ಶ್ರೀ ಮತ್ಸ
50. ಮೀನು, ಚಿಕ್ಕ ಮೀನು, ಜಗದ್ವಂದ್ಯ ಮೀನು |
ದಾನವ ಹಯಗ್ರೀವನ ಕೊಂದ ಮೀನು || ಪ ||
ವೇದಗಳ ಚತುರ್ಮುಖನಿಗಿತ್ತ ಮೀನು | ಉದಧಿ ಶೇಷಶಾಯಿಯಾದ ಮೀನು ||
ಸತ್ಯವ್ರತಗೆ ಒಲಿದು ಬಂದ ಮೀನು | ಅತ್ಯಾಶ್ಚರ್ಯದಿ ಅಗಾಧವಾಗಿ ಬೆಳೆದ ಮೀನು || 1 ||
ಪ್ರಲಯ ಕಾಲದಿ ಬಂದು ಸಲಹಿದ ಮೀನು | ಉಳಿಸಿ ವನಸ್ಪತಿ ಸಪ್ತರ್ಷಿಗಳ ಮೀನು |
ಭಗವಂತನ ಭಜಿಸಿ ಸತ್ಯವ್ರತ ಭಕ್ತಿಲಿ | ಬಿಗಿದ ಸರ್ಪದಿ ಹಡಗನು ಮೀನಿಗೆ || 2 ||
ಸ್ವಚ್ಛ ಗೌಪ್ಯಯೋಗ ಅರುಹಿದ ಮೀನು | ಮೆಚ್ಚಿ ರಾಜನ ವೈವಸ್ವತ ಮನು ಮಾಡಿದ ಮೀನು |
ಚಿಕ್ಕದಾದರೂ ಅಚಿಂತ್ಯಾದ್ಭುತ ಮೆರೆವ ಮೀನು | ನಮ್ಮ ಚೊಕ್ಕ ಶ್ರೀಕೃಷ್ಣವಿಠ್ಠಲನೇ ಅನ್ಯನಲ್ಲ || 3 ||