ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ವೇದವ್ಯಾಸರು

44. ವಿಭಜಿಸಿ ವೇದಗಳ ರಚಿಸಿ ಬ್ರಹ್ಮಸೂತ್ರಗಳ |

ಶ್ರೀಭಾರತ ಭಾಗವತ, ಪುರಾಣ ಅರುಹಿದ್ದು ಕಂಡು || 1 ||

ದಿಗ್ಭ್ರಮೆಗೊಂಡೆ ಭಗವಂತನ ವ್ಯಾಪಾರ ವೀಕ್ಷಿಸಿ |

ವಿಭ್ರಮೆ ಅಳಿಯಿತು ಪಂಚಭೇದ ತಾರತಮ್ಯ ಅರಿತು || 2 ||

ಸಂಭವಿಪ ಸಕಲ ಕಾರ್ಯಕಾರಣ ಕತರ್ುೃ ಸತ್ಯಾತ್ಮ |

ಗಂಭೀರ ಬಲು ಉದಾರ ಭಕ್ತಿಗೆ ಒಲಿವನು || 3 ||

ಸಂಭ್ರಮದಿ ಪೂಜಿಪೆ ಅಂಭ್ರಣಿ ಪತಿಯ |

ಬಿಂಬಸ್ಥ ಶ್ರೀಕೃಷ್ಣವಿಠ್ಠಲನ ಸದಾ ಬಲಗೊಂಬೆ || 4 ||

45. ವ್ಯಾಸ ಕರುಣದಿ ತತ್ವನರುಹಲಿ ಜಡಮತಿಗೆ |

ಧ್ಯಾನ ಹಚ್ಚಲಿ ಮನದಿ ಬಿಡದೆ ಅನ್ಯನೆಂದೆನ್ನದೇ ||

ಜ್ಞಾನ ಜ್ಯೋತಿ ಪ್ರಜ್ವಲಿಸಲಿ ಪ್ರತಿ ಜನುಮದಿ |

ಜ್ಞಾತ ಶ್ರೀಕೃಷ್ಣವಿಠ್ಠಲ ಎನ್ನನೆಂದೂ ತೊರೆಯದಿರಲಿ ||

46. ವೇದವನರಿಯೆ, ಶಾಸ್ತ್ರವ ತಿಳಿಯೆ |

ಸುದೈವದಿ ನಿನ್ನ ನಾಮದ ಹೊರತು ಬೇರೇನೂ ಅರಿಯೆ ||

"ವ್ಯಾಸೋಚ್ಛಿಷ್ಠಂ ಇದಂ ಸರ್ವಂ" ಎಂದಂತೆ ನನ್ನದೇನೂ ಇಲ್ಲ |

ಸಕಲವೂ ಶ್ರೀಕೃಷ್ಣವಿಠ್ಠಲನದಿರುವಾಗ ಎನಗೇತರ ಮಾನಾಪಮಾನ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು