ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ವೆಂಕಟೇಶ ಕಲ್ಯಾಣ

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ|

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ||


ಗಜಮುಖ ಅಜನರಸಿಯಳಿಗೆ ನಮಿಸುತ ಭುಜಗಗಿರೀಶ ಕಲ್ಯಾಣವನೂ|

ಋಜುಗುರುಅಂತರ್ಗತ ಶ್ರೀ ಹರಿಪ್ರೇರಿಸಿಸದಂದದಿ ರಚಿಸಿದೆನಿದನೂ||||


ಭೃಗುಮುನಿಯೊದೆದರೂ ಹರಿಯ ನಡತೆ ನೋಡಿ ಸರಿಬಾರದೆ ಶಿರಿ ತೆರಳಲು

ತಾನಿರದೆ ವೈಕುಂಠವ ತೊರೆದು ಹುತ್ತಿನಲ್ಲಿ ವರಗೋರಸ ಸ್ವೀಕರಿಸುತಲೇ||||


ಇರುತಿರೆ ಗೋಪನಕೊಡಲಿ ಪೆಟ್ಟಿಗೆ ತಲೆಒಡೆದುದಕೌಷಧ ಅರಸುತಿರೇ |

ವರಹದೇವ ಕನಿಕರದಿ ಸ್ಥಳವನಿತ್ತು ತ್ವರ ಬಕುಲೆಯ ಸೇವೆಗಿರಿಸಿದನೂ|| ||


ಒಂದುದಿನ ಬೇಟೆಗೆಂದು ಪೋಗಿ ರಾಜನಂದಿನಿಯಳ ನೋಡಿ ಮೋಹಿಸುತಾ|

ಸುಂದರಾಂಗಿ ಅರವಿಂದ ನಯನೆ ಎನಗಿಂದು ವಧುವಾಗೆನುತ ನುಡಿದಾ || ||


ಎಲವೂ ನೀನ್ಯಾರೊ ಬಲು ಬಾಯ್ಬಿಡುತಿಹೆ ತಿಳಿಯೊ ರಾಜಕುವರಿಯು ನಾನೂ|

ತೊಲಗೊ ತೀವ್ರದಿ ರಾಜಭಟರು ಕಂಡರೆ ನಿನ್ನ ಬಲು ಬಾಧಿಸಿ ಬಂಧಿಸುತಿಹರೂ ||||


ಇಂದುವದನೆ ನಿನ್ನ ಚಂದಕಟಾಕ್ಷದಿ ಬಂಧಿಸಿರುವಿ ಬೇರೆ ಬಂಧನವೇ? |

ಇಂದು ನಿನ್ನಯ ತಂದೆಗೆ ಜಾಮಾತನೆಂದು ನಿನ್ನನೆ ಪೊಂದೆ ಬಂದಿಹೆನೂ || ||


ಹೆಚ್ಚು ಕಡಿಮೆ ಮಾತಾಡದಿರೋ ನಿನ್ನ ಕೊಚ್ಚಿಕೊಂದು ಹಾಕುವರೀಗ |

ಇಲ್ಲಿ ಬಂದು ಅನಾಥಾಗಿ ಮರಣವಾಗಲೂ ಹಂದಿ ನಾಯಿ ತಿಂದು ತೇಗುವವು || ||


ವಿಧಿಬರೆದುದ ಒರೆಸುವರ್ಯಾರ್? ಆದಿರಲಿ ಚದುರೆ ವರಿಸೆನ್ನ ನೀನೆನುತಾ|

ಕುದರೆ ಅವಳೆಡೆಗೆ ನಡೆಸುತಲಿರೆ ಆ ಪದುಮೆ ಸಖಿಯರಿಂದೊಡಗೂಡೀ || ||


ಕಲ್ಲು ಕಲ್ಲಿ ನಿಂದ್ಹೊಡೆಯಲು ಕುದುರೆಯು ಅಲ್ಲೆ ಪ್ರಾಣ ತ್ಯಜಿಸಲು ಆಗ |

ಮೆಲ್ಲನೆ ಕಾಲ್ನಡಿಗೆಯಲಿ ಗಿರಿಯನೇರಿ ಸೊಲ್ಲು ಸದ್ದಿಲ್ಲದೆ ಮಲಗಿದನು || ||


ಹಸಿದನೆಂದು ಷಡ್ರಸ ಅನ್ನವತಂದು ಶಶಿಮುಖಿ ಬಕುಲೆ ಎಬ್ಬಿಸಲಾಗ|

ಹಸಿವೆ ಇಲ್ಲವಮ್ಮಾ ಕುಸುಮಗಂಧಿಯ ಕಂಡು ಬೆಸೆದುದೆನ್ನ ಯ ಮನ ಕೆಯಲೀ ||೧೦||


ಎಲ್ಲಿರುವಳು ನೀನಲ್ಲೆ ಕಳುಹಿಸೆನ್ನ ಳ್ಳೆ ಮಾತುಗಳನಾಡುತಲೇ|

ಲ್ಲ ಕಾರ್ಯ ಕೈಗೂಡಿಸೆಂದು ಶಿರಿನಲ್ಲಪ್ರಾಥಿಸಿತೆರಳುವೆನು || ೧೧ ||


ಆಕಾಶರಸನ ಸುತೆ ಪದ್ಮಾವತಿ ಆಕೆಲಿಮನ ನೆಲೆಸಿಹುದೀಗ ಜೋಕೆಲಿ |

ಕಾರ್ಯಸಾಧಿಸಿಕೊಂಡು ಬಾ ಎಂದು ಆಕೆಯ ಕಳುಹಿಸಿ ಯೋಚಿಸಿದಾ || ೧೨ ||


ತನ್ನ ಕಾರ್ಯತಾ ಮಾಡುವದುತ್ತಮ ಹೆಣ್ಣು ಮಕ್ಕಳ ಸವಿ ಮಾತಿನಲೀ |

ಸುಮ್ಮನೆ ಕೂಡುವದುಚಿತವಲ್ಲವೆಂದು ರಮ್ಯ ಕೊರವಿ ವೇಷ ಧರಿಸಿದನೂ || ೧೩ ||


ಹರಕ ಕುಪ್ಪುಸ ತೊಟ್ಟು ಹಳೆಯ ಸೀರೆಯುನುಟ್ಟು ಕೊರಳೊಳ್ ಮಣಿಗಳ ಸರಧರಿಸೀ|

ಕರದಿ ಕಾಜಿನಬಳೆ ಕಂಕುಳೊಳ್ ಕೂಸನೆತ್ತಿ ಶಿರದಿ ಬುಟ್ಟಿಯನ್ಹೊತ್ತು ತೆರಳಿದಳೂ ||೧೪ ||


ಅತ್ತ ಆಕಾಶನ ಪುತ್ರಿ ಮೈಯ್ಯಮೇಲೆಚ್ಚರಿಲ್ಲದೇ ಮಲಗಿರಲೂ |

ಸುತ್ತು ಮುತ್ತು ಪಟ್ಟಣದೊಳಹೊರಗಿನ ಶ್ರೇಷ್ಠ ವೈದ್ಯರುಪಚರಿಸುತಿರೇ || ೧೫ ||


ಮಾತಾಪಿತರೂ ಪ್ರೀತಿಯ ಮಗಳಿಗೆ ಭೂತಬಾಧೆಯೊ ಎಂದು ಚಿಂತಿಸುತಾ |

ಭೂತನಾಥಗಭಿಷೇಕ ಮಾಡಿರೆಂದು ಪ್ರಖ್ಯಾತ ಬ್ರಾಹ್ಮಣರ ಕಳಿಸಿದರೂ || ೧೬ ||


ಪುರದೊಳು ಹರಿಚರಿತೆಯ ಪಾಡುತಲೇ ಕೊರವಿ ಬರುವದನೆ ನೋಡಿ ಜನಾ |

ತ್ವರದಿ ಪೇಳಲೂ ಅರಸಿ ಕರೆಸ್ಯವಳ ವರ ಪೀಠದಿ ಕುಳ್ಳಿರಿಸಿದಳೂ || ೧೭ ||


ಕೊರವಿಯ ಸ್ವರ ಕೇಳುತ ರಾಜ ಕುಮಾರಿ ತಾ ಇರದೆ ಮಂಚವನಿಳಿದ್ಹೊರಗೆ ಬರೇ |

ಪರಮಾಶ್ಚರ್ಯದಿ ಮಗಳ ಬಿಗಿದಪ್ಪಿ ಹರುಷದಿ ಕೊರವಿಗೆ ಹೇಳಿದಳೂ || ೧೮ ||


ಎರಡು ವಾರದಿಂದ ಕಣ್ಣು ತೆರೆಯದೇ ಅನ್ನ ನೀರಿಲ್ಲದೆ ಮಲಗಿಹಳೂ |

ನಿನ್ನ ಕಾಲ್ಗುಣದಿ ಹೊರಗೆ ಬಂದಿಹಳು ಇನ್ನು ಏನಾಗಿರುವದು ಪೇಳೂ || ೧೯ ||


ಮುತ್ತುಲಿ ತುಂಬ್ಹೊನ್ನು ಮತ್ತೆ ಕೂಸಿಗೆ ಅನ್ನ ಉತ್ತುಮಳೆನೀ ನೀಡೆನಲೂ |

ಆರಸಿ ಅನ್ನ ತರಿಸೆ ಉಣದಿರೆ ಶಿಶು ತಾಉಂಡು ಕೊರವಿ ವೀಳ್ಯ ಮೆಲ್ಲುತಲೇ || ೨೦ ||


ಆರಸಿಯಾತುರ ಕಂಡು ತ್ವರದಿ ಕಂಗಳ ಮುಚ್ಚಿ ಸ್ಮರಿಸಿ ಸಕಲದೇವತೆಗಳನೂ |

ವರವೇಂಕಟೇಶನೆಂಬವಗೆ ಮೋಹಿಸಿ ಕಾಮಜ್ವರ ಪೀಡಿತಳಾಗಿ ಮಲಗಿಹಳೂ ||೨೧ ||


ಆತನೊಡನೆ ತನ್ನ ಪ್ರೀತಿ ಪ್ರೇಮವ ಮುಚ್ಚಿ ಮಾತಿನಿಂದಲಿ ವಾದಿಸಿ ಅವನ |

ಪ್ರಖ್ಯಾತ ಹಯಕೆ ಕಲ್ಲೊಗೆದು ಕೊಲ್ಲಲೂ ಆತ ಪೋದ ತನ್ನಯ ಸ್ಥಳಕೇ || ೨೨||


ಆದೇ ಚರಿತೆಯ ನಾ ಪಾಡುತ ಬರುತಿರೆ ಮುದದಿ ಧೇನಿಸಿ ಬಂದಳು ಹೊರಗೇ |

ಇದು ಸುಳ್ಳೋನಿಜವೋ ತಿಳಿಯಲು ನೀ ಮೊದಲು ನಿನ್ನ ಮಗಳಿಗೆ ಕೇಳೂ || ೨೩ ||


ಮಗಳ ಮುಗಳುನಗೆ ನೋಡಿ ಕೊರವಿ ಅವನಿರುವ ಸ್ಥಳವ ನೀನರುಹೆನಲೂ |

ವರ ವೈಕುಂಠದೊಳಿರುವವನ ಸರಿ ಮಿಗಿಲು ಮೂರ್ಜಗದೊಳ್ಯಾರಿಹರೂ|| ೨೪ ||


ಇನ್ನೊಂದು ಘಳಿಗೆಗೆ ಕನ್ನೆಯ ಕೇಳಲು ನಿನ್ನಲ್ಲಿ ಬರುವಳಾವರದವಳೂ |

ಪನ್ನ ಗಾಚಲಾಸಿ ಉನ್ನತವರನವ ಮನ್ನಿ ಸ್ಯವಗೆ ಮಗಳನ್ನೆ ಕೊಡೂ || ೨೫ ||


ಬಿಟ್ಟರೀಕೆಗೇ ತಟ್ಟೊದು ಮರಣವು ಸ್ಪಷ್ಟನಿನಗೆ ಹಿತಹೇಳಿದೆನೂ |

ದುಷ್ಟಕೊರವಿ ಎಂಥ ಕೆಟ್ಟನುಡಿದಳೆಂದು ಸಿಟ್ಟು ಮಾಡಿದಿರು ನಿಜವಿಹುದು || ೨೬ ||


ಎನ್ನ ಒಡೆಯನಾಣೆ ಎನ್ನ ಕೂಸಿನ ಆಣೆ ಎನ್ನಾಣೆಯನಿತ್ತು ಪೇಳಿದೆನೂ |

ನಿನ್ನ ಮಗಳಿಗಿನ್ನೂಮ್ಮೆ ಏಕಾಂತದಿ ಚನ್ನಾಗಿ ಕೇಳಿಕೊನ್ನು ತಲೇ || ೨೭||

ಖರೆಯಾದರಿನ್ನೂಮ್ಮೆ ಕರೆದು ಮನ್ನಿಸೆನ್ನ ತಿರಿದುಣ್ಣೊ ಕೊರವಿಯು ನಾನಲ್ಲಾ |

ಪರ ಉಪಕಾರಕೆ ಚರಿಸಿ ಭೂಮಂಡಳ ತಿರುಗತಿಹೆನು ನಿನಗರುಹಿದೆನೂ || ೨೮ ||


ಪರಮ ಶ್ರೀ ಪಾದರೆಣು ಹಣೆಗೆ ಹಚ್ಚಿ ಜ್ವರವೀಗಲೆ ನಾಶವಾಗುವದು ತ್ವರವಿದೆ |

ಹೋಗಿ ಬರುವೆನೆನೆ ಕೊರವಿಗೆ ಕರ ಮುಗಿದು ನಮಿಸಿ ಕಳುಹಿದಳೂ || ೨೯ ||


ಕೊರವಿ ಹೇಳಿಕೆಯಂತೆ ಬರಲು ಬಕುಲೆಯಳ ಕರೆದು ಪೀಠದಲ್ಲಿ ಕುಳ್ಳಿರಿಸೀ |

ವರನ ವೃತ್ತಾಂತವ ಅರಸ ಕೇಳಿ ತಾ ಕರೆಸಿ ಶುಕಮುನಿಯ ಗುರು ಸಹಿತಾ || ೩೦||


ಬರುತಲ್ಯವರ ಮತಕೇಳೆ ಹರುಷ ಬಟ್ಟು ಹರಿಗೆ ಬರಿಪತ್ರ ತೀವ್ರದಲೀ|

ಎನಲು ಬರೆದು ಪತ್ರ ಮುನಿಯ ಕೈಯ್ಯೂಳಿತ್ತು ಕಳುಹಿದ ವೆಂಕಟಗಿರಿಗಾಗ || ೩೧ ||


ಪತ್ರ ನೋಡಿ ಹರಿ ಅತ್ಯಂತ್ಹರುಷದಿ ಉತ್ತಮ ಮುನಿಗಾಲಂಘಿಸಿದಾ |

ಅಷ್ಟರೊಳ್ ಬಕುಲೆ ಬರುತ್ತಲೆ ನುಡಿದಳು ವತ್ಸ ನಿನ್ನ ಕಾರ್ಯ ಫಲಿಸಿಹುದು || ೩೨ ||

ಶ್ರಮದಿಂದ ಕ್ರಮದಿ ನೀ ಮಾಡಿದ ಕಾರ್ಯವ ಮುನಿರಾಯನು ಪೇಳಿದನೆನಗೇ |

ಎಲ್ಲತರದ ಪುಣ್ಯ ಕೂಡಿ ಬರುವದೊಂದು ಕಲ್ಯಾಣವ ಕಟ್ಟಿದವರಿಗೆ | ೩೩ | ||

ನಿನ್ನ ಕಾರ್ಯಕೆ ನಾ ಪೋಗುವ ಮುನ್ನವೇ ಧನ್ಯಕೊರವಿ ಹೋಗಿ ಮಾಡಿದ್ದಳೂ|

ಇನ್ನೇತಕೆ ತಡ ನಿನ್ನ ಬಳಗದವರನ್ನೆ ಕರೆಸು ಈಗ ತೀವ್ರದಲೀ || ೩೪ ||


ಮದುವೆಯ ವಾರ್ತೆಯ ವಿಧಿಗೆ ತಿಳಿಸಲೂ ಮುದದಿ ಸರುವ ಬಳಗವಕೂಡೀ |

ಒದಗಿ ಬಂದು ತಂದೆಯ ಪಾದಕೆರಗಲೂ ಮಗನಿಗ್ಹಿಂದಿನದೆಲ್ಲ ಹೇಳಿದನು || ೩೫ ||


ಇಷ್ಟು ಜನರಿದ್ದು ಲಕ್ಷ್ಮೀ ಇಲ್ಲದಿರೆ ಇಷ್ಟವಿಲ್ಲ ಕಾರ್ಯದಲೀ |

ಮತ್ತೆ ಸುಳ್ಳು ಹೇಳಿ ಕರೆದು ತಾರೆಂದು ಉತ್ತಮ ಸೂರ್ಯನ ಕಳುಹಿದನೂ || ೩೬||


ರವಿಯ ಮಾತು ಕೇಳಿ ತವಕದಿಂದ ಬಂದು ಹರಿಯ ಮುಖವನ್ನೆ ದಿಟ್ಟಿಸುತಾ|

ಇನ್ನೊಬ್ಬಳ ನೀ ಮದುವೆಯಾಗುವವ ಎನ್ನನ್ಯಾಕೆ ಕರೆಸಿದಿ ಎನಲು || ೩೭||


ತ್ರೇತೆಲಿ ನಿನಗೆ ನಾ ಮಾತು ಕೊಟ್ಟದನು ಜ್ಞಾಪಿಸಿಕೋ ವೇದವತಿಯಳನೂ |

ಆಕೆಯೆ ಪದ್ಮಾವತಿಯಾಗಿಹಳು ವಿವೇಕದಿ ಮಸುವೆ ನೀ ಮಾಡೆನಲೂ || ೩೮ ||


ಒಪ್ಪಿದೆ ಹರುಷದಿ ತಪ್ಪು ಕ್ಷಮಿಸೆಂದು ಭಕ್ತಿಲಿ ಪಾದಕೆ ನಮಿಸುತಲೇ |

ಉತ್ಸಾಹದಿ ಮದುವೆಯ ಮಾಡುವೆ ಮನ ತೃಪ್ತವಾಯಿತೆಂದು ಪೇಳಿದಳೂ || ೩೯ ||


ತಂದೆಯ ಮದುವೆಗೆ ಬಂದ ಸುರರಿಗೊಂದೊಂದು ಕಾರ್ಯವಿಧಿ ನೇಮಿಸಿ ತಾ |

ನಿಂತು ದೇವರೂಟ ಮಾಡಿ ಎಲ್ಲರೂ ಅಂದಣೇರಿ ಹೊರಟರು ಆಗ || ೪೦ ||


ಮಾರ್ಗದಿ ಶುಕಮುನಿ ಭೋಜನ ಮಾಡೆನೆ ಬಹು ಜನರಿರುವೆವು ಬೇಡೆನಲೂ |

ನೀ ಒಬ್ಬನುಂಡರೆ ಜಗತೃಪ್ತವಾಗುವದೆಂದು ಉತ್ತರಣೆಯ ಅನ್ನ ಅರ್ಪಿಸಿದಾ || ೪೧ ||


ತರತರದ ವಾದ್ಯ ವೈಭವಗಳಿಂದ ಅರಸ ಬಂದು ಆಳಿಯನ ಸಹಿತಾ |

ಸರುವ ಬೀಗರನು ಕರೆದು ತಂದು ಒಂದರಮನೆಯೊಳಗಿಳಿಸ್ಯುಪಚರಿಸೀ || ೪೨ ||


ಶಿಷ್ಟಾಚಾರದಿ ವರಪೂಜೆನೂ ನಿಷ್ಠೆಯಿಂದ ಮಾಡಿದ ರಾಜಾ |

ಮೃಷ್ಟಾನ್ನ ಮಾಡಿಸಿ ಬೀಗರಿಗೆಲ್ಲ ಋಕ್ಕೋತದ ಊಟ ಮಾಡಿಸಿದಾ || ೪೩ ||


ನಾನಾ ವಾದ್ಯದಿ ಆನೆ ಅಂಬಾರಿಲಿ ಶ್ರೀನಿವಾಸನನು ಕರತಂದೂ |

ಹೇಮ ಮಂಟಪದಿ ಭಾಮೆ ಪದಮೆಯಳ ಕರೆದು ನಿಲ್ಲಿಸಿದರು ವರನೆದುರು || ೪೪ ||


ಶ್ರೇಷ್ಠ ಪುರೋಹಿತ ಋಷಿಮುನಿಗಳು ಮಂಗಳಾಷ್ಟಕ ಪಠಿಸುತ ಸುಸ್ವರದೀ |

ಸುಮುಹೂರ್ತೇ.. ಸಾವಧಾನ ವೆನ್ನು ತಲೆ ಸರುವರಕ್ಷತೆಗಳ ಹಾಕಿದರು || ೪೫ ||


ಮಂಗಳ ವಾದ್ಯಗಳ್ ಭೋರ್ಗರೆಯಲು ಸುರಂಬರದಿಂ ಪುಷ್ಟವರ್ಷಿಸಲೂ |

ತುಂಬರು ನಾರದರಿಂಬಾಗಿ ಪಾಡೊರು ರಂಭೆರು ನರ್ತನ ಮಾಡಿದರೂ || ೪೬ ||


ಕೊಟ್ಟನು ಶತಭಾರ ಸುವರ್ಣ ಕಿರೀಟವ ಆರ್ಥಿಯಿಂದ ಆಳಿಯಗೆ ರಾಜಾ |

ಅತ್ಯಂತ್ಹ ರುಷದಿ ಇತ್ತನು ಪುತ್ರಿಗೆ ಸಮಸ್ತ ಸುವಸ್ತ್ರಾಭರಣಗಳಾ || ೪೭ ||


ನಡುವೆ ವೇಂಕಟೇಶ ಎಡಬಲ ಲಕ್ಷುಮಿ ಪದುಮಾವತಿಯರ ಕುಳ್ಳಿರಿಸೀ ಮಂಗಳ |

ಜಯಜಯಮಂಗಳ ವೆನ್ನುತ ಶುಭಾಂಗಿಯರಾರುತಿ ಬೆಳಗಿದರೂ || ೪೮ ||


ನಾಲ್ಕುದಿನಕೆ ನಾಗೋಲಿಯ ಮಾಡೀ ಮಗಳು ಅಗಲುವಳೆಂದು ಮನನೊಂದೂ |

ಸೊಗಸಿಲ್ಲದಲೆ ನಿರೂಪವ ಕೊಟ್ಟು ಕಳುಹಿಸಿದನು ಬೀಗರನಂದು || ೪೯ ||


ಚಿತ್ತವಿಟ್ಟೀ ಕಥೆ ನಿತ್ಯ ಪಠಿಪರಿಗೆ ಭಕ್ತಿ ಸುಜ್ಞಾನ ವೈರಾಗ್ಯವನೂ |

ಕೊಟ್ಟು ಕಡೆಯಲೀ ಮುಕ್ತಿಯನೆಯಿತ್ತು ಕರ್ತೃ ವೆಂಕಟಪತಿ ಪೊರೆಯುವನೂ || ೫೦ ||


ಮಂದಮತಿಯ ತಿದ್ದಿ ನಿಂತು ನುಡಿಸಿದನು ಬಿಂದುಮಾಧವ ವಿಠ್ಠಲನಿದನೂ |

ಹಿಂದೂ ಮುಂದೂ ಎಂದೆಂದಿಗೂ ಸಲಹುವನೆಂದು ಪದೇ ಪದೇ ವಂದಿಪೆನೂ || ೫೧ ||


ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ||
ಶ್ರೀ ಕೃಷ್ಣಾರ್ಪಣಮಸ್ತು

ಇನ್ನೂಯಾಕೆ ಬರವಲ್ಲಿ ವೈಕುಂಠ ಪುರದವನೇ |

ಭಕ್ತಿಲಿ ಕರೆದವರಲ್ಲಿಗೆ ಬರುವನೆಂಬ ಬಿರುದು ಪೋತ್ತವನೇ || ||

ಎಲ್ಲ ಜೀವಿಗಳ ಹೃದಯದೊಳಿದ್ದು ತೋ.. ರ ಗೊಡದವನೇ |

ಸ್ವಾಮೀ ಬಲ್ಲಿದ ಭಜಕರಿಗೊಲಿದು ಕೈ...ವಲ್ಯ ಕೊಡುವನೇ || ಅ ಪ ||


ಅನ್ಯಾಯದ ಖಣಿ ಕಲಿಯ ಬಲೆಯಲೀ ಸಿಲುಕೀ ಬಳಲಿಹೆನೋ |

ದೇವಾ ನಿನ್ನ ನಾಮವು ಬಾಯಿಗೆ ಬರದಂತೆ ಬಂಧನ ಮಾಡಿಹನೋ|

ಅಂದು ಹಿರಣ್ಯಕಶಿಪನ ಕಂದನ ಪೊರೆದ ನರಹರಿಯೇ |

ಸ್ವಾಮೀ ಇಂದು ಈಬಡ ಜೀವಿಯ ಮರೆವರೆ ನಿನಗೆ ಇದು ಸರಿಯೇ || ||


ಕರಿರಾಜಾ ದ್ರೌಪದೀ ದೇವಿಯರು ಕರೆದಾಕ್ಷಣ ಬಂದೂ |

ನೀಪೊರೆದ ಮಹಿಮೆ ಗುರು ಮುಖದಿಂದ ಅರಿತೂ ನಾ ಇಂದೂ |

ದುಷ್ಕರ್ಮವ ತರಿದೂ ಪೊರೆನೀ ನೆಂದೂ ಮೊರೆ ಇಡುತಲೆ ಬಂದೂ |

ನಾವರಲುತಿರುವದು ನಿನಗೆ ಅರಿಯದೇ ದೀನದಯಾ ಸಿಂಧೂ || ||


ಕರಿಯ ಮೊರೆಯನೂ ಕೇಳೀ ಸರಸಿಯ ಅರಸೀ ಬಂದೆಲ್ಲಾ |

ಸ್ವಾಮೀ ತರಳ ಧೃವನು ತಪ ಮಾಡುವ ವನವೇನು ಸನೀಯದಲ್ಲಿರಲಿಲ್ಲಾ |

ದೇವಾ ಗತಿ ಏನೆನಗವರಂತೇ ಭಕ್ತಿಯ ಪಥವೂ ಗೊತ್ತಿಲ್ಲಾ |

ಸ್ವಾಮೀ ಪತಿತ ಪಾವನನೆಂಬ ಬಿರದು ನಿನಗೊಬ್ಬನಿಗಿಹುದಲ್ಲಾ || ||


ಆಂತ್ಯ ಕಾಲಕಜಮಿಳನುದ್ದರಿಸಿದ ನಾರಾಯಣ ನಾಮಾ |

ಅವನಂತೆ ಎನಗು ಅಂಥ ಸಮಯ ಕೊದಗಿ ಸೆಂದು ಬೇಡುವೆ ನಿಸ್ಸೀಮಾ |

ಸಂತತ ಮನಸಿನಲ್ಲಿ ನಿನ್ನ ಸ್ಮರಿಸುತಿರುವಂತೆ ಕರುಣವನ್ನೆ ಬೀರೋ |

ಸ್ವಾಮೀ ಕನಸಿನಲ್ಲಾದರು ಆಗಾಗ್ಗೆ ಬಂದು ನಿನ್ನ ದಿವ್ಯರೂಪ ತೋರೋ || ||


ಮಂದ ಮತಿಯನಿತ್ತು ಮಾನವ ಜನ್ಮದಿ ತಂದವರ್ಯಾರಯ್ಯಾ |

ಸ್ವಾಮೀ ಬಿಂದು ಮಾಧವ ವಿಠ್ಠಲನಿನ್ನ ಧ್ಯಾನವ ಕೊಡದಿರೆ ಹ್ಯಾಂಗಯ್ಯಾ |

ಈಗಲೆ ಬೆಂದು ಭವದಿ ಬೆಂಡಾಗಿಹೆ ಬೇಗ ಉದ್ದರಿಸೋದಮ್ಮಯ್ಯಾ |

ನಿನ್ನ ತೊಂಡರದಾಸರ ದಾಸ್ಯವ ನೀಡಿ ಪಾಲಿಸಬೇಕಯ್ಯಾ ಸ್ವಾಮೀ || ||


ಶ್ರೀ.. ನಿವಾಸ ಪಾಲಿಸೆನ್ನಾ ಸಾನುರಾಗದಿ ಶ್ರೀಹರೀ |

ಹೀನಪಾಪಿ ಎಂದು ಉದಾಸೀನಮಾಡದೇ ಷೇರೀ || ||

ಸಿ ಭವಸಾಗರದಿ ಕೈಕಾಲ್ ಸೋತುಬಳಲಿ ಪರರ ಕೂಗುತ |

ಮೋಸಹೋಗಿ ಘಾಸಿಯಾದೇ ನಿನ್ನ ದಾಸರೊಳಗೆನ್ನ ಸೇ.. ರಿಸೋ || ||


ಜಗದವೃಕ್ಷ ದಲಗಲದ ಮಹಾ ಖಗದಮಹಿಮೆ ಅರಿಯದೇ |

ಮೂರ್ಬಗೆಯ ತಾಗಳುಣುತಲದೇ. ಸೊಗಸು ಎಂದುತಿಳಿದೆನೋ || ||

ಆರು ಅರಿಗಳೆನ್ನ ಮನದಿ ಸೇರಿ ತೋರದಲಿರುವರೋ |

ವೀರ ಬಿಂದುಮಾಧವವಿಠಲ ಸೇರಿಸಿಕೋತವಚರಣಕೇ || ||


ಶ್ರೀ ವಾದಿರಾಜಾಂತರ್ಗತ ಶ್ರೀ ಭಾರತಿರಮಣ ಮುಖ್ಯಪ್ರಾಣಾಂತರ್ಗತ

ಶ್ರೀರಾಮ ಕೃಷ್ಣ ವೇದವ್ಯಾಸಾತ್ಮಕ

ಶ್ರೀ ಆಶ್ವಿನಿ ಹಯಗ್ರೀವಾಭಿನ್ನ ಶ್ರೀಕೃಷ್ಣಾರ್ಪಣಮಸ್ತು


ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ|

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು