ಶ್ರೀ ವಾಮನ
51.ಬಲಿಯ ಬಳಿಗೆ ಬಂದ ವಾಮನ ಬೇಡಿದ ಮೂರಡಿ ಭೂಮಿಯ |
ಕುಳ್ಳಗಿದ್ದ ಮಾಣವ ಬೆಳೆದ ತ್ರಿವಿಕ್ರಮನಾಗಿ ಸರ್ವತ್ರ ವ್ಯಾಪಿಸಿ ||
ಅಳೆದ ಸಮಸ್ತ ಭೂಲೋಕ ಒಂದು ಪಾದದಿ ತಿಲಮಾತ್ರ ಬಿಡದೆ |
ನಳಿನ ಪಾದ ಇನ್ನೊಂದು ಪಾದ ನಭಕೆ ಚಾಚಿ ಸುರ ನದಿಯ ಸುರಿಸಿದ ||
ಸ್ಥಳ ಕಾಣದೆ ಕೇಳಿದ ಮೂರನೇ ಪಾದ ಎಲ್ಲಿ ಇಡಲಿ ? |
ಕೆಳಗೆ ಪಾತಾಳಕ್ಕೊತ್ತಿದ ನತಮಸ್ತಕ ಬಲಿಯ ಕೃಪೆಯಿಂದ ||
ಪೇಳಿದಂತೆ ಅವನ ಅರಮನೆ ಬಾಗಿಲು ಕಾಯುತ್ತಿರುವ ಬಂಟನಾಗಿ |
ಕುಲವನುದ್ಧರಿಸಿದ ಸತ್ಯಸಂಕಲ್ಪ ಶ್ರೀಕೃಷ್ಣವಿಠ್ಠಲ ದಯದಿ ||