ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀಕೃಷ್ಣವಿಠ್ಠಲ ಪದಗುಚ್ಛ

ಪ್ರಕಾಶಕರು:

ಡಾ|| ಉಪೇಂದ್ರ ಶಾಮರಾವ ನರಸಾಪುರವಿಜಯಪುರ

ರಚನೆ:

ಡಾ|| ಸೌ|| ವನಜಾ ಉಪೇಂದ್ರ ನರಸಾಪುರವಿಜಯಪುರ

ಭಕ್ತಿಯಿಂದ ಸಮರ್ಪಣೆ

ನನ್ನ ಪತಿ ಅಂತರ್ಗತ

ಸರ್ವಗುರುಗಳಂತರ್ಗತ

ಶ್ರೀಕೃಷ್ಣವಿಠ್ಠಲಗೆ ಅರ್ಪಣೆ

ಪುಸ್ತಕ ಪ್ರಕಾಶನದ ಹಕ್ಕುಗಳು ಕಾಯ್ದಿರಿಸಲಾಗಿದೆ

ಪ್ರಥಮ ಮುದ್ರಣ 2015 (1000 ಪ್ರತಿಗಳು), ಬೆಲೆ : ರೂ.50/-

(ಪುಸ್ತಕ ಮಾರಾಟದ ಹಣವನ್ನು ಶ್ರೀ ವೆಂಕಟೇಶ ದೇವರ ಸನ್ನಿಧಿಯ, ಶ್ರೀ ವಿಷ್ಣುಸಹಸ್ರನಾಮ ಭವನ ಕಟ್ಟಲು ಅರ್ಪಿಸಲಾಗುತ್ತದೆ)

ಪುಸ್ತಕ ಸಿಗುವ ಸ್ಥಳ :

1) ಡಾ|| ಉಪೇಂದ್ರ ಶಾಮರಾವ ನರಸಾಪುರ , ಉಪವನ, ಚಾಲುಕ್ಯ ನಗರ, ವಿಜಯಪುರ - 586 103, ಮೊಬೈಲ್ : 9341611126

2)ಶ್ರೀ ವ್ಯಾಸ ಮಧ್ವ ವಿದ್ಯಾಪೀಠ ತೊರವಿ ರಸ್ತೆ, ವಿಜಯಪುರ.

ಶ್ರೀಮತ್ ಪರಮಹಂಸ ಪಾರಿವ್ರಾಜಕತ್ವಾದ್ಯನೇಕ ಗುಣಗಣಾಲಂಕೃತ ಶ್ರೀಮೂಲ ಸೀತಾ ಸಮೇತ ಶ್ರೀ ಮನ್ಮೂಲರಾಮ ದಿಗ್ವಿಜಯರಾಮ, ವೇದವ್ಯಾಸ, ವಂಶರಾಮ, ಪ್ರಸನ್ನವಿಠ್ಠಲ ದೇವರವರ ಪಾದಪದ್ಮಾರಾಧಕರಾದ ಶ್ರೀಮದ್ ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಶ್ರೀಮದ್ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಉತ್ತರಾದಿಮಠಾಧೀಶರಾದ
ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಕರಕಮಲ ಸಂಜಾತರಾದ
ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ

ಅನುಗ್ರಹ ಸಂದೇಶ

ಶ್ರೀಮತಿ ಡಾ|| ವನಜಾ ಉಪೇಂದ್ರ ನರಸಾಪುರ ಇವರುಅಧ್ಯಾತ್ಮಿಕದೃಷ್ಟಿಯನ್ನು ಇಟ್ಟುಕೊಂಡು ಸಾಧಕರಾಗಿದ್ದಾರೆ. ಇವರು ಉತ್ತಮ ಸಾಹಿತಿಗಳೂಆಗಿದ್ದಾರೆ. ತಾರತಮ್ಯಕ್ರಮದಲ್ಲಿ ಗುರುಗಳ, ದೇವತೆಗಳು, ವಾಯುದೇವರ, ಲಕ್ಷ್ಮೀದೇವಿಯ ಹಾಗೂ ಭಗವಂತನ ವಿವಿಧ ಅವತಾರಗಳ ಬಗ್ಗೆ ಸುಂದರವಾದ ಕವನಗಳನ್ನು ರಚಿಸಿದ್ದಾರೆ. ಅದಲ್ಲದೆ ಶಿ್ರೕಮದ್ ಭಾಗವತದ ಅನೇಕ ಕಥೆಗಳನ್ನು ಸುಂದರವಾಗಿ ಸಂಗ್ರಹಿಸಿ ಪದ್ಯ ರೂಪದಲ್ಲಿ ರಚಿಸಿದ್ದಾರೆ. ಇವರು ಸುಳಾದಿ, ಉಗಾಭೋಗಗಳು, ಮುಂಡಿಗೆಗಳೂ ಕೂಡ ರಚಿಸಿದ್ದಾರೆ ಅನ್ನುವುದು ವಿಶೇಷ. ಮುಂಡಿಗಿಗೆ ಸ್ಪಷ್ಟವಾದ ವಿವರಣೆಯನ್ನು ಕೊಟ್ಟಿದ್ದಾರೆ. ಇವರ ಮನೆಯವರು ತಮ್ಮ ವೈದ್ಯ ವೃತ್ತಿಯಲ್ಲಿಯೂ ಆಧ್ಯಾತ್ಮಿಕ ಒಲವನ್ನು ಇಟ್ಟುಕೊಂಡವರು. ಅವರು ಕೂಡ ಸಂಗ್ರಹವಾಗಿ ಮಧ್ವ ಸಿದ್ಧಾಂತದ ಸಾರವನ್ನು ಈ ಪುಸ್ತಕದಲ್ಲಿ ಸುಂದರವಾಗಿ ಸಂಗ್ರಹಿಸಿದ್ದಾರೆ. ಇವರಿಬ್ಬರ ಈ ಸ್ತುತ್ಯವನ್ನು ಅಭಿನಂದಿಸುತ್ತೇವೆ. ಇವರಿಗೆ ದೇವರು ಆಯುರಾರೋಗ್ಯ, ಐಶ್ವರ್ಯಾದಿಗಳನ್ನು ಕೊಟ್ಟು ಇವರಿಂದ ಇದೇ ರೀತಿ ಅನೇಕ ವಾಙ್ಮಯ ಸೇವೆಯನ್ನು ಮಾಡಿಸಲಿ ಎಂದು ನಮ್ಮ ಉಪಾಸ್ಯಮೂರ್ತಿಗಳಾದ ಶ್ರೀಮೂಲಸೀತಾ ಸಮೇತ ಶ್ರೀಮನ್ ಮೂಲರಾಮ, ದಿಗ್ವಿಜಯರಾಮ, ವೇದವ್ಯಾಸ, ವಂಶರಾಮ, ಪ್ರಸನ್ನ ವಿಠ್ಠಲದೇವರಲ್ಲಿ ಪ್ರಾರ್ಥಿಸುತ್ತೇವೆ.

1008 ಶ್ರೀ ಸತ್ಯತ್ಮತೀರ್ಥ ಶ್ರೀಪಾದಂಗಳವರು

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನ,

ಉತ್ತರಾದಿಮಠ, ಬೆಂಗಳೂರು

ಅನುಗ್ರಹ ಸಂದೇಶ

ಹರಿದಾಸರು ಕನ್ನಡದಲ್ಲಿ ದಾಸ ಸಾಹಿತ್ಯದ ಮೂಲಕವಾಗಿ ಅಪುರ್ವವಾದ ಭಕ್ತಿ ಕ್ರಾಂತಿಯನ್ನು ಮಾಡಿದ್ದಾರೆ. ಆ ದಾಸ ಸಾಹಿತ್ಯದಿಂದಾಗಿಯೇ
ಶ್ರೀ ಮಧ್ವಾಚಾರ್ಯರು ನೀಡಿದ ಭಕ್ತಿ ಸಂದೇಶವು ಜನ ಸಾಮಾನ್ಯರ ಮಾನಸದಲ್ಲಿದೃಢವಾಗಿನೆಲೆ ನಿಂತಿದೆ. ನಮ್ಮ ಅತ್ಯಂತ ಅಭಿಮಾನ ಪಾತ್ರರಾದ ಶ್ರೀಮತಿ ವನಜಾನರಸಾಪುರರವರು ಈ ದಾಸ ಸಾಹಿತ್ಯದ ಪರಂಪರೆಯನ್ನು ಮುನ್ನಡೆಸಿಕೊಂಡು ಸರಳ ಸುಂದರ ಶೈಲಿಯಲ್ಲಿ ಕೀರ್ತನೆಗಳನ್ನು ರಚಿಸಿ ಭಗವಂತನಿಗೆ ಅರ್ಪಿಸಿದ್ದಾರೆ. ಶ್ರೀಮತಿ ನರಸಾಪುರರವರು ಆದರ್ಶ ಗೃಹಿಣಿಯಾಗಿ, ಮಹಿಳಾ ಸಮಾಜಕ್ಕೆ ಧಾರ್ಮಿಕ, ಸಾಂಸ್ಕೃತಿಕ ವಿಷಯಗಳಿಗೂ ಮಾರ್ಗದರ್ಶಕರಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಭಕ್ತಿ, ಭಾವ ಭರಿತವಾದ ಮಧುರವಾದ ಕೀರ್ತನೆಗಳನ್ನು ಪರಿಶೀಲಿಸಿ ನನಗೆ ಅತ್ಯಂತ ಸಂತೋಷವಾಗಿದೆ. ಹರಿವಾಯುಗಳು ಅವರನ್ನು ವಿಶೇಷವಾಗಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.

ಇಂತಿ ಸಪ್ರೇಮ ನಾರಾಯಣ ಸ್ಮರಣೆಗಳು


ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಪೇಜಾವರ ಅಧೋಕ್ಷಜ ಮಠ, ಉಡುಪಿ

ಮುನ್ನುಡಿ

ಶ್ರುತಿ, ಸ್ಮೃತಿ-ಪುರಾಣಗಳು ಭಗವಂತನ ಅನಂತ ಗುಣಗಳನ್ನು ಸಂಪುರ್ಣವಾಗಿ ತಿಳಿಸಲು ಶಕ್ಯವಿಲ್ಲ. ಅಂತೆಯೇ ದೇವರಿಗೆ ಅವಾಚ್ಯವೆಂದು ವೇದವು ಹೇಳುವದು. "ಸಾಕಲ್ಯೇನ ಅಗೊಚರ" ಎಂದು ಅರ್ಥೈಸಿರುವರು. ಆದರೆ ಅಧಿಕಾರಿ ಭೇದೇನ - ವೇದಶಾಸ್ತ್ರಗಳ ಅಧ್ಯಯನವು ಕೂಡವಿಭಿನ್ನವಾಗಿದೆ. ಸ್ತ್ರೀಯರ ವೃಂದಕ್ಕೆ ಪ್ರ್ರಾಕೃತಅಂದರೆ ಕನ್ನಡ ಮೊದಲಾದ ಭಾಷೆಗಳ ಪದ, ಪದ್ಯ, ಸುಳಾದಿಗಳಿಂದ ಸ್ತುತಿಸಲು ಶಾಸ್ತ್ರವು ಸಮ್ಮತಿಸಿದೆ. ಈ ನಿಟ್ಟಿನಲ್ಲಿ ದಾಸಪರಂಪರೆಯು ಅಸಂಖ್ಯ ಪದ ಪದ್ಯಸುಳಾದಿಗಳನ್ನು ರಚಿಸಿ ಸಾಧಕ ವರ್ಗಕ್ಕೆ ಪರಮೋಪಕಾರ ಮಾಡಿರುವರು, ಇತ್ತೀಚೆಗೆ ಗುರುಗಳ ಅನುಗ್ರಹದಿಂದ ಹಲವು ಸಾಧಕ ಸ್ತ್ರೀಯರು ಉತ್ತಮ ಕನ್ನಡ ಭಕ್ತಿ ಪದಗಳನ್ನು ರಚಿಸಿ ದಾಸ ಸಾಹಿತ್ಯವನ್ನು ಸಮೃದ್ಧಿಗೊಳಿಸುತ್ತಿರುವದು ಸಂತೋಷದಾಯಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಅತ್ಯಂತ ಆತ್ಮೀಯ ಆಧ್ಯಾತ್ಮ ಸದ್ ವೈಷ್ಣವ ಬಂಧುಗಳಾದ ಡಾ|| ಉಪೇಂದ್ರ ನರಸಾಪುರ ಅವರ ಧರ್ಮಪತ್ನಿ ಡಾ|| ಕು.ಸೌ.ವನಜಾ ನರಸಾಪುರ ಇವರು ಹರಿವಾಯು ಗುರುಗಳನ್ನು ಉದ್ದೇಶಿಸಿ ಅನೇಕ ಪದ ಪದ್ಯಗಳನ್ನು ರಚಿಸಿ ಪ್ರಚಾರಪಡಿಸುತ್ತಿರುವದು ಸಂತೋಷ ತಂದಿದೆ. ಇವರ ಈ ಕೃತಿಯು ಪ್ರಾಚೀನ ದಾಸ ಸಾಹಿತ್ಯದ ಸಂಪ್ರದಾಯವನ್ನು ಅನುಸರಿಸಿದೆ. ಸಿದ್ದಾಂತದ ಪ್ರಮೇಯ ದೃಷ್ಟಿಯಿಂದ ಎಷ್ಟು ಸೂಕ್ಷ್ಮ ಸೂಕ್ಷ್ಮ ದೃಷ್ಟಿಯಿಂದ ವೀಕ್ಷಿಸಿದರೂ ತಿಳಿಸುವ ತಿಳಿಯುವ ಭಾಗವು ಉಳಿದೇ ಬಿಡುತ್ತದೆ. ಇದು ಪ್ರತಿಯೊಂದು ಸಾತ್ವಿಕ ಕೃತಿಗೂ ಯಥಾಯೊಗ್ಯ ಅನ್ವಯಿಸುತ್ತದೆ. ಇವರ ಕೃತಿ ಸಂಗ್ರಹದಲ್ಲಿ ಕೇವಲ ಕವಿತಾ ಗುಣವಿಲ್ಲದೆ ದೇವರ ವಿಶೇಷ ಮಹಿಮೆಯನ್ನು ತನ್ಮೂಲಕ ಭಕ್ತಿಯನ್ನು ಓದುಗರಿಗೆ ಹುಟ್ಟಿಸುವುದರಲ್ಲಿ ಸಂದೇಹವಿಲ್ಲ.

ಶ್ರೀ ಶ್ರೀ ಸತ್ಯಪ್ರಮೋದತೀರ್ಥ ಹಾಗೂ ಶ್ರೀ ಶ್ರೀ ಸತ್ಯಾತ್ಮತೀರ್ಥರ ಹಾಗೂ ಶ್ರೀ ಶ್ರೀ ಪೇಜಾವರ ಶ್ರೀಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಈ ದಂಪತಿಗಳು ಈಗಾಗಲೇ ಅನೇಕ ಸ್ತೋತ್ರ ಸಾಹಿತ್ಯ ಕೃತಿಗಳನ್ನು ಪ್ರಕಾಶಪಡಿಸಿದ್ದಾರೆ. ಈಗ ಇವರಿಂದ ರಚಿತವಾದ ಪದ್ಯ ಸಂಗ್ರಹರೂಪ ಈ ಕೃತಿಯು ಎಲ್ಲ ಸಾಧಕರಿಗೆ ಉಪಯುಕ್ತವಾಗಲಿ. ಡಾ|| ಕು.ಸೌ.ನರಸಾಪುರ ಇವರಿಗೆ ಇತೋಪ್ಯತಿಶಯ ಶ್ರೇಯಸ್ಸನ್ನು ಭಗವಂತನು ಕರುಣಿಸಿ ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.

ವೇ.ಮೂ.ಪಂ.ಶ್ರೀ ಮೊಕಾಶಿ ಮಧ್ವಾಚಾರ್ಯ

ಕುಲಪತಿಗಳು, ಶ್ರೀ ಸರ್ವಜ್ಞವಿಹಾರ ವಿದ್ಯಾಪೀಠ,

ವಿಜಯಪುರ.

|| ಪ್ರಸ್ತಾವನೆ ||

ಜೀವನದಲ್ಲಿ ಗುರು ಕಾರುಣ್ಯವಿದ್ದರೆಏನನ್ನಾದರೂಸಾಧಿಸಬಹುದು. ಶ್ರೀಹರಿ ಕೃಪೆಯಿಂದ ನಮ್ಮಿಬ್ಬರ ಮೇಲೆ ಈ ಗುರುಕಾರುಣ್ಯ ನಿಸ್ಸೀಮವಾಗಿದೆ. ಅದರ ಫಲವಾಗಿನನ್ನ ಧರ್ಮಪತ್ನಿ ಡಾ|| ಸೌ.ವನಜಾ ಸುಮಾರು 1990ರ ನಂತರ ದೇವರ ಪದ್ಯ ರಚನೆ ಆರಂಭಿಸಿದಳು.

1986ರ ಸುಮಾರಿಗೆ ಶ್ರೀ ಶ್ರೀ ಸತ್ಯಪ್ರಮೋದತೀರ್ಥರಿಂದ ಕೃಷ್ಣಮಂತ್ರೋಪದೇಶವಾದಾಗಿನಿಂದ ಶ್ರೇಷ್ಠ ವೈದಿಕ ಗ್ರಂಥಗಳ ಪ್ರಕಾಂಡ ಪಂಡಿತರ ಕನ್ನಡ ಅನುವಾದಗಳ ಅಧ್ಯಯನವನ್ನುಆರಂಭಿಸಿ ಮುಂದುವರಿಸಿದ್ದಾಳೆ. ಹಾಗೂ ನಮ್ಮ ವೇ.ಮೂ.ಶ್ರೀ ಮೊಕಾಶಿ ಮಧ್ವಚಾರ್ಯರ ನಿತ್ಯ ಪಾಠ-ಪ್ರವಚನಗಳ ಬಲದಿಂದ ಕ್ಲಿಷ್ಟ ವಿಷಯಗಳನ್ನು ಸರಳೀಕರಿಸಿಕೊಳ್ಳುತ್ತಿದ್ದಾಳೆ. 1992ರಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು (ಪೇಜಾವರಮಠ) ಸ್ವಪ್ನದಲ್ಲಿ ಶ್ರೀ ಕೃಷ್ಣವಿಠ್ಠಲ ಎಂದು ಅಂಕಿತ ಪ್ರಧಾನ ಮಾಡಿದರು. ಆಗಿನಿಂದ ಉತ್ತಮ ರೀತಿಯ, ಅರ್ಥಗರ್ಭಿತ ಪದ್ಯಗಳ ರಚನೆ ಆರಂಭವಾಯಿತು. ಪದ್ಯಗಳು ಪರಮಾತ್ಮನ ಪ್ರೇರಣೆಯಿಂದ ತಾನಾಗೇ ಹೊರಹೊಮ್ಮತೊಡಗಿ, ಇಲ್ಲಿಯವರೆಗೆ 475ಕ್ಕೂ ಮಿಕ್ಕಿ ಪದ್ಯಗಳ ರಚನೆಯಾಗಿದ್ದೂ ಇನ್ನೂ ನಡದೇ ಇದೆ.

ಇದಕ್ಕೆ ದೇವರ ಅನುಗ್ರಹವೆಂಬಂತೆ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ತಿರುಕೋಯಿಲೂರಿನಲ್ಲಿ 1998ರ ಶ್ರೀ ರಘೋತ್ತಮತೀರ್ಥರ ಆರಾಧನೆ ಅಂಗವಾಗಿ ಏರ್ಪಡಿಸಿದ ಮಹಿಳಾಗೋಷ್ಠಿಯಲ್ಲಿಸೌ.ವನಜಾಳಿಗೆ ಭಾಗವಹಿಸಲು ಆಜ್ಞಾಪಿಸಿದರು. ಅಂದಿನಿಂದ ಆರಂಭವಾದ ಉಪನ್ಯಾಸಮಾಲಿಕೆ ಶ್ರೀಗಳ ಆಜ್ಞೆ ಮೇರೆಗೆದಾವಣಗೆರೆಗೆ, ಮೈಸೂರು, ರಾಯಚೂರು, ಪುಣೆ, ಧಾರವಾಡ, ವಿಜಯಪುರ ಸೇರಿದಂತೆ ಅನೇಕ ಸ್ಥಳಗಳಲ್ಲಿ ನಡೆಯಿತು. ಇದಲ್ಲದೆ ಪೇಜಾವರ ಹಾಗೂ ಅದಮಾರು ಶ್ರೀಗಳವರ ಆಜ್ಞೆ ಮೇರೆಗೆ 3ಸಲ ಉಡುಪಿ ರಾಜಾಂಗಣದಲ್ಲಿ ಉಪನ್ಯಾಸವಿತ್ತಿದ್ದಾರೆ. 2013ರ ಲಾತೂರು ಚಾತುರ್ಮಾಸ್ಯದಲ್ಲಿ ಪ್ರಥಮ ಬಾರಿ ಮರಾಠಿ ಭಾಷೆಯಲ್ಲಿ ಉಪನ್ಯಾಸ ಮಾಡಿದ್ದಾರೆ. ಇದಲ್ಲದೆ ಅನೇಕ ಶಾಲಾ ಕಾಲೇಜುಗಳಲ್ಲಿ ಹಾಗೂ ಧಾರ್ಮಿಕ ಶಿಬಿರಗಳಲ್ಲಿ ಮಕ್ಕಳಲ್ಲಿ ಧಾರ್ಮಿಕ ಜಾಗರಣೆಗಾಗಿ ಉಪನ್ಯಾಸಕೊಟ್ಟಿದ್ದಾರೆ.

ಇವರು ಎಂ.ಬಿ.ಬಿ.ಎಸ್., ಎಂ.ಡಿ. ಓದಿ 30 ವರ್ಷಕ್ಕೂ ಮಿಕ್ಕಿ ಅನೇಕ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿ ವ್ರತ, ಧರ್ಮಾಚರಣೆಯಲ್ಲಿ ತೊಡಗಿದ್ದಾರೆ. ಹಾಗೂ ಸುತ್ತಲಿನವರನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಯಲುಪ್ರೇರೆಪೀಸುತ್ತಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳಾದಡಾ|| ಸೌ.ಶೃತಿ ಅಜೇಯ ದೀಕ್ಷಿತ್ ಹಾಗೂ ಇಡಿ. ಸೌ|| ಕೃತಿ ವಿನಯ ಕರಣಂ ಇವರು ತಮ್ಮ ಸಂಸಾರದೊಂದಿಗೆ ಸುಖವಾಗಿದ್ದು ಧಾರ್ಮಿಕ ಪಥವನ್ನು ಅನುಸರಿಸುತ್ತಿದ್ದಾರೆ.

ಶ್ರೀ ಶ್ರೀ ಸತ್ಯಪ್ರಮೋದತೀರ್ಥರು ಹಾಗೂ ಅವರ ಕರಕಮಲ ಸಂಜಾತರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರ ಮತ್ತು ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆಶೀರ್ವಾದ ಬಲದಿಂದ ಹಾಗೂ ಇವರೆಲ್ಲರ ಅಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣವಿಠ್ಠಲನ ಅನುಗ್ರಹದಿಂದ ಪ್ರಸಕ್ತ ಪುಸ್ತಕದಲ್ಲಿ ಆಯ್ದ 200ಕ್ಕೂ ಮಿಕ್ಕಿ ಪದ್ಯಗಳನ್ನು ಹೊರತರುವ ಪ್ರಥಮ ಪ್ರಯತ್ನ ಇದಾಗಿದೆ. ಇದನ್ನು ಸಹೃದಯ ಓದುಗರು ತುಂಬು ಮನಸಿನಿಂದ ಸ್ವೀಕರಿಸಿ ಪ್ರೋತ್ಸಾಹಿಸುವುರೆಂದು ನಂಬಿದ್ದೇನೆ.

ಈ ಪುಸ್ತಕದ ಪ್ರತಿಯೊಂದು ಪದ್ಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಓದಿ ತಿದ್ದಿ ಅನುಗ್ರಹಿಸಿದ ಪರಮಪುಜ್ಯ ವೇ.ಮೂ.ಶ್ರೀ.ಮೊಕಾಶಿ ಮಧ್ವಾಚಾರ್ಯರಿಗೂ ಹಾಗೂ ಡಾ|| ವೇ.ಮೂ.ಶ್ರೀ ವೇದನಿಧಿ ಆಚಾರ್ಯರಿಗೂ ನಾವಿಬ್ಬರೂ ಚಿರಋಣಿಯಾಗಿದ್ದೇವೆ. ಈ ಕಾರ್ಯದಲ್ಲಿ ಸಹಕರಿಸಿದ ಸಕಲರಿಗೂ ನನ್ನ ಕೃತಜ್ಞತೆಗಳು.

ಡಾ|| ಉಪೇಂದ್ರ ಶಾಮರಾವ ನರಸಾಪುರ

ಮನದ ನುಡಿ

ಕಲಿಯುಗದಿ ಸನ್ಮಾರ್ಗದಿ ನಡೆಯಲು ಸಹಾಯಕವಾಗಿರುವುದು ಎಂದರೆ ಸಜ್ಜನಸಂಗ ಹಾಗೂ ಭಗವಂತನ ಸದಾ ನಾಮಸ್ಮರಣೆ. ಇವೆರಡು ಪುರ್ವಜನ್ಮದ ಸುಕೃತದಿಂದಲೇ ಲಭ್ಯ. ಇದಕ್ಕೆ ಪುರಕವಾಗಿರುವುದು ಹರಿದಾಸ ಸಾಹಿತ್ಯದಂತಹ ಮೇರು ನಿಧಿ. ಅನೇಕ ಹರಿದಾಸರುಅಮರರಾಗಿರುವುದುಅವರ ಸಾಹಿತ್ಯದಿಂದ. ಎಂದಿಗೂ ನಿತ್ಯ ವಿನೂತನರೂಪ ತೋರುವ ದಾಸ ಸಾಹಿತ್ಯ. ಹರಿಯೆಡೆಗೆ ಮನ ಹೋಗುವ ಮಾರ್ಗದರ್ಶಿ ಸಾಧನೆಗಿಂತ ತಪವಿಲ್ಲ ಎಂಬಂತೆ ನರಜನ್ಮ ಬಂದಾಗ ಸರ್ವರು ಸದುಪಯೋಗ ಪಡೆಯಲು ಬಿಡದೆ ಪ್ರಯತ್ನಿಸಬೇಕು. ಇದೆಲ್ಲದರ ಗುರಿ ಒಂದೇ - ಅದೇ ಪರಮಾತ್ಮನ ದರುಶನ ಹಾಗೂ ಮುಕ್ತಿಯ ಹಂಬಲ ಈ ನಿಟ್ಟಿನಲ್ಲಿ ಸಾಮಾನ್ಯರಿಗೆ ಅರ್ಥವಾಗುವಂತೆ (ಪರಮಾತ್ಮನ ಪ್ರೇರಣೆಯಂತೆ) ಅನೇಕ ಮಹಾನುಭಾವರು ಸರಳ, ಸುಲಲಿತ ಭಾಷೆಯಲ್ಲಿ ಅನೇಕ ಪದ್ಯಗಳು, ಕೀರ್ತನೆ, ಉಗಾಭೋಗ, ಸುಳಾದಿಗಳನ್ನು ರಚಿಸಿ ಮಹದೋಪಕಾರ ಮಾಡಿದ್ದಾರೆ. ಕೆಲವಂತೂ ಮಾನವ ಹೃದಯ ತಂತಿಯನ್ನು ಇಂದಿಗೂ ಮೀಟುತ್ತವೆ. ಮನದಲ್ಲಿ ಆದರ್ರ್‌ತೆಯಿಂದ ಆನಂದ ಪರವಶವರನ್ನಾಗಿ ಮಾಡಿ ಸಾರ್ಥಕತೆ ಭಾವ ಮೂಡಿಸುತ್ತದೆ. ಮಹಾಮಹಿಮರ ಮಹಿಮೆ ಪದ ಪದಗಳಲ್ಲೂ ತುಂಬಿ ತುಳುಕಾಡುತ್ತದೆ. ಅನೇಕರು ಅವರ ರಚನೆಯನ್ನು ಹಾಡಿ, ಕೊಂಡಾಡಿ, ನಲಿದಾಡಿ ತಾವು ಆತ್ಮೋದ್ಧಾರದ ಮಾರ್ಗವನ್ನು ಹಿಡಿದಿದ್ದಾರೆ. ಮುಖ್ಯತಃ ಇವೆಲ್ಲ ಭಕ್ತಿರಸದ ಮೂಲ ಉಗಮ ಉನ್ನತಿಗೆ ಕಾರಣವಾಗಿವೆ. ಹೀಗೆ ಭಕ್ತಿ ಪ್ರವಾಹವು ಒಂದಿಲ್ಲೊಂದು ರೀತಿಯಲ್ಲಿ ಹರಿಯುತ್ತಾ ಮುಂದೆ ಸಾಗುತ್ತಿದ್ದೆ. ಇದು ಸದಾ ಪ್ರವಹಿಸುವ ಭಕ್ತಿ ಸೌಂದರ್ಯದ ರಸನದಿ ದಾಸ ಸಾಹಿತ್ಯದಲ್ಲಿ ಭಕ್ತಿ ಪ್ರಧಾನ್ಯದ ರಚನೆಗಳಷ್ಟಲ್ಲದೆ ಶೃತಿ ಸ್ಮೃತಿ ಪುರಾಣಗಳ ಅಂಶನ್ನು ಸಹ ಕೆಲವು ಕೃತಿಗಳು ಬಿಂಬಿಸುತ್ತವೆ. ಮಾನವ ಜನುಮದಿ ಬಾಳುವ ರೀತಿ-ನೀತಿ ಉಪದೇಶಗಳನ್ನು ಸಹ ಒಳಗೊಂಡಿವೆ.

ನನ್ನ ಜೀವನದಲ್ಲಿ ಇಂತಹ ಭಕ್ತಿ ಅಧ್ಯಾಯದ ಬೀಜ ಬಿತ್ತಿದ ಆತ್ಮೋನ್ನತಿಯ ಮಾರ್ಗ ತೋರಿ ಮಹಾನ್ಗುರುಗಳಾದಉತ್ತರಾದಿ ಮಠಾಧೀಶರಾದಶ್ರೀಸತ್ಯಪ್ರಮೋದತೀರ್ಥ ಸ್ವಾಮಿಗಳವರು ಹಾಗೂ ಅದಕ್ಕೆ ನೀರೆರೆದವರು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳವರು ಹಾಗೂ ಪ್ರಸ್ತುತ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಮಾತ್ಮತೀರ್ಥ ಸ್ವಾಮಿಗಳವರು. ಈ ಪುಸ್ತಕಕ್ಕೆ ಆಶೀರ್ವಚನವಿತ್ತು ಪುಸ್ತಕ ರೂಪದಲ್ಲಿ ಹೊರ ತರಲು ಹರಸಿದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳವರಿಗೂ ಹಾಗೂ ಶ್ರೀ ಸತ್ಮಾತ್ಮತೀರ್ಥ ಸ್ವಾಮಿಗಳವರಿಗೂ ನಾನು ಶಿರಬಾಗಿಸಿ ಅನೇಕಾನೇಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಶ್ರೀಕೃಷ್ಣ ಮಂತ್ರ ಜಪವನ್ನು ಕರುಣಿಸಿದ

ಶ್ರೀ ಸತ್ಯಪ್ರಮೋದತೀರ್ಥ ಸ್ವಾಮಿಗಳವರು ಹಾಗೂ ಶ್ರೀಕೃಷ್ಣವಿಠ್ಠಲ ಎಂದೇ ಅಂಕಿತವಿತ್ತ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳವರ ಕರುಣೆಗೆ ನಾನು ಚಿರಋಣಿ. (ಸುಮಾರು 25 ವರ್ಷಗಳ ಹಿಂದೆ ಸ್ವಪ್ನದಲ್ಲಿ ಶ್ರೀ ಪೇಜಾವರ ವಿಶ್ವೇಶ್ವತೀರ್ಥ ಗುರುಗಳು ಬಂದು `ಶ್ರೀಕೃಷ್ಣವಿಠ್ಠಲ' ಎಂದು ಅಂಕಿತವಿತ್ತಿದ್ದರು.

ಆ ಮೇಲೆ ಪದ್ಯಗಳ ಸ್ಫುರಣೆ ಆಗಿ ರಚನೆ ಪ್ರಾರಂಭವಾಯಿತು. ಅದನ್ನು ಇತ್ತೀಚೆಗೆ ವಿಜಯಪುರದಲ್ಲಿ ಚಾತುರ್ಮಾಸ್ಯ ಆಚರಿಸಿದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳಿಗೆ ಹೇಳಿ ಕೆಲವು ಪದ್ಯಗಳನ್ನು ತೋರಿಸಿದಾಗ ಅವರು ಸಂತೋಷಿಸಿ ನನಗೆ `ಶ್ರೀಕೃಷ್ಣವಿಠ್ಠಲ' ಎಂದೇ ಅಂಕಿತವಿತ್ತು ಆಶೀರ್ವದಿಸಿದರು. ಅಲ್ಲದೇ ಪುಸ್ತಕ ರೂಪದಲ್ಲಿ ಹೊರತರಲು ಆಜ್ಞಾಪಿಸಿದರು. ಈ ಪ್ರಸಾದ ನನ್ನ ಜೀವನದ ಅತೀ ಮಹಾಭಾಗ್ಯ) ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳವರು ಹಾಗೂ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳವರು ಕರುಣಿಸಿ ಅನುಗ್ರಹಿಸಿದ ಆಶೀರ್ವಾದ ವಚನ ನನಗೆ ಅಮೃತ ಸಮಾನ. ಇದಕ್ಕಾಗಿ ಇಬ್ಬರಿಗೂ ನಾನು ಅನಂತ ಕೃತಜ್ಞಗಳು. ಲೌಕಿಕದಿ ಅಹಂಕಾರ - ಚಂಚಲತೆ, ಮಮತೆ ನೀಗಿಸುವಲ್ಲಿ ಹಾಗೂ ಚಿತ್ತ ಶುದ್ಧಿ ಮಾಡುವ ನಿಟ್ಟಿನಲ್ಲಿ ದಿನವೂ ಪಾಠಬೋಧಿಸಿ ಸನ್ಮಾರ್ಗ ತೋರುತ್ತಿರುವ ಗುರುಗಳಾದ ಪಂಡಿತ ಶ್ರೀ ಮಧ್ವಾಚಾರ್ಯ ಮೊಕಾಶಿಯವರಿಗೆ ನನ್ನ ಅನಂತಾನಂತ ನಮನಗಳು. ಅವರು ಕೊಟ್ಟ ಮುನ್ನುಡಿಯ ಆಶೀರ್ವಾದಕ್ಕೆ ಅನಂತ ಧನ್ಯವಾದಗಳು. ಅಕ್ಷರ ಪ್ರತಿ ಅಕ್ಷರ ಬಿಡದೆ ಸಹನೆಯಿಂದ ಓದಿ ತಪ್ಪುಗಳನ್ನು ತಿದ್ದಿ ಈ ಕೃತಿಗೆ ರೂಪ ರೇಷಯನ್ನು ನೀಡಿದ ಪಂಡಿತ ಡಾ|| ಶ್ರೀ ವೇದನಿಧಿ ಆಚಾರ್ಯರಿಗೆ ನನ್ನ ಅನಂತಾನಂತ ಧನ್ಯವಾದಗಳು. ವಿಮರ್ಶಾಪುರ್ವಕವಾಗಿ ಓದಿ ನನಗೆ ದಾರಿ ತೋರಿ ಸಹಕಾರವಿತ್ತು ಆಶೀರ್ವದಿಸಿದ ನನ್ನ ಪತಿ ಡಾ|| ಉಪೇಂದ್ರ ನರಸಾಪುರರಿಗೆ ನನ್ನ ನಮನಗಳು. ಡಿ.ಟಿ.ಪಿ ಕೆಲಸವನ್ನು ಅಚ್ಚು ಕಟ್ಟಾಗಿ (ಅಲ್ಪಕಾಲದಲ್ಲೇ) ನಿರ್ವಹಿಸಿದ ಶ್ರೀ ಉಲ್ಲಾಸ ಕುಲಕರ್ಣಿಯವರಿಗೆ ವಂದನೆಗಳು. ಪರೋಕ್ಷ ಅಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ನನ್ನ ವಂದನೆಗಳು.

ಇಲ್ಲಿ ಅವಶ್ಯವಾಗಿ ಒಂದು ಮಾತನ್ನು ಹೇಳಲು ಇಚ್ಛಿಸುವೆನು. ಏನೆಂದರೆ ಎಲ್ಲ ಕೃತಿಗಳು ಪರಮಾತ್ಮನ ಪ್ರೇರಣೆ ಬಂದಂತೆ ತಮ್ಮ ಮುಂದೆ ಇಟ್ಟಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ. ಕೆಲವು ಹಾಡುಗಳಲ್ಲಿ ಪ್ರಾಸ ಅನುಪ್ರಾಸ ಅಥವಾ ಹೊಂದಿಕೆ ಇಲ್ಲದಿರಬಹುದು. ಅಂತಹುಗಳನ್ನು ಓದುಗರು ನನ್ನ ತಪ್ಪೆಂದು ಮನ್ನಿಸಿ ತತ್ವ, ಭಾವನೆಗಳನ್ನಷ್ಟೇ, ಹಂಸ ಕ್ಷೀರನ್ಯಾಯದಂತೆ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.

-ಡಾ|| ಶ್ರೀಮತಿ ವನಜಾ ನರಸಾಪುರ

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು