ಸಂತೋಷದಿಂದ ದೇವತೆಗಳು ಪುಷ್ಪ ವೃಷ್ಟಿ ಮಾಡುತ್ತಾ ಭೂಮ್ಯಾಕಾಶಗಳಲೆಲ್ಲಾ ಕಡೆಗೂ ಎಲ್ಲರಿಗೂ ಆಲ್ಹಾದವಾಯಿತೆಂದು ಹೇಳಿದ ವಾಲ್ಮೀಕಿ ಮುನಿಗಳಿಗೆ ಮುಂದೆ ಶ್ರೀರಾಮರ ಸೇವೆಯನ್ನು ಹುನುಮಂತನು ಏನೇನು ಮಾಡಿದನು? ಅಂತಾ ಕೇಳಿದ ಕುಶ ಲವರಿಗೆ ಮುಂದಿನ ಚರಿತ್ರೆಯನ್ನು ಹೇಳತೊಡಗಿದರು. ಇಷ್ಟಾದ ಬಳಿಕ ಅಗಣಿತವಾದ ಕಪಿಸೇನೆ ಸಹಿತವಾಗಿ ಸಮುದ್ರಕ್ಕೆ ಬರುತ್ತಲೇ ಮಹಾಹರಿಭಕ್ತ. ವಿಭೀಷಣನು ರಾವಣನ ದುರ್ನಡತೆಗಳಿಗೆ ಬೇಸರಿಸಿ ಶ್ರೀರಾನ ಸನ್ನಿಧಿಗೆ ಬಂದನು. ಅದನ್ನು ನೋಡಿ ಸುಗ್ರೀವನೇ ಮೊದಲಾಗಿ ಸರ್ವರೂ ಯುದ್ಧ ಪ್ರಸಂಗದಲ್ಲಿ ಬಂದಂಥ ಶತ್ರು ಪಕ್ಷದನಾದ್ದರಿಂದ ಇವನನ್ನು ನಮ್ಮೂಳಗೆ ಸೇರಿಸಿಕೊಳ್ಳವದು ಯೋಗ್ಯವಲ್ಲ. ಅಂತಾ ನುಡಿಯುತ್ತಿರಲು ಶ್ರೀರಾಮನು ಮಾರುತಿಯ ಕಡೆಗೆ ನೋಡಿದನು. ಆಗ ಅವನು, “ಸ್ವಾಮೀ ಇವನು, ಒಳ್ಳೇಯೋವನಿದ್ದು ಯುದ್ದದ ನಂತರ ಲಂಕೆಗೆ ಇವನನ್ನೇ ರಾಜನನ್ನಾಗಿ ಮಾಡಬೇಕೆಂದು ನಿವೇದಿಸಿದನು. ಅದಕ್ಕಾಗಿ ಮಾರುತಿಯ ಮಾತಿನಂತೆ ಅಲ್ಲಿಯೇ ವಿಭೀಷಣನಿಗೆ ಅಭೀಷೇಕ ಮಾಡಿ ಲಂಕೆಯ ಭಾವೀರಾಜನೆಂದು ಸಾರಿದನು. ಹನುಮನ ಮತವೇ ಹರಿಮತವೆಂದು ಎಲ್ಲ ಕಪಿ ಸೈನ್ಯವೂ ಜೈ ಜೈ ಕಾರ ಮಾಡಿದರು.

ಆಮೇಲೆ ೧೦೦ ಯೋಜನವರೆಗೆ ಈ ಸೈನ್ಯವನ್ನೆಲ್ಲ ಸಾಗಿಸಲು ಸೇತುವೆ ಕಟ್ಟುವ ಬಗೆಹೇಗೆ? ಬಿಟ್ಟೂಬಿಡದೆ ದೊಡ್ಡ ತೆರೆಗಳಿಂದ ಭೋರ್ಗರೆಯುವದರಿಂದ ಅಸಾದ್ಯ ವೆನಿಸಲು ರಾಮನು ಸಮುದ್ರ ರಾಜನಿಗೆ ಶಾಂತನಾಗೆಂದು ಹೇಳಿದನು. ಅವನು ಆಮಾತನ್ನು ಉದಾಸೀನಮಾಡ್ಡಿದ್ದನ್ನು ಕಂಡು ಕೈಯಲ್ಲಿದ್ದ ಧನುಸ್ಸಿಗೆ ಬಾಣ ಹೂಡ್ಡಿದ್ದನ್ನು ನೋಡಿ ಸಮುದ್ರ ರಾಜನು ಗಾಬರಿಗೊಂಡು ಕ್ಷಮೆಬೇಡುತ್ತಾ ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡಿ ಅನುಕೂಲ ನಾದನು. ಆಗ್ಗೆ ಎಲ್ಲ ಕಪಿಗಳೂ ತಮ್ಮ ತಮ್ಮ ಯೋಗ್ಯತೆ ಯಂತೆ ದೊಡ್ಡ ಕಲ್ಲಿನಿಂದ ಹಿಡಿದು ಚಿಕ್ಕದೊಡ್ಡ ಗುಡ್ಡಗಳನ್ನು ಸಹ ತಂದು ತಂದು ಸಮುದ್ರದಲ್ಲಿ ಹಾಕುತ್ತಿರಲು ಗುಣಧರ್ಮದಂತೆ ಅವುಗಳೆಲ್ಲ ಮುಳುಗುತ್ತಿರಲು ಹನುಮಂತನ ಆಜ್ಞೆಯಂತೆ ಪ್ರತಿಯೊಂದರ ಮೇಲೆಯೂ ಶ್ರೀರಾಮ ಅಂತಾ ಬರೆದು ಹಾಕುತ್ತಾ ಬರಲು ಅವುಗಳು ಮುಳಗಲಿಲ್ಲ. ಇದ್ದೆಲ್ಲದರಿಂದ ೩೦ ಯೋಜನ ವಾಯಿತು ಈ ಕಾರ್ಯ ಸ್ವಾಮಿ ಸೇವೆ ಎಂದು ಭಕ್ತಿಯಿಂದ ಒಂದು ಆಳಿಲು ಕೂಡಾ ಬಂದು ಹುಡಿಯೊಳಗೆ ಹೊರಳಿ ಬಂದು ಸೇತುವೆ ಕಟ್ಟುವ ಸ್ಥಳದಲ್ಲಿ ಮೈಝಾಡಿಸುತ್ತಾ ಅಷ್ಟಷ್ಟರಂತೇ ಮಣ್ಣು ತಂದು ಸೇವೆಸಲ್ಲಿಸಿತಂತೆ.

ಮುಂದೆ ಉಳಿದ ೭೦ ಯೋಜನ ಮಾರುತಿ ತಾನೊಬ್ಬನೇ ಪೂರ್ಣ ಮಾಡಿದನು ಎಲ್ಲವನ್ನೂ ತಾನೇ ಮಾಡುವದು ಅವನಿಗೊಬ್ಬನಿಗೇ ಸಾಧ್ಯವಿದ್ದರೂ ಶ್ರೀರಾಮರ ಸೇವೆ ಭಕ್ತಿಯಿಂದ ಮಾಡುವ ಅವಕಾಶವನ್ನು ಅಳಿಲು, ಹಾಗೂ ಎಲ್ಲ ಕಪಿಗಳಿಗೂ ಕೊಟ್ಟದ್ದು. ನಂತರ ಯುದ್ಧ ಸುರುವಾಗಿ ಆನೇಕ ಪ್ರಮಖ ರಾಕ್ಷಸರೆಲ್ಲರೂ ಮರಣಿಸಿದ್ದನ್ನು ನೋಡಿ ರಾವಣನೇ ರಥದಲ್ಲಿ ಕುಳಿತು ದರ್ಪದಿಂದ ಎದುರಾದ ಕೊಡಲೇ ರಥವನ್ನು ಕಾಲಿನಿಂದ ಮಾರುತಿ ಒದ್ದದ್ದುಕ್ಕೆ ನೂರು ಯೋಜನ ಹಾರಿಹೀಗಿ ಬಿದ್ದಿತು. ೨ನೇ ಸಾರೆಯೂ ಇದರಂತೇ ರಾವಣನನ್ನು ಅರೆಜೀವ ಮಾಡಿ ನೀನು ರಾಮನಿಂದ ಸಾಯಬೇಕೆಂದು ಜೀವದಿಂದುಳಿಸಿದ್ದೇನೆಂದು ಹೇಳಿದನು, ಸಹಾಯಕ್ಕೆ ಕುಂಭಕರ್ಣನನ್ನೆಬ್ಬಿಸಲು ಅವನು “ಅಣ್ಣಾ ಸೀತೆಯನ್ನು ತಂದದ್ದೇ ಮೂರ್ಖತನ. ವಿಭೀಷಣನ ಮಾತಿನಂತೆ ನಡೆಯದೇ ಇಂಥ ಪ್ರಸಂಗ ತಂದುಕೊಂಡಿದ್ದೀ ಒಂದೇ ಕಪಿ ಬಂದು ೮೦ ಕೋಟಿರಾಕ್ಷಸರನ್ನು ಅರ್ಧದಿನದಲ್ಲಿ ಸಂಹರಿಸಿ ಸುಂದರವಾದ ಲಂಕಾನಗರವನ್ನು ಭಸ್ಮಮಾಡಿದ್ದು ತಿಳಿದೂ ತಿಳಿದೂ ಉದಾಸೀನನಾದಿ ಈಗ ಅಂಥಾ ಕಪಿಗಳನೇಕ ಸೈನ್ಯವಲ್ಲದೇ ಅವನ ಸ್ವಾಮಿ ಕೂಡಾ ಬಂದಿದ್ದಕ್ಕಾದರೂ ನಿನಗೆ ಭಯದಿಂದ ಬುದ್ದಿ ಬರಲಿಲ್ಲವಲ್ಲಾ. ಈಗಲಾದರೂ ಸೀತೆಯನ್ನು ತಂದು ರಾಮನಿಗೊಪ್ಪಿಸಿ ಇನ್ನೂ ಆಗುವ ನಾಶವನ್ನು ತಪ್ಪಿಸಿಕೊಂಡು ಬದುಕು ಸೀತೆಯನ್ನು ತಂದದ್ದೆ ಮೊದಲನೆಯ ತಪ್ಪು. ವಿಭಿಷಣನ ಮಾತಿಗೆ ಬೆಲೆ ಕೊಡದೆ ೨ನೇ ತಪ್ಪು ಮಾಡಿದಿ. ಈಗ ನನ್ನ ಮಾತಿಗಾದರೂ ಒಪ್ಪದೇ ೩ನೇ ತಪ್ಪನ್ನು ಮಾಡಬೇಡ, ವಿಚಾರಿಸು “ ಅಂದೆನಲು ನನಗೆ ಯಾರು ಬುದ್ಧೀ ಹೆಳುವ ಅವಶ್ಯಕತೆ ಇಲ್ಲ. ತೀವ್ರ ನಡೆ ಅಂದದ್ದಕ್ಕೆ ಅವನೂ ಹೊರಟು ಬಂದು ಎದುರಾದನು. ಆಕಾಶದಲ್ಲಿ ನೆರೆದು ನೋಡುತ್ತಿದ್ದಾಗ್ಗೆ ಮಾರುತಿಯೇ ಶ್ರೀರಾಮನಿಗೆ ರಥವಾಗಿದ್ದದ್ದನ್ನು ನೋಡಿ ಇಂದ್ರನು ಅನೇಕ ರಥಗಳನ್ನು, ಸಾರಥಿಗಳನ್ನು ಸಹ ಕಳಿಸಲು ದ್ವ್ಯೆರಥ ಸಂಗ್ರಾಮ ನಡೆದು ಸುಗ್ರೀವ ಲಕ್ಷ್ಮಣರು ಸಹಿತ ಅನೇಕ ಕಪಿಗಳನ್ನು ದೈತ್ಯರು ನಿರ್ಜೇವ ಮಾಡಿದ್ದನ್ನು ಕಂಡು ಶ್ರೀರಾಮನಾಜ್ಞೆ ಯಿಂದ ಸಂಜೀವನೀ ತರಲು ಹೀಗಿ ಔಷಧಿ ಹುಡುಕುವದರಲ್ಲಿ ವೇಳೆ ಹೋಗಬಾರದೆಂದು ಪರ್ವತವನ್ನೇ ಕಿತ್ತಿತಂದು ಅವರ ಜೀವ ಉಳಿಸಿ ಶ್ರೀರಾಮನನ್ನು ಮೆಚ್ಚಿಸಿದನು.

ಆ ಪರ್ವತ ಇಲ್ಲಿಯೇ ಉಳಿದರೆ ದೈತ್ಯರೆಲ್ಲ ಅದರ ಗಾಳಿ ಯಿಂದ ಜೀವಿಸುವರೆಂದು ನಿಂತಲ್ಲಿಂದಲೇ ಎತ್ತಿ ಬೀಸಿ ಒಗೆದರೆ ಅದು ಕಿತ್ತಿತಂದ ತೆಗ್ಗಿಗೇ ಹೋಗಿ ಕಿತ್ತಿದ್ದಗುರುತು ಸಿಗದಂತೆ ಗಟ್ಟಿಯಾಗಿ ಕೂತಿತು. ಇಂಥಾ ಮಹಾತ್ಮೆಯ ಮಾರುತಿಯು ಇಷ್ಟೆಲ್ಲವನ್ನೂ ಒಮ್ಮೆ ರೆಪ್ಪೆ ಬಡಿಯುವದರೊಳಗೇ ಮಾಡಿದ್ದು. ಇದಾದ ಬಳಿಕ ರಾಮ, ರಾವಣರ ಯುದ್ಧ ಒಳ್ಳೇ ರಭಸದಿಂದ ನಡೆದು ರಾವಣ ಕುಂಭಕರ್ಣರನ್ನು ರಾಮನು ಸಂಹಾರ ಮಾಡಿದನು ಇಂದ್ರಜಿತುನನ್ನು ಲಕ್ಷ್ಮಣನು ಸಂಹಾರ ಮಾಡಿದನು. ಈ ಮಾತೆಯಾದ ಸೀತಾದೇವಿಗೆ ಹೇಳಿ ಅವಳನ್ನು ಕರೆತಂದು ಶ್ರೀರಾಮರ ದರ್ಶನಾನಂದ ಮಾಡಿಸಿದನು.

ಎಲ್ಲ ಮದಾಂಧರಾದ ದುಷ್ಟ ದೈತ್ಯರನ್ನು ಸಂಹಾರ ಮಾಡಿ ಭೂಭಾರ ಅರ್ಧ ಭಾಗ ಇಳಿಸಿದ ಈ ಮಾರುತನನ್ನು ವರ್ಣಿಸುತ್ತಾ ಶ್ರೀರಾಮಚಂದ್ರನು ಸೀತಾದೇವಿಗೆ ಮೊದಲಿನಿಂದ ಎಲ್ಲವನ್ನು ಹೇಳುತ್ತಾ ಇರಲು. ಅವಳು ಕೂಡಾ ತಾನು ಅನಾಥಳಾಗಿ ದುರುಳರ ಕಾವಲಿನಲ್ಲಿ ಕಷ್ಟ ಪಡುತ್ತಿದ್ದ ಜೀವಿತವನ್ನೇ ಕೊನೆಗಾಣಿಸುವ ಸಮಯದಲ್ಲಿ ಪ್ರಾಣ ರಕ್ಷಿಸಿದ್ದಲ್ಲದೇ, ಸ್ವಲ್ಪವೂ ವಿರಮಿಸದೇ ಇಷ್ಟ ತೀವ್ರ ಬಂದು ನನ್ನ ಬಂಧನ ಬಿಡಿಸುವದೆಂದರೆ ಯಾರಿಂದ ಸಾಧ್ಯ? ಸ್ವಾಮೀ, ನಿನ್ನ ಈ ಶ್ರೇಷ್ಠ ಭಕ್ತೋತ್ತಮನಿಗೆ ಏನೇನು ಕೊಟ್ಟರೂ ಸಾಲದೆಂದು ಹೇಳಿ ಕೃಪಾದೃಷ್ಟಿಯಿಂದ ನೋಡುತ್ತಾ ಹತ್ತಿರ ಕರೆದು ಕೂಡಿಸಿಕೊಂಡು ತನ್ನ ವರದ ಹಸ್ತದಿಂದ ಮೈಮೇಲೆ ಕೈಯಾಡಿಸುತ್ತಾ ನಿನ್ನಂಥಾ ದೂತರೂ ೧೪ ಲೋಕಗಳಲ್ಲಿ ಇರರು. ಎಂದು ಅನಂದಾಶ್ರುವಿನಿಂದ ನುಡಿದಳು.

ಇದೆಲ್ಲವನ್ನು ಆಕಾಶದಲ್ಲಿ ನೆರೆದ ದೇವತೆಗಳು ನೋಡಿ ಹೂಮಳೆಗರೆದು ದೇವದುಂದುಭಿಗಳನ್ನು ಮೊಳಗಿಸಿದರು. ಆಮೇಲೆ ವಿಭಿಷಣನಿಗೆ ಲಂಕಾರಾಜ್ಯದ ಅಧಿಕಾರ ಪಟ್ಟಕಟ್ಟಿದ ನಂತರ ಇಂದ್ರನಿಂದ ಕಳಿಸಲ್ಪಟ್ಟ ಪುಷ್ಪಕ ವಿಮಾನವನ್ನೇರಿ ಅಯೋಧ್ಯೆಗೆ ಹೊರಟರು. ಮಾರ್ಗದಲ್ಲಿ ಭರದ್ವಾಜ ಋಷಿಗಳು ತಮ್ಮಲ್ಲಿ ಆತಿಥ್ಯ ಪಡೆದು ತೆರಳಲು ಆಗ್ರಹಪಡಿಸಿದ್ದರಿಂದ ಸೀತಾ, ಲಕ್ಷ್ಮಣ, ಸಮೇತ ಸ್ವಲ್ಪ ವೇಳೆ ಅಲ್ಲಿರುವದರಿಂದ ಭರತನಿಗೆ ವಾರ್ತೆಯನ್ನು ತೀವೃವಾಗಿ ತಿಳಿಸದ್ದಿದ್ದರೆ ಅವನು ಅಗ್ನಿಪ್ರವೇಶ ಮಾಡುವನೆಂದು ಅರಕ್ಷಣದೊಳಗೆ ತಮ್ಮ ಆಗಮನವನ್ನು ತಿಳಿಸುವಂಥಾ ಸಮರ್ಥನು ಇಷ್ಟೆಲ್ಲ ಸೈನ್ಯಗಳೊಳು ಹನುಮಂತ ನೆಂದೇ ತಿಳಿದಿರುವ ಸ್ವಾಮಿಯು ಅವನಿಗೇ ಈ ಮಹತ್ಕಾರ್ಯವನ್ನು ಆಜ್ಞೆ ಮಾಡಿದನು. ಶ್ರೀರಾಮನ ಬಾಯಿಂದ ಈ ಮಾತು ಹೊರಡುವದೊಂದೇ ತಡ. ಕಿಂಕರ ರತ್ನನು ಮನೋವೇಗದಿಂದ ಹೊರಟು., ಬಂದ ರಾಮ. “ ಅಂತಾ ೧ಬಲಹಸ್ತ ಮೇಲೆತ್ತಿಕೊಡೇ ಒಂದು ಶ್ವಸ ಬಿಡುವದರೊಗಳಗೇ ಭರತನ ಹತ್ತಿರವೇಬಂದನು. ಇಷ್ಟರೊಳಗೆ ಚಿತೆ ತಯಾರಿಸಿ ೧ ಪ್ರದಕ್ಷಿಣ ಹಾಕಿ ೨ ನೇದು ಸತ್ತುತ್ತಿರುವ ವೇಳೆಗೇ ಬಂದ ಅಂತಾ ಉಚ್ಚರಿಸಿದ್ದು ಕಿವಿಗೆ ಬಿದ್ದು ಕಿವಿಗೆ ಬಿದ್ದು ಮೇಲೆನೋಡುತ್ತಿರಲು ರಾಮ ಎಂಬದು ಕೇಳಿಸುವ ವೇಳೆಗೆ ಎದುರಿಗೆಕಾಣಿಸಿದ ಈ ಹನುಮಂತನನ್ನು ಕಂಡನು.

ಆಶೋಕ ವನದಲ್ಲಿದ್ದ ಸೀತೆಗೆ ಹೇಗೆ ಕ್ಷೇಮ ಅಂತಾ ಉಚ್ಚಾರದ ನಂತರ ರಾಮ ಅಂತಾ ಹೇಳಿದನೋ. ಇಲಿ ಕೂಡಾ ಬಂದ ಅಂತಾ ಹೇಳಿ ರಾಮನ ಬಂದ ರಾಮ. ಅಂದದ್ದರಿಂದ ಇವನಿಗೂ ಜೀವದಾನ ಮಾಡಿದ್ದನ್ನು ಎಲ್ಲಕಡೆಗೆ ಮಾರುತಿಯ ವಿಗ್ರಹಗಳು ರಾಮನಾಗಮನ ಹೇಳುವಂತೇ, ಓಡಿದಂತೆ ಮತ್ತು ಬಲ ಹಸ್ತ ಮೇಲೆತ್ತಿದಂತೇ ಇರುವದು ಕಂಡುಬರುತ್ತಿ. ಕೆಲವು ಕಡೆಗೆ ಕೈಮುಗಿದದ್ದು ಮತ್ತು ಕುಳಿತು ವೀಣೆ ಬಾರಿಸಿವಂಥಾದ್ದು ಮತ್ತು ದಕ್ಷಿಣೇ ಲಕ್ಷ್ಮಣೋಯಸ್ಯ ಶ್ಲೋಕದಂತೆ ಶ್ರೀರಾಮನ ಪಾದದಡಿ ಕೈಜೋಡಿಸಿ ಮಂಡೆಯಾರಿ ಕುಳಿತದ್ದು ಇರುವದು. ಭರತನು ಈ ವಾರ್ತೆ ಕಿವಿಗೆ ಬಿದ್ದೊಡ್ಡನೇ ಆನಂದೋದ್ರೇಕದಿಂದ ಹನುಮಂತನನ್ನಪ್ಪಿಕೊಂಡು, “ನನ್ನ ಅಣ್ಣನನ್ನು ನೋಡುವ ಭಾಗ್ಯ ಕರುಣಿಸಿದ ಮಹಾತ್ಮನೇ ನನ್ನ ಜೀವ ಉಳಿಸದ್ದಷ್ಟೇ ಮಹತ್ವವಲ್ಲ ನಮ್ಮಮಾತೆಯರ ಮತ್ತು ಇಡಿ ಅಯೋಧ್ಯಾನಗರದ ಜೀವದಾನ ಮಾಡಿದ ಪುಣ್ಯಾತ್ಮನೇನೀನು” ಎಂದು ಪರಿಪರಿಯಾಗಿ ಸ್ತೋತ್ರಮಾಡಿ ನಂತರ ಶ್ರೀರಾಮನನ್ನುವಾದ್ಯ ವೈಭವಗಳಿಂದ ಎದುರುಗೊಂಡು ಕರೆತರಲು ಸಿದ್ದತೆ ಮಾಡುತ್ತಿರಲು ವಿಮಾನದಿಂದಿಳಿದ ಸೀತಾ ರಾಮ ಲಕ್ಷ್ಮಣರನ್ನು ಜೊತೆಗೆ ಬಂದ ವಿಭೀಷಣ ಸುಗ್ರೀವ ಮುಂತಾದವನ್ನು ಕಪಿಸೈನ್ಯ ಸಮೂಹವನ್ನು ಜಯಜಯಕಾರ ಮಾಡುತ್ತಾ ಪಟ್ಟಣ ಪ್ರವೇಶವನ್ನು ಅಣ್ಣನೊಂದಿದಗೆ ಅವತ್ತೇ ಭರತನು ತಾನೂ ಮಾಡಿದನು. ಶ್ರೀರಾಮನು ವಿಮಾನದಿಂದಳಿಯುತ್ತಲೇ ಮೊದಲು ಕೈಕೇಯಿಗೆ ಆಮೇಲೆ ಆ ಇಬ್ಬರೂ ತಾಯಿಯರಿಗೆ ನಮಸ್ಕರಿಸಿ ಋಷಿಗಳಗೆ ಬ್ರಾಹ್ಮಣರಿಗೆ ನಮಸ್ಕಾರ ಮಾಡಿ ಪುರದ ಪ್ರಜಾ ಜನರಭಕ್ತಿ ಯಿಂದ ವಂದಿಸುತ್ತಿರಲು ಕೃಪಾದೃಷ್ಟಿ ಇಂದ ಎಲ್ಲರಿಗೂ ನೋಡುತ್ತಾ ಏಕಕಾಲಕ್ಕೇನೆ ದರ್ಶನ ಕೊಟ್ಟು ಎಲ್ಲರ ಯೋಗ ಕ್ಷೇಮ ವಿಚಾರಿಸಿ ಸಂತೋಷಡಿಸಿದನು.

ಮೊದಲದಿನವೇ ಭರತನ ಆಜ್ಞೆಯ ಮೇರೆಗೆ ಉತ್ಸಾಹದಿಂದ ಮಂತ್ರಿಗಳೂ ಋಷಿಗಳೂ ಶ್ರೀರಾಮನ ಪಟ್ಟಾಭಿಷೇಕದ್ದೆಲ್ಲ ಸುವ್ಯವಸ್ಥೆ ಯಿಂದ ತಯಾರಿಸಿದ್ದರು, ಮರುದಿವಸವೇ ದಂಪತಿಗಳನ್ನು ವಾದ್ಯವೈಭವದಿಂದ ಸಭೆಗೆ ಕರೆ ತಂದು ರತ್ನ ಖಚಿತ ಸುವರ್ಣ ಸಿಂಹಾಸನದಲ್ಲಿ ಶುಭ ಮೂಹೂರ್ತದಲ್ಲಿ ಕುಳ್ಳಿರಿಸಿ ವೇದಘೋಷಗಳಿಂದ ರಾಜಗುರುಗಳು ಪಟ್ಟಾಭಿಷೇಕವನ್ನು ವಿಜ್ರಂಭಣೆ ಯಿಂದ ಮಾಡಿದರು. ಎಡಬಲ ಲಕ್ಷ್ಮಣ, ಭರತ, ಶತೃಘ್ನರು ಚಾಮರಬೀಸುತ್ತಿರಲು ರಾಮನ ಪಾದದ ಬಳಿಯೇ ಶ್ರೀ ಮಾರುತಿ ಭಕ್ತಿ ಭಾವದಿಂದ ಕೈಮುಗಿದು ತಲೆ ಬಾಗಿ ಕುಳಿತಿರಲು ಶ್ರೀರಾಮನು ಅವನಿಗೆ ಭವಿಷದ್ಬ್ರಹ್ಮನಾಗೆಂದು ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದನು ಸೀತಾ ದೇವಿಯು ವಜ್ರದ ನವರತ್ನವನ್ನು ಅತ್ಯಂತ ಪ್ರೀತಿಯಿಂದ ಮಾರುತಿಗೆ ಕೊಟ್ಟಳು. ಆಮೇಲೆ ಶ್ರೀರಾಮ ದೇವರ ನೈವೇದ್ಯವಾದ ಪಾಯಸದ ಪಾತ್ರೆಯನ್ನು ಹನುಮಂತನು ತೆಗೆದು ಕೊಂಡು ಹಾರಿ ಹೋಗಿ ನದಿಯದಂಡೆಗೆ ನೆರೆದ ಎಲ್ಲ ಕಪಿ ಸೈನ್ಯಗಳಿಗೆಲ್ಲ ಪಾರಿತೋಷಕವೆಂಧು ಶ್ರೀರಾಮರ ಪ್ರಸಾದವನ್ನು ಕೊಟ್ಟನು. ಜ್ಞಾನ ಭಕ್ತ್ಯಾದಿಗಳು ವೃದ್ಧಿಂಯಾಗುವ ಪಾಯಸ.

ಅದುವೇ ಹರಿ ಪ್ರಸಾದ. ಅದನ್ನು ಸ್ವೀಕರಿಸಲು ಅನೇಕ ಋಷಿಗಳು, ದೇವತೆಗಳು ಕೂಡಾ ಪಶು ಪಕ್ಷಿಗಳ ರೂಪದಿಂದ ಬಂದಿದ್ದರಂತೆ, ಮುಂದೆ ಎಲ್ಲ ಉತ್ಸವಗಳೂ ವೈಭವದಿಂದ ಮುಕ್ತಾಯಗೊಂಡು ಸಕಲರೂ ಸಂತೋಷ ಭರಿತರಾಗಿರಲು ಮಾರುತಿಯನ್ನು ಕರೆದು ನೀನು ಇನ್ನು ಕಿಂಪುರಷ ಖಂಡದಲ್ಲಿ ನಮ್ಮನ್ನು ಸ್ಮರಿಸುತ್ತಾ ಆನಂದದಿಂದಿರು ಅದಲ್ಲದೇ ನಿನ್ನನ್ನು ಭಜಿಸುವರಿಗೆ ಇಷ್ಟಾರ್ಥಗಳನ್ನು ಕೊಡುತ್ತಾ ಅನೇಕರೂಪಗಳಿಂದ ಭಕ್ತರುದ್ಧಾರರ್ಥವಾಗಿ ಸರ್ವತ್ರದಲ್ಲಿಯೂ ಇದ್ದು ಒಂದು ರೂಪದಿಂದ ಸದಾನಮ್ಮಲ್ಲಿದ್ದು ನಮ್ಮನ್ನಾನಂದ ಗೊಳಿಸುತ್ತಿರು ನಮ್ಮಾಜ್ಞೆಯಿಂದ ಬಂದ ವಿಮಾನದಲ್ಲಿ ಕುಳಿತು ಪ್ರಯಾಣ ಮಾಡೆಂದು ಹೇಳಿ ಉಳಿದೆಲ್ಲ ಕಪಿಸೈನ್ಯಗಳಿಗೂ ಆಶೀರ್ವದಿಸಿ ನಿರೂಪಕೊಟ್ಟು ಕಳಿಸಿದನು. ಸ್ವಾಮಿಯ ಆಜ್ಞೆ ಶಿರಸಾ ವಹಿಸಿಕಿಂಪುರಷಕ್ಕೆ ಹೋಗಿ ಪಾರಿಜಾತ ವೃಕ್ಷದ ನೆರಳಿನಲ್ಲಿ ಕುಳಿತು ಧ್ಯಾನಮಾಡುತ್ತಿರುವ ಮಾರುತಿಗೆ ದೇವತಾ ಸ್ತ್ರೀಯರು ನೆರೆದು ನವರತ್ನದ ನಿರಾಂಜನದಿಂದ ಆರತಿ ಮಾಡಿದರು.

----------------------

ಮಂಗಳಂ ಶ್ರೀ ವಾಯು ಪುತ್ರಗೆ| ಜಯ ಮಂಗಳಂ| ಶುಭ

ಮಂಗಳಂ|| ಪ|| ಮಂಗಳಂ ಶ್ರೀಅಂಜನೇಯಗೆ ಮಂಗಳಂ

ಸದ್ವಜ್ರಗಾತ್ರಗೆ | ಮಂಗಳಂ ಚಾರು ಚರಿತರಗೆ | ಮಂಗಳಂ ಸತ್ಪವಿತ್ರಗೇ

ಶುಭ ಮಂಗಳಂ || ಅ||

ತ್ರೇತಾಯುಗದಲ್ಲಿ ರಾಮದೂತನಾಗಿ ಕಡಲ ದಾಟಿ ಸೀತಾ ಶೋಕವನ್ನೆ

|ಪರಿದಗೇ | ಅಕ್ಷದಿ ಕ್ಷೇರ ಯಾತು ದಾನವರನ್ನು ಸದೆದಗೇ | ಕಪಿಸೇನೆಗೆ ಪ್ರಾಣ

ದಾನನೆನ್ನಿಸಿಕೊಂಡಗೇ | ಹನುಮಂತ ನೆಂಬ ಖ್ಯಾತ ನಾಮದಿಂದಲಿ |

ಶ್ರೀನಾಥನ್ನ ಮೆಚ್ಚಿಸಿದಗೆ ||೧|| ದ್ವಾಪರದಿ ಶ್ರೀಕೃಷ್ಣನಾಪಾದ ಕಾನಂದವಾಗಿ|

ದ್ರೌಪದಗಿಷ್ಟಾರ್ಥ ವಿತ್ತಗೇ | ಧರ್ತರಾಷ್ಟ್ರಾದಿ ಭೂಪರನ್ನು ಕೊಂದ ಶೂರಗೇ

| ಕೀಚಕ ಮುಖ್ಯ ಪಾಪಿ ದೈತ್ಯರನ್ನೆ ಸದೆದಗೇ || ಶ್ರೀಭಿಮಸೇನ | ರೂಪದಲಿ

ಪಾಂಡವ ವಂಶಾಧಿಪ ನೆಂದೆನಿಸಿದವಗೇ ||೨||

ಕಲಿಯುಗದಿ ವಿಪ್ರ ವಂಶದೊಳಗೆ ಪುಟ್ಟಿ ವೇದವ್ಯಾಸರೊಲುಮೆಯ |

ಪಡೆದ | ದುರ್ಮತಗಳೆಂಬ | ಜಲನಿಧಿಗಳಸ್ತ್ಯನಾದಗೇ | ಹರಿ

ಸರ್ವೇಶ್ವರನೆಂದಿಳಿಯೊಳು ಸಾಧಿಸಿದಾಗೇ | ಸರ್ವಜ್ಞರಾಯ ಸಲೆ

ವೈಷ್ಣವಾಗ್ರಗಣ್ಯರೆಂದಲಘು ಮಹಿಮನಾದವಗೇ ||೩||

ಮುಂದ ವಿಷ್ಣು ನಾಭಿ ಕಮಲದಿಂದ ಪುಟ್ಟಿ ಬ್ರಹ್ಮನಾಗಿ | ಚಂದದಿಂ|

ಲೋಕಗಳ ಸ್ರಜಿಪಗೇ | ಅ ಪರ ಬ್ರಹ್ಮನೆಂದು ಪೊಗಳೆ ಪಾತ್ರ ನಾದಗೇ | ವಿನುತ

ಶಾಶ್ವತಾನಂದ ಸಾಂದ್ರ ಮಹಿಮನಾದಗೇ | ಹರಿಗೆ ಹಿಮ್ಮಗನೆಂದು

ವೇದಗಳಿಂದೊಂದ್ಯನಾದ ದೇ..ವಗೆ || ೪||

ದರೆಯೊಳಿಂತು ರೂಪವಾಂತು| ಸರಸಿಜಾಕ್ಷನ ಮೆಚ್ಚಿಸಿ ಗುರುತರ

ಕೀರ್ತಿಯ ಪಡೆದಗೇ| ತನ್ನ ನಂಬಿದ ಶರಣರಿಗೊರಗಳ ನೀವಗೇ| ಶ್ರೀಧರಗೆ

ಪೇಳಿ ಪರಮ ಮುಕ್ತಿಯನ್ನು ಕೊಡಿಪಗೇ| ಶ್ರೀ ಖಾದ್ರಿ ನರಹರಿಯ

ದಾಸಾಗ್ರಣಿಯಾದ ಸುಂದರ ಮುಖ್ಯಪ್ರಾಣರಾಯಗೇ ||೫||

-----------------------

ಶ್ರೀ ವಾದಿರಾಜಾಂತರ್ಗತ ಶ್ರೀ ಭಾರತಿ ರಮಣ

ಮುಖ್ಯಪ್ರಾಣಾಂತರ್ಗತ ಶ್ರೀರಾಮ ಕೃಷ್ಣ ವೇದವ್ಯಾಸಾತ್ಮಕ

ಶ್ರೀ ಅಶ್ವಿನೀ ಹಯುಗ್ರೀವಾಬಿನ್ನ ಶ್ರೀಕೃಷ್ಣಾರ್ಪಣವಸ್ತು

------------------------

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು