ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಶ್ರೀ ರಾಘವೇಂದ್ರ ನಮ:
10. ಶ್ರೀನಾಥನ ಒಂದೇ ಮನದಿ ಪೂಜಿಸಲು |
ರಾರಾಜಿಸುವ ವಿಷ್ಣು ಲೋಕದಿ ||
ಘಸಣೆ(ಚಿಂತೆ) ಕಳೆದು ಘನತೆವೆತ್ತಿ |
ವೇಂಕಟಪತಿ ಶ್ರೀಕೃಷ್ಣವಿಟ್ಠಲನ ದಯದಿ ||
ದ್ರವಿಣ ಪಡೆದು ಸುಖಿಸುವ |
ನಮಿಸಲು ಬಾರಿ ಬಾರಿಗೂ ||
ಮರೆಯದೆ ಸಕಲರ |
ಹರುಷದಿ ಜನ್ಮ ಸಾರ್ಥಕವಾಗಿಸುವ ||
ಶ್ರೀ ವಾದಿರಾಜರು
11. ನೆನೆವೆ ಗುರು ವಾದಿರಾಜರ ಚರಣವ |
ಶ್ರೀಹಯವದನ ನಿಜ ಭಕುತ | || ಪ ||
ಯುಕ್ತಿಮಲ್ಲಿಕಾ ಸೊಬಗು ಪಸರಿಸಿದ |
ವಿಷ್ಣೋ: ಸರ್ವೋತ್ತಮತ್ವಂ ಸಾರಿದ | || 1 ||
ಬೆಲ್ಲ ಕಡಲೆ ನೈವೇದ್ಯ ಇತ್ತು ಸಾಕ್ಷಾತ್ತಾಗಿ |
ಹಯಗ್ರೀವನ ಕಂಡು ಕೊಂಡಾಡಿದವರ | || 2 ||
ಸಜ್ಜನರ ತಾಪ ಕಳೆಯಲು ಸೋಂದಾಕ್ಷೇತ್ರದಿ ನೆಲಸಿ |
ಪೂಜಿಪನ, ಶ್ರೀಕೃಷ್ಣವಿಟ್ಠಲ ಸಲಹಲಿ ಅನವರತ | || 3 ||
ಎಎಎ
12. ಶ್ರೀವಾದಿರಾಜಗುರು ಕೃಪೆದೋರು ಸದಾ |
ಸೋಂದಾಕ್ಷೇತ್ರದಿನೆಲಸಿರುವ | || ಪ ||
ಭಕ್ತಗಣ ಶ್ರೇಷ್ಠ ಸಕಲಾಭೀಷ್ಟಪ್ರದ |
ಭಕ್ತ ಜನೋದ್ಧಾರಕ ಹಯಗ್ರೀವ ಉಪಾಸಕ | || 1 ||
ಸಕಲ ಸಲ್ಲಕ್ಷಣೋಪೇತ, ಸರ್ವಲಕ್ಷಣ ಸಂಪನ್ನ |
ಭೂತರಾಜರನುಗ್ರಹಿಪ, ರಮಾ-ತ್ರಿವಿಕ್ರಮರ ಕರೆಸಿದವ | || 2 ||
ಸುಜ್ಞಾನಪ್ರದಾಯಕ, ಮಧ್ವಮತೋದ್ಧಾರಕ |
ಸ್ವಾಮಿ ಶ್ರೀಕೃಷ್ಣವಿಟ್ಠಲನ ಅನವರತ ಪೂಜಿಪ | || 3 ||
13. ಸುಜ್ಞಾನಗುಣಸಂಪನ್ನ ಸರ್ವಕಾಮಪ್ರದಾಯಕಂ |
ವಾದಿರಾಜಗುರುಂ ಭಜೇ ಶ್ರೀಹಯಗ್ರೀವ ದಯಾಶ್ರಯಂ’ ||
ವಾದಿರಾಜಗುರುವೇ ಕರುಣದಿ ಎನ್ನಕಾಯೋ |
ಪ್ರೀತಿಯಿಂದ ಕರುಣಿಸೋ ಸುಜ್ಞಾನವ ||
ಭಕ್ತಿಮಾಡಲರಿಯೇ ಸೇವೆ ಮಾಡಲರಿಯೇ |
ನಿಷ್ಠೆಯಿಂದ ಗುರು ನಿನ್ನ ನೆನೆವೆನು ||
ಲಕ್ಷ್ಮಿ ಶೋಭಾನ ಪಾಡಿ ವರನ ಬದುಕಿಸಿದೆ |
ರುಕ್ಮಿಣೀಶ ವಿಜಯ ರಚನ ಸರ್ವಮಾನ್ಯ ||
ಧವಳ ಗಂಗೆಯ ತಟದಿ ಮಹಾದೇವನ ಸ್ಥಾಪಿಸಿ |
ಲಕ್ಷ್ಮೀ ತ್ರಿವಿಕ್ರಮರ ಬದರಿಯಿಂದ ಕರೆಸಿದೆ ||
ಭೂತರಾಜರ ಸೇವೆ ನಿತ್ಯದಲಿ ಸೇವಿಪ |
ಸಕಲ ಭಕ್ತರ ಆಭೀಷ್ಟೆ ಪೂರೈಪ ||
ನಿತ್ಯದಿ ಕಡಲೆ ಹೂರಣ ನೈವೇದ್ಯ ಅರ್ಪಿಸಿ |
ಹಯಗ್ರೀವನ ದಯದಿ ಸುಜ್ಞಾನ ಪಡೆದೆ ||
ಪರಮತ ಜಯಸಿ ಮಧ್ವಮತ ಪ್ರಚಾರಿಸಿ |
ನಾರಾಯಣ ಮಂತ್ರವ ಬಿಡದೆ ಜಪಿಸಿದ ಹಯವದನಾಂಕಿತನೆ ||
ದೈತಮತ ಪ್ರವರ್ತಕನೇ, ಶಿಷ್ಯವತ್ಸಲನೆ |
ಉಡುಪಿಲಿ ಶ್ರೀಕೃಷ್ಣವಿಟ್ಠಲನ ಕೈಂಕರ್ಯ ಮಾಳ್ಪ ||
ಶ್ರೀ ಜಯತೀರ್ಥರು
14. ಜಯರಾಯರ ಕರುಣೆ ಅಪಾರ ಅಪರಂಪಾರ |
ಎಂತು ಪೂಗಳಲಿ ಮಹಾಮಹಿಮ ಮುನಿವರ್ಯನ | || ಪ ||
ಕಾಗಿನಿ ತಟದಿ ವೃಂದಾವನದಿ ನೆಲಸಿಹ ಸದಾಯೋಗನಿರುತ |
ಭಕ್ತರ ಸಂಸಾರ ಮಲ ನಿವರ್iಲ ಮಾಡುವ ಮಲಖೇಡದಿ ವಾಸಿಪ ||
ಎತ್ತಾಗಿ ಜನಿಸಿ ಮಧ್ವಶಾಸ್ತ್ರ (ಪುಸ್ತಕ) ಪೊತ್ತುನಿಷ್ಠೆಯಿಂದಲಿ ತಿರುಗುತ |
ಗುರುಕೃಪೆಯಿಂ ಅದಕ್ಕೆ ಟೀಕೆ ಬರೆದ ಟೀಕಾರಾಯರ | || 1 ||
ಇಂದ್ರಾವತಾರಿ ಶೇಷಾಂಶ ಸಂಭೂತ ಸಂಸಾರ ವಿಷಯ ತೊರೆದ |
ಪರಮ ವೈರಾಗಿ ಭಕ್ತಜನರಿಗೆ ಅಭಯವಚನವೀವ ||
ದಿವ್ಯ ಸನ್ನಿಧಿ ತವ ಚರಣ ಪಿಡಿದಿರುವೆ ಬಿಡದೆ ಎನ್ನುದ್ಧರಿಸೋ |
ಗುರುವೇ ಜಯರಾಯ ಶ್ರೀಕೃಷ್ಣವಿಟ್ಠಲನ ವಾತ್ಸಲದ ಕಂದನೇ | || 2 ||
ಊಊಊ
ಸರ್ವಗುರುಗಳು
15. ಶ್ರೀಪೂರ್ಣಪ್ರಜ್ಞಂ ಜಯರಾಯಂ |
ಬ್ರಹ್ಮಣ್ಯತೀರ್ಥಸ್ಯಂ ಶ್ರೀಪಾದಂ |
ಶ್ರೀವ್ಯಾಸಂ ವಾದಿರಾಜಂ |
ವಿಜಯೀಂದ್ರಂ ರಘೂತ್ತಮಂ ||
ಶ್ರೀರಾಘವೇಂದ್ರಂ ಸತ್ಯಬೋಧಕಂ |
ಸತ್ಯಧ್ಯಾನಾಸಕ್ತಂ ಶ್ರೀಸತ್ಯಪ್ರಮೋದಂ ||
ವಂದೇ ಗುರುಂ ಪರಂಪರಾಂ |
ಭೂಯೋ ಭೂಯೋ ನಮಾಮ್ಯಹಂ ||
ಪ್ರಾತ: ಕಾಲ ಸ್ಮರಣೇನ ಶ್ರೀಕೃಷ್ಣವಿಟ್ಠಲ ಕೃಪಾಪ್ರಾಪ್ತಿರ್ಭವತಿ ||
16. ವಂದೇಂ ಗುರು ಪರಂಪರ
ಪೂರ್ಣಪ್ರಜ್ಞಂ ಶ್ರೀಪದ್ಮನಾಭಂ |
ಜಯತೀರ್ಥ ಬ್ರಹ್ಮಣ್ಯ ತೀರ್ಥ ಶ್ರೀಪಾದರಾಜಾನ್ ||
ಶ್ರೀವ್ಯಾಸಂ ವಾದಿರಾಜಂ ವಿಜಯಿಂದ್ರಂ |
ರಘೂತ್ತಮ ಶ್ರೀ ಸತ್ಯವ್ರತೌ ||
ಶ್ರೀರಾಘವೇಂದ್ರ ಸತ್ಯಬೋಧೌಚ |
ಸತ್ಯಧ್ಯಾನ ಶ್ರೀಸತ್ಯಪ್ರಮೋದಕೌ ||
ಶ್ರೀಸತ್ಯಾತ್ಮಂ ಭೂಯೋ ಭೂಯೋ ನಮಾಮ್ಯಹಂ |
ಏವಂ ಸರ್ವ ಗುರುಸ್ಮರಣ ಮಾತ್ರೇಣ ಶ್ರೀಕೃಷ್ಣವಿಟ್ಠಲ ಕೃಪಾಪ್ರಾಪ್ತಿ: ||
ಶ್ರೀ ಗಣಪತಿ
17. ಹೇರಂಬಾ, ಗಜಾನನ ಗಣಾಧಿಪತಿಯೈ ನಮೋನಮ: |
ಸರ್ವದುಖ: ನಿವಾರಕ ಸ್ಮರಣೆ ಮಾತ್ರ ಸುಖಪ್ರದಾಯಕ | || 1 ||
ವಕ್ರತುಂಡ ಮೋದಕಪ್ರಿಯ ಮೂಷಿಕವಾಹನ |
ಏಕದಂತ ಅಕಳಂಕ ಚರಿತ ಮಹಾಕಾಯ ಫಾಲಚಂದ್ರ | || 2 ||
ಸತ್ಯವ್ರತ ಲಂಬೋದರ ಪಾಶಾಂಕುಶಧರಿತ |
ಮಾತೃಭಕ್ತ ಉತ್ತುಂಗಶ್ರೇಷ್ಠ ಗೌರಿತನಯ | || 3 ||
ಸಜ್ಜನ ಮುನಿ ಸುಪೂಜಿತ ಹೇ|ವಿಘ್ಯರಾಜ ಶರಣು |
ತ್ರಿಜಗವಂದಿತ ಶ್ರೀಕೃಷ್ಣವಿಟ್ಠಲ ಪರಮಭಕ್ತ | || 4 ||