ಶ್ರೀ ಸುದರ್ಶನ ಚಕ್ರ
43. ಅದ್ಭುತ ಚಕ್ರ ಶ್ರೀ ಸುದರ್ಶನ ಚಕ್ರ | ಅಭಯವೀವ ಸಾಟಿಯಿಲ್ಲದ ಚಕ್ರ ||
ಅಭಿಮಾನಿ ಶ್ರೀ ದುರ್ಗಾ ವಶಿತ ಚಕ್ರ | ನಿರ್ಭಯ ವರವೀವ ಚಕ್ರ ||
ನಾರಾಯಣ ಹಸ್ತದಿ ಸುಶೋಭಿತ ಚಕ್ರ | ಶರಣ ಜನರ ರಕ್ಷಿಪ ಚಕ್ರ ||
ಆರ್ತಕರೆಗೆ ಧಾವಿಸೇ ಶ್ರೀ ಹರಿಯು | ನಕ್ರನ ಶಿರವ ತರಿದ ಚಕ್ರ ||
ಭಕ್ತ ಅಂಬರೀಷನ ಪೊರೆಯಲು ಚಕ್ರ | ಭಕ್ತ ದೂರ್ವಾಸ ಅಹಂಕಾರ ಸುಟ್ಟಿತು ಚಕ್ರ ||
ವಾಸುದೇವ ಎದುರಿಸಿದ ಪೌಂಢ್ರಕ | ವಾಸುದೇವನ ಶಿರ ತರಿಯಿತು ಚಕ್ರ ||
ಕಾಶಿಪತಿ ಸುದಕ್ಷಿಣ ಕುಹಕದಿ | ಕೃಷ್ಣನ ಕೆಣಕಲು ದಹಿಸಿತು ನಗರವ ಚಕ್ರ ||
ಈಶ ಕೃಷ್ಣನ ಹಳಿಯಲು ನೂರೊಂದು | ಶಿಶುಪಾಲನ ಶಿರವ ತರಿಯಿತು ಚಕ್ರ ||
ಕೋಟಿ ಸೂರ್ಯರಂತೆ ಪ್ರಜ್ವಲಿಪ ಚಕ್ರ | ಸ್ಪಷ್ಟ ಜ್ಞಾನದಿ ವಿಷ್ಣು ಭಕ್ತಿಯೀವ ಚಕ್ರ ||
ಸೃಷ್ಟಿಯೊಳು ಶ್ರೀಕೃಷ್ಣವಿಠ್ಠಲ ಸದಾ ಧರಿಪ | ದುಷ್ಟರ ಶಿಕ್ಷಿಸಿ, ಶಿಷ್ಟರ ಪೊರೆವ ಚಕ್ರ ||
ಇಂದಿನ ದಿನವೇ ಸುದಿನ ಚಕ್ರ ಕೊಂಡಾಡಿದ ದಿನ | ಹಿಂದು ಮುಂದಿನ ಪಾಪ ಕಳೆದು ಸನ್ಮತಿವೀವ ಚಕ್ರ ||