ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಸುಪ್ರಭಾತ

1. ಸುಪ್ರಭಾತ ನಾಗಶಯನಗೆ ಸುಪ್ರಭಾತ ವೇಂಕಟರಮಣನಿಗೆ | || ||

ಮತ್ಸಮೂರುತಿ ಸತ್ಯವ ತೋರೋ |

ಸತ್ಯಮರ್ಮವನರಿತ ಕೂರ್ಮನೇ ಏಳೋ | || 1 ||

ವರಗಿರಿಗೊಲಿದ ಭೂವರಾಹನೇ |

ತರಳ ಪ್ರಲ್ಹಾದನ ಕಾಯ್ದ ನರಸಿಂಹನೇ ಏಳೋ | || 2 ||

ಬಲಿ ಉದ್ಧಾರಕ ವಾಮನನೇ |

ಕ್ಷತ್ರಿಯ ಕುಲಾಂತಕ ಪರಶುರಾಮನೇ ಏಳೋ | || 3 ||

ಅಹಲ್ಯೋದ್ಧಾರಕ ಸೀತಾರಾಮನೇ|

ಗೋವರ್ಧನ ಗಿರಿಧಾರಿಯೇ ಏಳೋ | || 4 ||

ಬೌದ್ಧಾವತಾರನೇ, ಕಲ್ಕ್ಯಾವತಾರನೇ

ಸೃಷ್ಟಿಕರ್ತ ಶ್ರೀಕೃಷ್ಣವಿಟ್ಠಲನೇ ಏಳೋ | || 5 ||

ಎಎಎ

2. ಏಳುಬೆಟ್ಟದೊಡೆಯನೇ ವೇಂಕಟರಮಣನೇ |

ವರಾಹನಿಂ ಪೊಷಿತನೇ ಕುಬೇರ ಕಟಾಕ್ಷನೇ ||

ಕಟಿಯಲಿ ಕರವಿಟ್ಟ ವರಪ್ರದನೇ |

ಭೂವೈಕುಂಠದಲಿ ನೆಲಸಿಹ ಪದ್ಮಾವತಿ ಪ್ರಿಯನೇ ||

ಅನವರತವೂ ಭಕ್ತರಿಂದೊಡಗೂಡಿದವನೇ |

ಹೃದಯದಿ ಇಂದಿರೆಯ ಧರಿಸಿದವನೇ ||

ಇಷ್ಟೆಲ್ಲಾ ಇದ್ದವಗೇನು ಸುಖವಿದೆ? ಸದಾನಿಂತವಗೇ | || 1 ||

ಎನ್ನ ಹತ್ತಿರ ಬಾರಯ್ಯಾ ಘಮಘಮಿಸುವ ಎಣ್ಣೆಪೂಸುವೆ |

ನವಿರಾಗಿ ಕಾಲನ್ನೊತ್ತಿ ಪಾದಪದ್ಮ ಪೂಜಿಸುವೆ ||

ಹಗುರಾಗಿ ಪಾದವನ್ನೆತ್ತಿ ಎನ್ನ ಹೃದಯದ ಮೇಲಿರಿಸುವೆ |

ಎನ್ನನ್ನೇ ನಿನಗರ್ಪಿಸಿಕೊಳ್ಳುವೆ ನಿತ್ಯದಿ ||

ನಿನ್ನ ಪಾದವನೆ ಸದಾ ನಂಬಿರುವೆ ದಯದಿ ಬಾರಾ |

ನನ್ನೊಡೆಯಾ ಶ್ರೀಕೃಷ್ಣವಿಟ್ಠ ಎನ್ನ ಬಿನ್ನಪ ಕಡೆಗೆಣಿಸದಿರಯ್ಯಾ | || 2 ||

ಊಊಊ

ಶ್ರೀ ವಿಜಯದಾಸರು

3. ಸತ್ಯವಂತನ ಸ್ಮರಿಸೆ ಸರ್ವೋತ್ತಮನ ದಯವಾಗುವುದು |

ದಾನವಂತ ಕನ ದಾಸನಾದರೆ ದಾರಿ ತೋರ್ಪ ತನ್ನ ಮಂದಿರಕೆ ||

ವಿಷಯ ಸುಖ ಬಿಟ್ಟು ವೇಂಕಟೇಶನ ಭಜಿಸಿ |

ಜನರ ಜರೆಯುದು ಬಿಟ್ಟು ಜಲಜಾಕ್ಷನ ಭಜಿಸಿ ||

ಯಮನ ಕೈಗೆ ಸಿಗದಿರಲು ಯಾದವನ ಭಜಿಸಿ |

ರಾಗದೊಳು ಸಿಲುಕದಿರಲು ರಾಮನಾಮ ಭಜಿಸಿ ||

ಯಶೋವಂತರಾಗಲು ಯಶೋದೆನಂದನ ಭಜಿಸಿ |

ರಮೆಯ ಒಲವು ಪಡೆಯಲು ಮನೋಹರನ ಭಜಿಸಿ ||

ಪಾಥೇಯವ ಕಟ್ಟಲು ಸದಾ ಪುಂಡರೀಕಾಕ್ಷನ ಭಜಿಸಿ |

ದಡ ಸೇರಲು ದಯಮಾಡುವ ದ್ವಾರಕಾನಾಥನ ಭಜಿಸಿ ||

ಭವಬಂಧನ ಬಿಡಿಸಲು ಪದುಮನಾಭನ ಭಜಿಸಿ |

ಜಿತೇಂದ್ರಿಯರಾಗಲು ಸ್ವತಂತ್ರನಾದ ಜಗದೀಶ್ವರನ ಭಜಿಸಿ ||

ಸಿಟ್ಟು ಮಾಡದೆ ಭಜಿಸೆ ಶ್ರೀಕೃಷ್ಣವಿಟ್ಠಲನ ಚರಣಪದ ದೊರೆವುದು ||

ಊಊಊ

ಶ್ರೀ ವಿಶ್ವೇಶತೀರ್ಥರು

4. ಇಂಥಾ ವಿಶ್ವಗುರುಗಳ ಎಲ್ಲೂ ಕಾಣೆ |

ಅರ್ಥಪೂರ್ಣ ವಚನ, ನಡೆ-ನುಡಿ ಒಂದೇ ||

ಮುಗ್ಧ ಮಗುವಿನ ನಗು, ಸಕಲಜೀವಿಗಳ |

ಹಿತ ಬಯಸುವ, ನಿಷ್ಕಲಂಕ ಚರಿತ ||

ಚಿಂತನ-ಮಂಥನದಿ ಸದಾ ನಿರುತ |

ಶಾಸ್ತ್ರ ಪ್ರವೀಣ, ಚುರುಕು ಬುದ್ಧಿ |

ಶ್ರೀಕೃಷ್ಣವಿಟ್ಠಲನ ಕಣ್ಮಣಿ ಕರುಣಾಪಾಂಗ |

ವೈರಾಗ್ಯ ಶಿಖಾಮಣಿ ಶ್ರೀವಿಶ್ವೇಶತೀರ್ಥರು-ಜಯ, ಜಯ ||

ಊಊಊ

ಶ್ರೀ ಸತ್ಯಾತ್ಮತೀರ್ಥರು

5. ವಂದಿಪೆ ಗುರು ಶ್ರೀಸತ್ಯಾತ್ಮತೀರ್ಥರಿಗೆ |

ಬಂದಿಹೆ ಗುರುಗಳ ಪಾದವ ನಂಬಿ | || ||

ಸಕಲ ಶಾಸ್ತ್ರ ಪಾರಂಗತರಾದ |

ಸಕಲ ಶಿಷ್ಯರ ಪ್ರೀತಿ ಗುರುವಾದ ||

ಸಕಲ ಜನರ ಮಾರ್ಗದರ್ಶಿಯಾದ || ಗುರುವಿಗೆ | || 1 ||

ಹಸನ್ಮುಖರಾದ ಪರಮವೈರಾಗಿ |

ಕ್ಲೇಶ ಕಳೆದು,ಸರ್ವರ ಹಿತ ಬಯಸುವ ||

ಶ್ರೀಸತ್ಯಪ್ರಮೋದರ ವಾತ್ಸಲ್ಯದ ಕಂದ || ಗುರುವಿಗೆ ||

ಭೇದವನಳಿಸಿ ಸಹೃದಯತೆ ಮೆರೆವ |

ಮೋದತೀರ್ಥರ ಮತವ ಪಸರಿಸುವ ||

ಒಂದೇ ಮನದಿ ಶ್ರೀಕೃಷ್ಣವಿಟ್ಠಲನ ಭಜಿಸುವ || ಗುರುವಿಗೆ ||

ಊಊಊ

ಶ್ರೀ ರಾಘವೇಂದ್ರತೀರ್ಥರು

6. ವೃಂದಾವನದಿ ಚೆಂದದಿ ಕುಳಿತ ಕರುಣಿ ಯತಿವರ್ಯರ್ಯಾರಮ್ಮಾ? |

ಮೋದ ತರುವ ಆಹ್ಲಾದ ಬೀರುವ ಯತಿಯಾರಮ್ಮಾ? ||

ಸುಂದರ ನದಿ ತುಂಗಾತಟಿ ಮಂತ್ರಾಲಯದಲ್ಲಿರುವರ್ಯಾರಮ್ಮಾ? |

ಬಂದ ಜನರ ಸೇವಾ ಕೈಂಕರ್ಯ ಸ್ವಿಕರಿಸುವ ಯತಿಯಾರಮ್ಮಾ? ||

ಉದಾರ ಮನದಿ ಉದ್ಧರಿಸಿ ಸಂತೈಸುವ ಯತಿಯಾರಮ್ಮಾ? |

ಭೇದವನೆಣಿಸದ ದೀನದು:ಖಿತರ ಸಲುಹುವರ್ಯಾರಮ್ಮಾ? ||

ಒಂದೇ ಕೂಗಿಗೆ ಬಂದು ಕಷ್ಟ ತಾರಿಸಿ ಓಲೈಸುವರ್ಯಾರಮ್ಮಾ? |

ಭದ್ರವಾಗಿ ನಂಬಿದ ಜನರೊದ್ಧಾರಕ ಯತಿವಂರ್iರ್ಯಾರಮ್ಮಾ? ||

ಸುದಯದಿ ಪುಣ್ಯಹಂಚುವ ಸುಜೀವಿ ಯತಿಯಾರಮ್ಮಾ? |

ಮಧ್ವಮತ ಉದ್ಧರಿಸಲು ಬಂದ ದೈತ್ಯ ಅವತಾರಿಯಾರಮ್ಮಾ? ||

ಸುಧಾಕ್ಕೆ ಪರಿಮಳ ಬೆರೆಸಿದ ಸುಯತಿವಯ್ರ್ಯರ್ಯಾರಮ್ಮಾ? |

ರುದ್ರ ವೀಣೆ ಝೇಂಕಾರದಿ ತನ್ಮಯರಾದವರ್ಯಾರಮ್ಮಾ? ||

ಪದ್ಯವ "ಸಾಕ್ಷಿಹಯಾಸ್ಯ" ವೆಂದು ಪೂರ್ಣಗೊಳಿಸಿದವರ್ಯಾರಮ್ಮಾ? |

ಹೃದಯದಿ ಸದಾ ಶ್ರೀಕೃಷ್ಣವಿಟ್ಠಲನ ಪೂಜಿಪ ನಿಜ ಭಕ್ತ ||

ಮೃದುಮನಸ್ಸಿನ ಶ್ರೀರಾಘವೇಂದ್ರ ಗುರುರಾಯರಮ್ಮಾ |

ಇವರೇ ಶ್ರೀರಾಘವೇಂದ್ರ ರಾಯರಮ್ಮಾ ||

ಎಎಎ

7. ಮಂತ್ರಾಲಯ ಪ್ರಭುಗಳು ಇವರೇ ಗುರುರಾಯರು || ರಾಘವೇಂದ್ರರಾಯರು || ||||

ನಿರುತದಿ ಚರಣ ನೆನೆಯಿರಿ ಎಲ್ಲೆಡೆ ಬಂದು ಸಲಹುವರು || || ಅಪ ||

ಪರಮ ಕರುಣಾಳು ಸಾಂಶರೂಪದ ಪ್ರಹ್ಲಾದಾವತಾರಿ |

ವರವೀವರು ತಮ್ಮ ಇಷ್ಟಪುಣ್ಯದ ಬಲದಿ ||

ಪರಿಪಾಲಿಸುವರು ಭಕ್ತರ ಸದೀಚ್ಛೆಪೂರೈಸಿ |

ಸರ್ವರ ಅಭೀüಷ್ಟೆ ಪರಿಪೂರ್ಣಗೊಳಿಸುವರು || || 1 ||

ಕರೆದರೆ ಭಕ್ತಿಯಿಂದ ಕಾಮಧೇನುವೆಂಬುದುಸುಳ್ಳಲ್ಲ |

ವೈರಾಗ್ಯ ಶಿರೋಮಣಿ ಸಕಲ ಸಂಸಾರಿಗಳ ಕಷ್ಟಕಳೆವರು ||

ಆರುಮೆಲೊಂದುನೂರುವರ್ಷ ವೃಂದಾವನದಿ ಇದ್ದು ಹರಸುವರು |

ಪರಲೊಕದ ಸಾಧನೆ ಮಾರ್ಗತೋರುವರು ದಯದಿ || || 2 ||

ಕರುಣೆಯಿಂದ ವಿಸ್ತರಿಸಿ ಸುಧಾ ಪರಿಮಳ | (ಬೆರೆಸಿದರು)

ಸರ್ವಮಾನ್ಯ ಖಂಡಾರ್ಥ ದಶೋಪನಿಷದ್ಗೆ ಇತ್ತಿರುವರು ||

ಸೂತ್ರಾರ್ಥಗಳ ಸಾರವೆನಿಪ ಪ್ರಾತ: ಸಂಕಲ್ಪ ಗದ್ಯ ಸಹಿತ |

ಶಾಸ್ತ್ರಪಾರಂಗತ ಅನೇಕ ಗ್ರಂಥಗಳ ರಚಿಸಿರುವರು || || 3 ||

ಆರಾಧನೆಯ ಫಲ ಶೀಘ್ರದಿ ದಯಪಾಲಿಪ ನಿಸ್ಸೀಮ |

ಪ್ರಾರ್ಥಿಸಿ ಅನುಗ್ರಹಿಸು ಅಂತರ್ಯಾಮಿ ತೋರು ಎನಲು ||

ದರ್ಶನ ಮಾಡಿಸಿದ ಸ್ವಪ್ನದಿ ಮುಖ್ಯಪ್ರಾಣಮೂರುತಿ ಸಹಿತ |

ಶ್ರೀರಂಗಶಾಯಿ ಮತ್ತು ಶ್ರೀಕೃಷ್ಣವಿಟ್ಠಲ ಶಿಲಾಮೂಲ ರೂಪದಿ || || 4 ||

ಎಎಎ

8. ಶ್ರೀರಘು ನಂದನ ಅಂತರಂಗ ಭಕುತ |

ಶ್ರೀಗುರು ರಾಘವೇಂದ್ರರಾಯ || ||

ಶ್ರೀಮಧ್ವಮತ ಜಲಧಿ ಪೂರ್ಣೇಂದು |

ಪರಮಮಂಗಳ ಮೂರುತಿ ಶ್ರೀರಾಮ ಸೇವಕ || 1 ||

ಕರುಣಸಾಗರ ಪ್ರತೀತ ವ್ರತಸ್ಥ |

ಭಕ್ತರ ಅನುಗ್ರಹೀಪ ಘನ್ನ ಮಹಾಮಹಿಮ || 2 ||

ಸುಧಾಕ್ಕೆ ಪರಿಮಳ ರಚಿಸಿದ ವ್ಯಾಖ್ಯಾನಕಾರ |

ಶ್ರೀಕೃಷ್ಣವಿಟ್ಠಲನ ನಿರುತ ಸೇವಿಪನೇ || 3 ||

ಎಎಎ

9. ರಾಜೀವಲೋಚನಿಂ ಅನುಗ್ರಹೀತ ರಾಘವೇಂದ್ರನೇ |

ಘನ್ನಮಹಿಮ ಗುರುವೇ ದಯಾಲುವೇ ||

ವೇಂಕಟೇಶನ ನಿಜ ಭಕುತನೆ |

ದ್ರವಿಸೆನ್ನ ಮೇಲೆ ಕರುಣಿಯ ||

ಗುಣಪೂರ್ಣನ ಅಂತರಂಗವರಿತವನೇ |

ತವಅಂತರ್ಯಾಮಿ ಶ್ರೀಕೃಷ್ಣವಿಟ್ಠಲಗೆನ್ನ ಪೋಷಿಸಲು ಪೇಳಯ್ಯಾ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು