ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಆರುತಿ ಪದಗಳು
401. ಜಯ ಮಂಗಳಂ ನಿತ್ಯ ಶುಭಮಂಗಳಂ |
ರಂಗನರ್ಧಾಂಗಿಗೆ ಮಂಗಳೆ ಶುಭಾಂಗಿಗೆ || ತಾಯೇ ||
ಪುಂಡರಿಕಾಕ್ಷನರಾಣಿಗೆ, ನಿತ್ಯಶುಭವ ತೋರುವಳಿಗೆ |
ನಿತ್ಯಮುಕ್ತಳಿಗೆ, ನಿತ್ಯವಿನೂತಳಿಗೆ | || 1 ||
ಪುರುಷೋತ್ತಮನ ವಕ್ಷನಿವಾಸಿನಿ ತೋಯಜಾಕ್ಷಿಗೆ|
ಹರಿಯಸೇವೆಯ ನಿರುತ ಮಾಡುವ ಸರಸಿಜಾಕ್ಷಳಿಗೆ || || 2 ||
ಭಕ್ತವತ್ಸಲೆ ತ್ರೀಜಗನ್ಮಾತೆ ಮಹಾಲಕ್ಷ್ಮಿಗೆ |
ಜಗನ್ನಾಥ ಶ್ರೀಕೃಷ್ಣವಿಟ್ಠಲ ಪ್ರಿಯಳಿಗೆ | || 3 ||
ಎಎಎ
402. ಜಯಮಂಗಳಂ, ನಿತ್ಯಶುಭಮಂಗಳಂ |
ಹರೇ ಶ್ರೀನಿವಾಸಗೆ, ಶ್ರೀಲಕ್ಷ್ಮೀನಿವಾಸಗೆ ||
ನಿತ್ಯನವನೂತನಗೆ, ಜಯಮಂಗಳಂ |
ಮಾವನಕೊಂದವಗೆ, ಮನುಜೋದ್ಧಾರನಿಗೆ ||
ಗೋವಳಕಾಯ್ದವಗೆ, ಗೋವರ್ಧನಧಾರಿಗೆ |
ಕಾಳಿಯಮರ್ದನಗೆ, ಕಲಿಯಭಂಜಕನಿಗೆ ||
ಪೂತನಿಸಂಹಾರಕಗೆ, ಪರಮಪವಿತ್ರಗೆ |
ಬೆಣ್ಣೆಯಕದ್ದವಗೆ, ಮೊಹಿನಿರೂಪದವಗೆ ||
ರುಕ್ಮಿಣಿಯಗೆದ್ದವಗೆ, ಗೋಪಿಜನಪ್ರಿಯಗೆ |
ಪಾರ್ಥಸಾರಥಿಗೆ, ಪುರುಷೋತ್ತಮನಿಗೆ ||
ದುಷ್ಟರಸಂಹಾರಿಗೆ, ಶಿಷ್ಟರ ಪರಿಪಾಲಕಗೆ |
ಪ್ರೀಯ ಶ್ರೀಕೃಷ್ಣವಿಟ್ಠಲಗೆ, ಮಂಗಳಮೂರುತಿಗೆ ||
ಎಎಎ
403. ಜಯಮಂಗಳಂ, ಜಯಮಂಗಳಂ, ನಿತ್ಯಮಂಗಳಂ |
ಮನೋನಿಯಾಮಕನಿಗೆ, ಮನುಜೋದ್ಧಾರಗೆ ಮಂಗಳಂ, ಜಯಮಂಗಳಂ ||
ಮತ್ಸ್ಯಾವತಾರಿಗೆ, ಮಂದರೋದ್ಧಾರಕನಿಗೆ ||
ಬ್ರಹ್ಮಾಂಡವನೆ ಪೊತ್ತವನಿಗೆ, ಮೂರುಪಾದ ಅಳೆದವಗೆ |
ಮಗುವಿಗೆ ಅಭಯವಿತ್ತವಗೆ, ಮಾತೆಯ ಶಿರ ತರಿದವಗೆ ||
ಮಾತೃವಾಕ್ಯಪರಿಪಾಲಕಗೆ, ಮುರಹರ ಮುರಳಿವಾದಕಗೆ |
ಮನವ ಕೆಡಿಸಿದ ಮನುಜಗೆ, ಮದವ ಹೆಚ್ಚಿಸುವ ವಾಜಿಗೆ ||
ಮಂಗಳಾಂಗನಿಗೆ ಶ್ರೀಕೃಷ್ಣವಿಟ್ಠಲಗೆ ಮಂಗಳಂ ||
ಎಎಎ
404. ಜಯಮಂಗಳಂ ನಿತ್ಯ ಶುಭಮಂಗಳಂ || ಪ ||
ಭೂವೈಕುಂಠದಿ ನಿಂತವಗೆ ಶುಭಮಂಗಳಮಂ |
ಭೂವರಾಹಗೆ ಧರಣಿ ಬೇಡಿದವಗೆ ಶುಭಮಂಗಳಂ ||
ಸರ್ವಜ್ಞ ಹಯವನೇರಿ ಬೇಟೆಗ್ಹೋದವಗೆ ಶುಭಮಂಗಳಂ |
ಶ್ರೀವನಿತೆ ಪದ್ಮಾವತಿಯ ಕಂಡವಗೆ ಶುಭಮಂಗಳಂ || 1 ||
ಗಗನ ರಾಜ ಪುತ್ರಿಯ ಮೋಹಿಸಿದವಗೆ ಶುಭ ಮಂಗಳಂ |
ಮಗಳನ ಕೊಡುವಂತೆ ಧರಣಿದೇವಿಗ್ಹೇಳಿದವಗೆ ಶುಭಮಂಗಳಂ ||
ಜಗದೊಡೆಯ ಕನ್ಯೆಯ ಬೇಡಿದವಗೆ ಶುಭಮಂಗಳಂ |
ಆಗಸಪುರಕೆ ಬಕುಲಾವತಿಯ ಕಳುಹಿದವಗೆ ಶುಭಮಂಗಳಂ || 2 ||
ಶ್ರೀಲಕುಮಿಪತಿ ಕೊರವಿ ವೇಷಧರಿಸಿದವಗೆ ಶುಭಮಂಗಳಂ |
ಮೊಲೆಯುಡುವ ಕಂದನ ಪಿಡಿದವಗೆ ಶುಭಮಂಗಳಂ ||
ಕೋಲನೆ ಪಿಡಿದು ಬುಟ್ಟಿಯ ಧರಿಸಿದವಗೆ ಶುಭಮಂಗಳಂ |
ಲಲನೆಯನೊಲಿಸಲು ತಾನೇ ಪೋದವಗೆ ಶುಭಮಂಗಳಂ || 3 ||
ತರಣಿಯ ಕಂಡು ಸಂತೋಷಗೊಳಿಸಿದವಗೆ ಶುಭವಂಗಳಂ |
ಗಿರಿಮಾತೆಯ ಬರುವುದ ತಿಳಿಸಿದವಗೆ ಶುಭಮಂಗಳಂ ||
ಭರದಿ ತನ್ನ ಬಳಗ ಕರೆಸಿದವಗೆ ಶುಭಮಂಗಳಂ ||
ಶ್ರೀರಮಣಿ ಇಂದಿರೆಯ ಕರೆಸಿದವಗೆ ಶುಭಮಂಗಳಂ || 4 ||
ಎತ್ತ ನೋಡಿದರೂ ಪರಿವಾರದ ಸಂಭ್ರಮ ಕಂಡವಗೆ ಶುಭಮಂಗಳಂ |
ಚಿತ್ತಜನಯ್ಯ ಸರ್ವರಿಗೂ ಭೂರಿಭೋಜನ ನೀಡಿದವಗೆ ಶುಭಮಂಗಳಂ ||
ಉತ್ತರಾಣಿ ತಿಂದ ನಿತ್ಯ ತೃಪ್ತನಿಗೆ ಶುಭಮಂಗಳಂ |
ಸುತ್ತ ಪರಿವಾರದೊಡನೆ ದಿಬ್ಬಣ ಬೆಳೆಸಿದವಗೆ ಶುಭಮಂಗಳಂ || 5 ||
ಪದ್ಮಾವತಿಯ ಮದುವೆ ಮಾಡಿಕೊಂಡವಗೆ ಶುಭಮಂಗಳಂ |
ಪದ್ಮಾನಾಭ ಶ್ರೀದೇವಿಸಹಿತ ಬೆಟ್ಟದಲಿ ನಿಂತವಗೆ ಶುಭಮಂಗಳಂ ||
ಮಾಧವನ ಪಾದನಂಬಿದವರಿಗೆ ಅಭಯನಿವಗೆ ಶುಭಮಂಗಳಂ |
ಸದಾ ಶ್ರೀಕೃಷ್ಣವಿಟ್ಠಲನ ನೆನೆವರಿಗೆ ಮಂಗಳಮಾಳ್ಪಗೆ ಶುಭಮಂಗಳಂ || 6 ||
ಎಎಎ
405. ಜಯಮಂಗಳಂ, ನಿತ್ಯ ಶುಭಮಂಗಳಂ |
ಹರೇ ಶ್ರೀನಿವಾಸಗೆ, ಶ್ರೀಲಕ್ಷ್ಮೀನಿವಾಸಗೆ ||
ನಿತ್ಯ ನವನೂತನಗೆ, ಜಯಮಂಗಳಂ |
ಮಾವನ ಕೊಂದವಗೆ, ಮನುಜೋದ್ಧಾರನಿಗೆ ||
ಕಾಳಿಯಮರ್ದನಗೆ, ಕಲಿಯ ಭಂಜಕನಿಗೆ |
ಪೂತನಿ ಸಂಹಾರಕನಿಗೆ, ಪರಮಪವಿತ್ರಗೆ ||
ಬೆಣ್ಣೆಯಕದ್ದವಗೆ, ಮೋಹಿನಿ ರೂಪದವಗೆ |
ರುಕ್ಮಿಣಿಗೆದ್ದವಗೆ, ಗೋಪಿ ಜನಪ್ರಿಯಗೆ ||
ಪಾರ್ಥಸಾರಥಿಗೆ, ಪುರುಷೋತ್ತಮನಿಗೆ |
ದುಷ್ಟರ ಸಂಹಾರಿಗೆ, ಶಿಷ್ಟರ ಪರಿಪಾಲಕಗೆ ||
ಪ್ರಿಯ ಶ್ರೀಕೃಷ್ಣವಿಟ್ಠಲ ಮಂಗಳಮೂರುತಿಗೆ ||
ಎಎಎ
406. ಶಂಖಚಕ್ರಪದ್ಮಧಾರಿ ಪದ್ಮನಾಭಗೆ ಮಂಗಳಂ |
ಉರಗಶಯನ ಉತ್ತಮ ಶ್ಲೋಕಗೆ ಮಂಗಳಂ ||
ಜಾನು ಜಂಘ ಸುಂದರ ಜನಾರ್ದನಗೆ ಮಂಗಳಂ |
ಉದರದಿ ತ್ರಿಲೋಕ ಧರಿಪ ತ್ರಿವಿಕ್ರಮಗೆ ಮಂಗಳಂ ||
ನಾಭೀಯಿಂ ಜನಿಪ ಬ್ರಹ್ಮ ಪಿತಗೆ ಮಂಗಳಂ |
ವಕ್ಷದಿ ವಾಸಿಪ ಲಕ್ಷ್ಮೀರಮಣಗೆ ಮಂಗಳಂ ||
ಮೌಕ್ತಿಕಹಾರ ಸುಶೋಭಿತ ಕಂಠದ ಅನಿಕೇತಗೆ ಮಂಗಳಂ |
ಅಭಯ ಹಸ್ತ ಪೊತ್ತ ಹೃಷಿಕೇಶಗೆ ಮಂಗಳಂ ||
ಕಂಕಣಧರಿತ ಕರದಿಂ ವರವೀವ ಅನಂತಗೆ ಮಂಗಳಂ |
ನಿಮಿಲನೇತ್ರ ನಳಿನಾಕ್ಷ ಶ್ರೀವಿಷ್ಣುವಿಗೆ ಮಂಗಳಂ ||
ತುಟಿಯಲಿ ಮಂದಹಾಸ ಬೀರಿದ ಮೋಹನಗೆ ಮಂಗಳಂ |
ಮಕರಕುಂಡಲಧರಿತ ಖಗವಾಹನ ಶ್ರೀಹರಿಗೆ ಮಂಗಳಂ ||
ವಿಶಾಲಕೇಶರಾಶಿಯ ಕೇಶವನಿಗೆ ಮಂಗಳಂ |
ಕಿರೀಟಧಾರಿ ಕ್ಷಿತಿಜನ ಪಾಲಿಪ ಗೋವಿಂದಗೆ ಮಂಗಳಂ ||
ಅಚ್ಯುತ ನಾರಸಿಂಹ ಪುರುಷೋತ್ತಮಗೆ ಮಂಗಳಂ |
ಅಡಿಯಿಂ ಮುಡಿವರೆಗೆ ಸರ್ವಾಂಗ ಸುಂದರನಾದ ||
ಶ್ರೀಕೃಷ್ಣವಿಟ್ಠಲಗೆ ಮಂಗಳಂ ಜಯಮಂಗಳಂ |