ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ವೈರಾಗ್ಯ ಮತ್ತು ನೀತಿ ಪದಗಳು

341. ಬರಬೇಕು ಬರಬೇಕು ಜ್ಞಾನ, ಭಕ್ತಿ, ವೈರಾಗ್ಯ |

ಬರ-ಬೇಕು,ಬರ-ಬೇಕು ವಿಷಯ ಭೋಗಂಗಳಲಿ ||

ಸಂಭ್ರಮ, ಸವಿಯೋಗವು ಶ್ರೀಕೃಷ್ಣವಿಟ್ಠಲಪ್ರಿಯಗೆ |

ಸಂ-ಭ್ರಮ, -ವಿಯೊಗವು ಶ್ರೀಕೃಷ್ಣವಿಟ್ಠಲನ ಅಪ್ರಿಯಗೆ ||

ಎಎಎ

342. ಜ್ಞಾನ ಪಡೆಯಲು ಅನುಗ್ರಹ ಬೇಕು, || ಪರಮಾತ್ಮನ ||

ಅನುಗ್ರಹ ಪಡೆಯಲು ಜ್ಞಾನ ಬೇಕು || || ||

ಕೇಳಿ ತಿಳಿದಿದ್ದು ಆಳಕ್ಕಿಳಿಸಿ, ಉಳಿಸಿ, ಬೆಳಸಿ |

ಕಳೆದುಕೊಳ್ಳದೇ ಕೇಳಿದವರಿಗೆ ತಿಳಿಸಿ ಹೇಳಿ ||

ಪೊಳ್ಳುತನದ ಜೊಳ್ಳು, ಕಳೆದು ಗಟ್ಟಿ ಉಳಿಸಿ |

ಸುಳ್ಳುತನ ಬಿಟ್ಟು ಸತ್ಯವ ತಿಳಿದು ಅನುಸರಿಸಿ || || 1 ||

ತಿಳುವಳಿಕೆ ಹೆಚ್ಚಾಗಿ ತನ್ನ ಒಳ-ಹೊರ ಜ್ಞಾನದಿ |

ಬಾಳಿನ ಬೆಳಕಿನಡಿಯಲ್ಲಿ ಇಹ-ಪರದ ಅರ್ಥತಿಳಿದು ||

ಹಳಸದಂತಹ ಪರಮಾರ್ಥ ಜ್ಞಾನಗಳಿಸಿ ಉಳಿಸಿಕೊಳ್ಳಿ |

ತಳೆದು ಒಳ್ಳೇ ನಿರ್ಧಾರ ಬಾಳುವ ಕ್ರಮವರಿತು || || 2 ||

ಕಳೆಯದೇ ವ್ಯರ್ಥ ವೇಳೆ ಸದುಪಯೋಗ ಮಾಡಿಕೊಳ್ಳಿ |

ಆಲಸ್ಯತನ ಬಿಟ್ಟು ಅದಷ್ಟೂ ತಿಳಿವು ಪಡೆಯಿರಿ ||

ಅಲ್ಪಾಶೆ ಸುಳಿಗೆ ಸಿಲುಕಿ ಅಮೂಲ್ಯವಾದದ್ದು ಕಳೆದು ಕೊರಗಬೇಡಿ

ಬೀಳುವ ದೇಹದ ಅಭಿಮಾನ ತೊರೆದು ಸ್ಥಿರ ಭಕುತಿ ಮಾಡಿ || || 3 ||

ಕಳ್ಳನಂತೆ ಪರರ ಸ್ವತ್ತು ಅನುಭವಿಸಿ ಹೋಗುವುದು ಒಳಿತಲ್ಲ |

ಬೆಲೆಕಟ್ಟಲಾಗದ ಜ್ಞಾನ ಈಗಲ್ಲದೆ ಮತ್ತ್ಯಾವಾಗಲೋ ಗಳಿಸಲಾಗದು ||

ಗಳಿಸಲು ಪುಣ್ಯ ಪರಮಾತ್ಮ ಕೊಟ್ಟ ಸದಾವಕಾಶ ಬಿಡದಿರಿ |

ಒಳ್ಳೆಯದನ್ನೇ ಸದಾ ಬಯಸಿ ಶ್ರೀಕೃಷ್ಣವಿಟ್ಠಲ ಅನುಗ್ರಹಿಪ || || 4 ||

ಎಎಎ

ಮುದ್ದು ಮಗುವಿಗೆ ಆಶೀರ್ವಚನ

343. ಅಕ್ಕರೆಯ ಚೆಲುವಿನ ಸಕ್ಕರೆ ಗೊಂಬೆ ನೀ |

ನಕ್ಕಾಗ ಸಿಗುವುದು ಸಕಲರಿಗೆ ಸ್ವರ್ಗ ಸುಖ ||

ಪ್ರಕಾಶಿಸು ಅನುದಿನ ಸುನಡತೆಯಲಿ |

ಸುಕೀರ್ತಿ ಸುಗಂಧ ಹರಡಲಿ ಎಲ್ಲಡೆ ||

ರಕ್ಷಿಸಿದರೆ ಧರ್ಮವ ರಕ್ಷಿಪುದು ನಿನ್ನನು |

ಶ್ರೀಕೃಷ್ಣವಿಟ್ಠಲನ ಧ್ಯಾನ ನಿರುತನಾಗಿರು ಸದಾ ||

ಎಎಎ

344. ಕಡ ತಂದ ಕೊಡಪಾನದಂತೆ ಎರಡು ದಿನದ ಸಂಸಾರ |

ಗಡಿಬಿಡಿಲಿ ಒಡೆದರೆ ಹೋಯ್ತು ಮತ್ತೆ ಮರಳಿಬಾರದು || || ||

ಇದ್ದಾಗ ಜೋಪಾನದಿ ಉಪಯೋಗಿಸಿ ಸಾರ್ಥಕವಾಗಿಸಿ |

ಅರ್ಧ ತುಂಬಿದಾಗ ಹೊಯ್ದಾಟದಿ ಉರುಳುವ ಭಯ ||

ಶುದ್ಧ ಜಲದಿ ಪೂರ್ಣ ತುಂಬಿದರೆ ಶುಭಕಲಶ ಭಾವ |

ಮಾಡಿದಾಗ ಸ್ವಚ್ಛ, ಮಲ ಕಳೆದು ಥಳಥಳ ಹೊಳೆವುದು || || 1 ||

ಜಡ ಕೊಡಪಾನದಿ ಏನು ತುಂಬಿದರೂ ಎರಡು ಮಾತಿಲ್ಲ |

ಕಡೆಯ ತನಕ ಬಿಡದೆ ತುಂಬುತ್ತಲೇ ಇರಬೇಕು ||

ದೊಡ್ಡದಿರಲಿ ಚಿಕ್ಕದಿರಲಿ ಅಳತೆಯಷ್ಟೇ ಒಳಗೆ ಹಿಡಿವುದು |

ಅದು ತುಂಬಿದ ಬಳಿಕ ಎಷ್ಟು ತುಂಬಿದರೂ ಹೊರಗೆ ಹರಿವುದು || || 2 ||

ಶಬ್ದ ಬಾರದು ತುಂಬಿದ ನಂತರ ಗಾಂಭಿರ್ಯ ಭಾವ |

ಸುಂದರ ಸಂಗೀತ ಹೊರಡಿಸಬಹುದು ಹಿಡಿತ-ಮಿಡಿತದಿಂದ ||

ಕೊಡ ಖಾಲಿ ಇದ್ದಾಗ ಹಾಗೇ ಉರುಳುವುದೇ ಶೂನ್ಯತೆ ಲಕ್ಷಣ |

ಆದರೂ ಆಕಾಶ-ವಾಯು ಅದರಲ್ಲಿದ್ದೇ ಇರುವುದು || || 3 ||

ಇದ್ದಾಗ ಇದರ ಉಪಯೋಗ ಅತಿಶಯ ಬೆಲೆ ಕಟ್ಟಲಾಗದು |

ಒಡೆದರೆ ಹೋಯ್ತು ಎತ್ತಿ ಹೊರಗೆ ಎಸೆವರು ಕಾಸಿನ ಬೆಲೆಯಿಲ್ಲ ||

ಕದಿಯಲು ಕಾಯುವರು ಕಳ್ಳರೈವರು ಹೊಂಚಿಕೆಯಲಿ |

ಧೃಡಭಕುತಿ, ಏಕಚಿತ್ತದಿ ಜೋಪಾನಿಸಲು

ಶ್ರೀಕೃಷ್ಣವಿಟ್ಠಲನ ಧ್ಯಾನದಿ ಮಾತ್ರ ಸಾಧ್ಯ || || 4 ||

ಎಎಎ

345. ಕೊಡು ಎನಗೆ ಸಜ್ಜನರಲಿ ಸಂಗ |

ಕೊಡಬೇಡ ಎನಗೆ ದುರ್ಗುಣಗಳಲಿ ರತಿ ||

ಕೊಡು ಎನಗೆ ದೇವರಲಿ ಭಕ್ತಿ |

ಕೊಡಬೇಡ ಅನ್ಯ ವಿಷಯ ಆಸಕ್ತಿ ||

ಕೊಡು ಎನಗೆ ಸ್ವಂತದ ತಿಳುವಳಿಕೆ |

ಕೊಡಬೇಡ ಬೇರೆಯವರ ಕುಂದೆಣಿಸುವಿಕೆ ||

ಕೊಡು ಎನಗೆ ಯೋಗ್ಯ ಶಾಸ್ತ್ರಜ್ಞಾನ |

ಕೊಡಬೇಡ ನಾಸ್ತಿಕರ ದುಸ್ಸಂಗ ||

ಕೊಡು ಎನಗೆ ದುರ್ವಿಷಯದಿ ಅನಾಸ್ಥೆ |

ಕೊಡಬೇq ಆಲಸ್ಯ ಪ್ರಮಾದ ||

ಕೊಡು ಎನಗೆ ನಿನ್ನ ಅವಿರತ ಧ್ಯಾನ |

ಕೊಡಬೇಡ ನಿನ್ನ ವಿಸ್ಮರಣೆ ||

ಕೊಡು ಎನಗೆ ಗುರುಭಕ್ತಿ, ವಾಕ್ಯ ನಿಷ್ಠಾ |

ಕೊಡಬೇಡ ಭಗತ್ಕಥಾ ವಿರಕ್ತಿ ||

ಕೊಡು ಎನಗೆ ಪಂಚಬೇಧ ಜ್ಞಾನ, ದಾಸ್ಯತ್ವ |

ಕೊಡಬೇಡ ಅಹಂ-ಮಮತೆಗಳು ||

ಕೊಡು ಎನಗೆ ನಿರ್ವಿಘ್ನ ಸಾಧನಾನಂದ |

ಕೊಡಬೇಡ ಅನ್ಯ ಬೇಡುವ ಬುದ್ಧಿ ||

ಕೊಡು ಎನಗೆ ಸುಗುಣ, ಸಂತೃಪ್ತಿ |

ಕೊಡಬೇಡ ದುರಾಸೆ ಕ್ರೋಧವ ||

ಕೊಡು ಎನಗೆ ಸಕಲ ವಿಘ್ನಗಳ ಪರಿಹಾರ |

ಕೊಡ ಬೇಡ ಅಪರೋಕ್ಷಕ್ಕೆ ಪ್ರತಿಬಂಧ ||

ಕೊಡು ಎನಗೆ ಸದಾ ಶ್ರೀಕೃಷ್ಣವಿಟ್ಠಲನ ಪದಾಶ್ರಯ |

ಕೊಡಬೇಡ ಸಂಸಾರ ಚಕ್ರಬವಣೆ ||

ಎಎಎ

346. ರೋಗ ಬಂದಿದೆ| ಎನಗೆ| ರೋಗ ಬಂದಿದೆ

ಹೋಗಲಾರದಂತಹ ದೊಡ್ಡ ರೋಗ ಬಂದಿದೆ || || ||

ಸಾಧು ಸಂಗವೆಂದರೆ ತಲೆ ಸುತ್ತು ಬರುವುದು |

ವಿಧಾತನ ಭಜನೆ ಎಂದರೆ ಹೊಟ್ಟೆಲಿ ತಳಮಳಿಸುವುದು ||

ಸದ್ವಿಚಾರವೆಂದರೆ ಜೋರು ಜ್ವರ ಬರುವುದು |

ಸುಧರ್ಮಪಾಲನೆ ಎಂದರೆ ಸಕಲೇಂದ್ರಿಯದಿ ಚಳಿ ಆಗುವುದು || || 1 ||

ತೀರ್ಥಯಾತ್ರೆ ಎಂದರೆ ಕಾಲುಗಳಲಿ ಶಕ್ತಿ ಉಡುಗುವುದು |

ತೀರ್ಥಪ್ರಾಶನ ಎಂದರೆ ವಿಷದಂತೆ ಕಹಿ ತೋರುವುದು ||

ತೀರ್ಥರ ಉಪನ್ಯಾಸವೆಂದರೆ ಕಿವಿ ಗಡಚಿಕ್ಕುವುದು |

ತತ್ತ್ವೇಷಪತಿ ಶ್ರೀಕೃಷ್ಣವಿಟ್ಠಲ, ಭವವೈದ್ಯನೇ,

ಗುಣಪಡಿಸೆಂದು ಪ್ರಾರ್ಥಿಸುವೆ || || 2 ||

ಎಎಎ

347. ಉದಯಾರಭ್ಯ ಅಸ್ತಮಾನ ಪರ್ಯಂತ ನಡೆದ ವಿಹಿತ ಕಾರ್ಯವೆಲ್ಲಾ |

ಸದೈವ ಪೂಜಾವಿಧಿ ಎಂದು ಭಾವಿಸು, ಚಿಂತಿಸು, ಅರ್ಪಿಸು || || ||

ಮನವಿದ್ದ ಮಾನವ ಜನುಮದಿ ಮಾತ್ರ ಸಾಧನೆ ಸಾಧ್ಯ |

ಕ್ಷಣ ಕಾಲವೂ ವ್ಯರ್ಥವಾಗಿಸದೆ ಕಾಲನಾಮಕನ ನಿರುತ ನೆನೆ ||

ಅನುದಿನ ಏಕಾಂತದಿ ಕುಳಿತು ಶ್ರೀಕಾಂತಗೆ ವಿನಮ್ರದಿ |

ಮನದಿ ಲೋಕಾಂತರ ಸುಖಕ್ಕಾಗಿ ಬಿಡದೆ ಪ್ರಾರ್ಥಿಸು || || 1 ||

ಬುದ್ಧಿ, ಮನೋ ಇಂದ್ರಿಯಗಳೇ ಸಾಧನ ಸಲಕರಣೆಗಳು |

ಇದರಿಂದ ಧ್ಯಾನಿಸಿ, ತತ್ವ ನಿಶ್ಚಯದಿ ಮಾಡಿದ ತತ್ತತ್ಕಾರ್ಯವೆಲ್ಲಾ ||

ತದಂತಸ್ಥ ಪರಮಾತ್ಮ ತಾನೇ ನಿಂತು ಮಾಡಿಸಿದ್ದಾನೆಂದು ಸರ್ಮಪಿಸು |

ಇದೇ ಉಪಾಸನೆ ಎಂಬರು ಜನ್ಮ ಸಾರ್ಥಕದ ಸರಳಹಾದಿ || || 2 ||

ಸ್ಥೂಲೋಪಾಸನೆಯಿಂದ ಅಂತಃಕರಣ ಶುದ್ಧಿಲಿ ಸಂಯಮಿಯಾಗಿ |

ಒಳಗಿದ್ದ ಆತ್ಮನ ಸೂಕ್ಷ್ಮೋಪಾಸನೆಯಿಂದ ಬಿಂಬದರ್ಶನ ಲಭಿಸುವುದೆಂದು||

ತಿಳಿದಾಗ ತನ್ನನ್ನು ತಾನೇ, ಉದ್ಧಾರ ಮಾಳ್ಪ ಹೃದ್ಗುಹಾವಾಸಿ |

ಅಳಿದು ಅನಾದಿ ಕುಕರ್ಮ, ಸಚ್ಚಿದಾನಂದಾತ್ಮ ಶ್ರೀಕೃಷ್ಣವಿಟ್ಠಲ ಪಾಲಿಪ ||3||

ಎಎಎ

348. ಎಂತು ಕೊಂಡಾಡಲಿ, ದೊರೆಯೇ, ನಿನ್ನ ಕರುಣೆಯ |

ಭ್ರಾಂತಿ ಹೋಯಿತು ನಿನ್ನ ವ್ಯಾಪಾರ ವೀಕ್ಷಿಸಿ || || ||

ಸ್ವತಂತ್ರ, ದೋಷದೂರ, ಜ್ಞೇಯ, ಗುಣಪೂರ್ಣ ನೀನು |

ಅತ್ಯಣು, ಪರಾಧೀನ, ಅಲ್ಪಜ್ಞ, ಬದ್ಧ ಉಪಜೀವಿನಾನು ||

ಕೊಟ್ಟ ಮೂರು ಅಮೂಲ್ಯ ಸಾಮಾನುಗಳ ಅರಿಯದಾದೆ || (ಬುದ್ಧಿ, ಮನ, ಇಂದ್ರಿಯ) || 1 ||

ತತ್ವ ನಿಶ್ಚಯಿಸಿ, ಧ್ಯಾನಿಸಿ, ಅದರಂತೆ ಕರ್ಮ ಮಾಡುವುದು |

ಬಿಟ್ಟು ಸ್ವಧರ್ಮದ ಉಪದೇಶಾರ್ಥವ ಮರೆತೆ ||

ನಿತ್ಯಧ್ಯಾನ, ಪರಿಶುದ್ಧ ಮನದಿ ಬಿಂಬೋಪಾಸಕರ ಸೇವೆಯ || || 2 ||

ನಿಂತಿದ್ದು, ಕುಳಿತಿದ್ದು, ಮಲಗಿದ್ದು, ಓಡಾಡಿದ್ದರಲ್ಲೇ |

ಚಿಂತಿಸಿಅಚಿಂತ್ಯಾದ್ಭುತನ ಮಹಿಮೆ, ಅರ್ಪಿಸು ||

ಸತತ ಒಳಹೊರಗಿನ ವ್ಯಾಪಾರ ನಡೆಸುವವಗೆ || || 3 ||

ಜೊತೆಗಾರನ ಗುಣ, ಲೀಲೆಗಳ ಚಿಂತನದಿ ಮುಳುಗಿರೆ |

ಅತ್ಯಂತ ಅಚ್ಚುಮೆಚ್ಚಿನ ಭಕ್ತನೆಂದು ಗ್ರಹಿಸಿ ||

ಚಿತ್ತ ಸ್ವಚ್ಛಗೈಸಿ ಅನುಗ್ರಹಿಪ ಸತ್ಯಮೂರ್ತಿ ಶ್ರೀಕೃಷ್ಣವಿಟ್ಠಲ | || 4 ||

ಎಎಎ

349. ಸುಜನರೆಂದರ್ಯಾರು? ಉದ್ಧಾರ ಮಾರ್ಗ ತೋರಿಪರ್ಯಾರು?

ಸೌಜನ್ಯದಿ ಗೋಜು ಬೀಳದೆ ಗುರುತಿಸಿ, ಗುರುಗಳುಪದೇಶ ಪಡೆಯಿರಿ ||

ಸುಜ್ಞಾನಿ, ಸದಾಚಾರಿ ನಮಗಿಂತ ಉತ್ತಮರೇ ಗುರುಗಳು |

ಪ್ರಾಜ್ಞರು, ಸದಾ ಪ್ರಸನ್ನ ಚಿತ್ತರು, ಕ್ರೋಧರಹಿತರೇ ಗುರುಗಳು ||

ತ್ಯಜಿಸಿ ಬಂಧು ಪ್ರೀತಿಭಾವ, ಸಹಿಸಿ ಬಿರುನುಡಿಗಳ ಹಸನ್ಮುಖರಾಗಿರುವರು |

ವರ್ಜಿಸಿ ದ್ವೇಷಾಸೂಯೆಗಳ, ಭಜಿಸುವರು ಸದಾ ಭಕ್ತಿಯಲಿ ಪರಮಾತ್ಮನ ||

ಕುಜನರ ಸೇರದೇ ಶ್ರುತಿ ನಿಂದೆಯ ಮಾಡದೇ,

ಸರ್ವಪ್ರಾಣಿಹಿತ ಬಯಸುವರು |

ಮುಂಜಾನೆಯಿಂದ ಸಂಜೆಯವರೆಗೆ ಇವರ

ಸೇವೆಯೇ ಆತ್ಮೋನ್ನತಿ ಮಾರ್ಗ ತಿಳಿ ||

ಹೆಜ್ಜೆ ನೀರಿನಲ್ಲಿ ಮೂಡದಂತಿರುವ ಸಾಧಕರಿವರು

ಬಿಡದೆ ಶ್ರೀಕೃಷ್ಣವಿಟ್ಠಲನ ದಯೆ ಪಡೆದವರು ||

ಎಎಎ

350. ದೇಹಾಭಿಮಾನ ಬಿಡುವುದ್ಹ್ಯಾಂಗೆ ಎನ್ನದಿರು ಎಲೈ, ಜೀವವೇ |

ದೇಹ ಬೇರೆ-ಜೀವ ಬೇರೆ ಸಿಹಿಯಾದ ಹನ್ನೆರಡು ಮಾರ್ಗಗಳಿವೆ ತಿಳಿದುಕೋ ||

ಕಡಿ -ಅರಿಷಡ್ವರ್ಗ, ಹೊಡಿ- ಲೋಭ, ಅಸೂಯೆ |

ಹಿಡಿ-ದಾಸ್ಯತ್ವ, ನುಡಿ-ಹರಿನಾಮ, ಪಡಿ-ಗುರುಕರುಣ ||

ನಡಿ-ವೈಕುಂಠಕೆ, ಓಡು-ಇದೇ ಪಥವü ಬಿಡದಿರು |

ತೊಳಕೋ-ಭವದ ಪಂಕ, ಕಳಕೋ ಸಂಚಿತಾಗಾಮಿ ||

ಅಳಕೋ - ಪೋದಾಯುಷ್ಯ, ತಿಳಕೋ-ಪಂಚಬೇಧ, ತಾರತಮ್ಯ |

ಶಳಕೋ-ದುರ್ವಿಷಯದಿ ಪೋದ ಇಂದ್ರಿಯಗಳ, ಬೆಳಕೋ-ಸುಕೃತ ಧ್ಯಾನ ||

ಪೆಳೆದರಿಕೊ ದ್ವಾದಶ ವಾಕ್ಯಗಳ ನಿರುತ ಅನುಷ್ಠಾನದಿ |

ದ್ವಾದಶಾಕ್ಷರ ಪ್ರತಿಪಾದ್ಯ ಮಾಯಾಪತಿ ಶ್ರೀವಾಸುದೇವಾಭಿನ್ನ ||

ಸುದೈವ ನಿತ್ಯ ಬಂಧು ಶ್ರೀಕೃಷ್ಣವಿಟ್ಠಲ ಅನುಗ್ರಹಿಪ ||

ಎಎಎ

351. ಮನಮೊದಲಾದ ಷೋಡಶಕಳೆಗಳ ಶರೀರಭಂಗವಾಗಲು |

ಅನುಗ್ರಹೋನ್ಮುಖರಾದವರ ಸಂಗವೇ ಉದ್ಧಾರ ಮಾರ್ಗ ||

ಪುಣ್ಯವೇ ಶಾಂತತೆ, ಪಾಪವೇ ಕ್ರೋಧ |

ಮಾನವ ಜನುಮದಿ ಕ್ರೋಧವಳಿದರೆ ಉಳಿಯುವುದೇ ಪುಣ್ಯ ||

ಜ್ಞಾನ ಮಾರ್ಗದಿ ನಡೆದವಗೆ ಜೊತೆವಾಹುದು ಭಕ್ತಿ, ವೈರಾಗ್ಯ |

ಧ್ಯಾನವಿಲ್ಲದೇ ಮುಕ್ತಿಯಿಲ್ಲ, ವ್ಯೆರಾಗ್ಯವಿಲ್ಲದೇ ಧ್ಯಾನ ಲಭಿಸದು ||

ಮನದ ಮಲ ತೊಳೆಯುವುದು ಧ್ಯಾನವೂಂದೇ |

ಅನುದಿನದ ಶ್ರವಣ, ಮನನಗಳೇ ಧ್ಯಾನದ ಮೆಟ್ಟಿಲು ||

ಕನಕ-ಮೃತ್ತಿಕ, ರತಿ ತೊರೆದು ಗುಣವಂತರೊಳಿಡುವ |

ಅನಾದಿ ಬಂಧು ನಮ್ಮ ಶ್ರೀಕೃಷ್ಣವಿಟ್ಠಲ ||

ಎಎಎ

ಮೃತ್ಯುವಿನಾಟ

352. ಮರಣ-ಜನನ ಸ್ವಇಚ್ಛೆಯಿಂದ ಇರದು, ಬಾರದು ಸಹ |

ಎರಡರ ಮಧ್ಯದ ಜೀವನದ ರೂವಾರಿ ಸ್ವತ: ಹೇಗೆ ಸಾಧ್ಯ? ||

ಪರಮಾತ್ಮನ ಪರ ಬಾಳಿದರೆ ಜೀವನ ಸಾರ್ಥಕವಾದಂತೆ ಕಾಣು |

ಬರಿದೇ ಬಾರಿಸದಿರು ಮತ್ತೆ ಬಾರದೀ ಮಾನವ ಜನುಮ ||

ಇರುವುದರತನಕ ಬಡೆದಾಟ, ನಾನು ನನ್ನದೆಂಬ ತುಡಿತ |

ಕರೆ ಬಂದೊಡೆ ಇರುವುದೆಲ್ಲವ ಬಿಟ್ಟು ನಿಲ್ಲುವುದು ಮಿಡಿತ ||

ಅರೆಕ್ಷಣ ಬಿಟ್ಟು ಬಾ ಎನ್ನ ಕರ್ತವ್ಯವಿದೆ ಎಂದರೆ ಕೇಳುವುದೇ? |

ಹಿರಿಯ ನಾನಲ್ಲ, ನನ್ನ ಸರತಿ ನಂತರ ಎಂದರೆ ಬಿಡುವುದೆ ||

ಸುರ-ನರ, ಚಕ್ರವರ್ತಿ-ಬಡವ-ಬಲ್ಲಿದನೆಂಬ ಭೇದವಿಲ್ಲದೇ |

ಸರ್ವರನೂ ಸಮನಾಗಿ ಒರೆಸಿ ಹಾಕುವುದೇ ಕಾಲದ ಧರ್ಮ ||

ಬರುವ ಮೊದಲೇ ಯಾವಾಗ, ಹೇಗೆ,ಎಲ್ಲಿ ಎಂದು ತಿಳಿದವರುಂಟೇ? |

ಬರದಿರುವ ಹಾಗೆ ಇನ್ನೂವರೆಗೆ ಇದರ ಹಿಡಿತ ಸಾಧಿಸಿದವರುಂಟೆ? ||

ಕರುಣೆ ತೋರದೆ, ಭೇದ-ಭಾವ ಮಾಡದೇ, ಯಾರಿಗೂ ಕಾಯದೇ |

ಹಾರಿ ಹೋಗುವುದು ಕ್ಷಣದಿ, ಕಣ್ಣಿಗೂ ಕಾಣದಂತೆ ಸೂಕ್ಷ್ಮರೂಪದಿ ||

ಯಾರು ಲೋಕ ನೋಡಿದವರು ಬಂದಿಲ್ಲ, ನಿಖರವಾಗಿ ಹೇಳಿಲ್ಲ |

ಸರ್ವ ಭೋಕ್ತಾ, ಭೋಜ್ಯ, ಭೋಜಕ, ಶ್ರೀಕೃಷ್ಣವಿಟ್ಠಲಗೆ ಸರಸದಾಟ ||

ಎಎಎ

353. ಅತೀ ಶಾಂತಿ ಜಗತ್ತಿನಲ್ಲೆಲ್ಲಿ ಅಡಗಿದೆ? |

ಯತ್ನದಿ ದೊರಕಲು ಸಾದ್ಯವಿದೆಯೇ? || || ||

ಸತಿಸುತರ ಸಂತೋಷದಲ್ಲಡಗಿದೆಯೇ? |

ವಸ್ತ್ರಕನಕಾಭರಣದಲ್ಲಡಗಿದೆಯೇ? ||

ಆಸ್ತಿ, ಹಣ, ಪ್ರಸಿದ್ಧಿ ಪಡೆವಲ್ಲಿ ಅಡಗಿದೆಯೇ? |

ಅರ್ಥ, ಕಾಮ, ಲೋಭದಲ್ಲಡಗಿದೆಯೇ? || || 1 ||

ಎತ್ತಿ ಕೊಡುವ-ಕೊಳ್ಳುವ ವ್ಯವಹಾರದಲ್ಲಡಗಿದೆಯೇ? |

ನಿತ್ಯಕರ್ಮಾಚರಣೆÂಯಲ್ಲಡಗಿದೆಯೆ? ||

ಮಾತಿಲ್ಲದೇ ಮಾಡುವ ತಪದಲ್ಲಡಗಿದೆಯೇ? |

ಮಿತ ಆಹಾರ-ವಿಹಾರದಲ್ಲಡಗಿದೆಯೇ? || || 2 ||

ಶಕ್ತ್ಯಾ ಮಾಡುವ ಧ್ಯಾನದಲ್ಲಡಗಿದೆಯೇ? |

ಹಿತ ಸುಖತರುವ ನಿದ್ರೆಯಲ್ಲಡಗಿದೆಯೇ? ||

ಪುಸ್ತಕ ಜ್ಞಾನ ಮಸ್ತಕದಲ್ಲಿಡುವಲ್ಲಡಗಿದೆಯೆ? |

ನೀತನಾಗಿ ಸರ್ವರಿಗೆ ತಲೆಬಾಗಿಸುವುದರಲ್ಲಡಗಿದೆಯೇ? || || 3 ||

ತೀರ್ಥಯಾತ್ರೆ ಪವಿತ್ರ ನದಿ ಸ್ನಾನದಲ್ಲಡಗಿದೆಯೆ? |

ತೀರ್ಥ-ಪ್ರಸಾದ ಭುಂಜಿಸುವುದರಲ್ಲಡಗಿದೆಯೇ? ||

ಪ್ರತಿಮೆಯ ಪರಮಾತ್ಮನ ದರುಶನದಲ್ಲಡಗಿದೆಯೇ? |

ಉತ್ತಮರ ಸಂಗದಿ ಕೀರ್ತಿಸುವುದರಲ್ಲಡಗಿದೆಯೇ? || || 4 ||

ಆತ್ಮ ಸಖನೇ ಕಾರ್ಯಕಾರಣ ಕರ್ತನೆಂದು ತಿಳಿದು |

ಪ್ರತಿಕ್ಷಣದಿ ಮರೆಯದವನ ಉಪಕಾರ ಸ್ಮರಿಸುತ ||

ಅಂತರ್ಯಾಮಿ ಅರಿಹಂತಕ ಶ್ರೀಕೃಷ್ಣವಿಟ್ಠಲನ |

ಹೃತ್ಕಮಲದಿ ಕಂಡು ಪಾಡಿ ಕುಣಿವುದರಲ್ಲೇ ಅಡಗಿದೆ || || 5 ||

ಎಎಎ

354. ದೊಡ್ಡ ವಿಶ್ವದಲ್ಲಿಯ ಸಣ್ಣ ಇರುವೆ ಇರುವೆ |

ಎಡಬಿಡದೆ ಓಡಾಡುವೆ ಗೊತ್ತು ಗುರಿಇಲ್ಲದೆ || || ||

ಓಡಾಡಿದರೂ ಸ್ವತಂತ್ರನಂತೆ ಬೇಕೆಂದೆಡೆಹೊಗಲಾರೆ |

ಅಡಿಯಲಿ ಸಿಕ್ಕರೆ ಬದುಕೆ ಮುಗಿವುದು || || . ||

ತಿಳಿಯದೇ ಓಡಾಡುತ್ತ ಆಹಾರ ಸಿಕ್ಕರೆ ತಿನ್ನುವೆ |

ಗಾಳಿ ಎರಗಿಸಿದೆಡೆ ಹಾರುತ್ತ ಬೇರೆಡೆ ಹೊಗುವೆ ||

ಜಲ ಹರಿದರೆ ಬೇಡಾದರೂ ಜೊತೆ ಹರಿಯುವೆ |

ಬಲ ಒಗ್ಗಟ್ಟಿರುವುದು ಗುಂಪಿನಲ್ಲಿದ್ದಾಗ ಮಾತ್ರವೇ || || 1 ||

ಕ್ಷಣಕಾಲ ಜೀವಿಸಿದರೂ ಕೆಚ್ಚೆದೆಯಲಿ ಮುನ್ನುಗ್ಗುವೆ |

ಒಣಪ್ರತಿಷ್ಠೆ, ಜಂಬಗಳಿಲ್ಲದೇ ಜೀವಿಸುವೇ ||

ಕಣಕಣಕೂಡಿಸಿ ಇರಲು ದೊಡ್ಡಹುತ್ತ ಕಟ್ಟಿದರೂ |

ಜಾಣ ಹಾವು ಸದಾ ವಾಸಿಪುದು ಅಲ್ಲಿ ಬಲಾತ್ಕಾರದಿ || || 2 ||

ಹೆಚ್ಚೇನೂ ಬಯಸದೇ ಪರೋಪಕಾರಿಯಾಗಿ |

ಕೆಚ್ಚೆದೆಯಲಿ ಶಿಸ್ತನ್ನು ಪಾಲಿಸುತ ನಾಲ್ಕುದಿನದಿ ||

ಕೊಚ್ಚಿ ಹೋದರೂ ಕಾಲನ ನಿಯಮನದಿ |

ತುಚ್ಛನಾದರೂ ಉಚ್ಚ ಶ್ರೀಕೃಷ್ಣವಿಟ್ಠಲನ ಭಜಿಸಲಿಚ್ಛಿಸುವೆ || || 3 ||

ಎಎಎ

355. ಹೇಳಲ್ಹೇಗೆ, ನಿನಗೆ ಹೇಗೆ ತಿಳಿಯಲ್ಹೇಳಲಿ |

ನಾನೇನು ಹೇಳಲಿ? ತಿಳಿಯದೇ ನಿನಗೆ? || || ||

ಸುಳಿಯೊಳಗೆ ಸಿಲುಕಿ ಹೊರ ಬರಲು ದಾರಿ ಕಾಣದಾಗಿದೆ |

ಸುಳಿ ಸುಳಿದಾಡುವ ಸರ್ವದಾ ಹಿತವನ್ನೇ ಬಯಸುವ ||

ಸೆಳೆದು ದುರ್ವಿಷಯಗಳಿಂದ ಒಲಿದು ಪಾಲಿಸು ಸರ್ವದಾ |

ಕಳೆದು ಪಾಪಗಳ, ತೊಳೆದು ಮನದ ಮಲ

ಶುದ್ದಳಾಗಿಸೆಂದು ಹೇಗೆ ಹೇಳಲಿ? || || 1 ||

ಒಳಿತಾಗಲೀ, ಕೆಡುಕಾಗಲೀ, ಸುಖವಾಗಲಿ, ದು:ಖವಾಗಲೀ |

ವೇಳೆ ವೇಳೆಗೆ ಕರ್ಮಾನುಸಾರ ಕಲೆಸಿ ಉಣಿಸುವವ ||

ಒಳಗೆ ಕುಳಿತು ಹೇಳುವವ-ಕೇಳುವವ ಎನ್ನಂತರ್ಯಾಮಿ |

ನೋಳ್ಪ, ಮಾಳ್ಪ ಸರ್ವವಿದಿತ ಶ್ರೀಕೃಷ್ಣವಿಟ್ಠಲ ನಿನಗೆ ಹೇಗೆ ಹೇಳಲಿ || 2 ||

ಎಎಎ

356. ಸರುವ ಭಾರ ನಾನೇ ಹೊತ್ತಿರುವನೆಂಬ ಗರುವವೇಕೆ? |

ಅರಿತು ನೋಡಲು ಮರ್ಮ ತಿಳಿವುದು || || ||

ತಿರುಗುವಾಗ, ಮಲಗಿದಾಗ, ಕುಳಿತಾಗ |

ಉರ್ವಿಯೇ ಭಾರಪೊತ್ತಿಲ್ಲವೇ? ಬೇಸರಿಸದೇ ||

ಶಿರದ ಭಾರ ದೇಹ, ದೇಹದ ಭಾರ ಕಾಲ್ಗಳು |

ಚರಣದ ಭಾರ ಭುಮಿಯೆ ಪೊತ್ತಿಲ್ಲವೇ? || || 1 ||

ಗರ್ಭಸ್ಥ ಶಿಶು ಭಾರ ಮಾತೆ ನವಮಾಸ ಧರಿಸಿದರೂ |

ಸಂರಕ್ಷಿಸುವಾ ಸಕಲರನು ಪರತರ ಉತ್ತಮದಿ ಸದಾ ||

ಪೊರೆಯುವ ತಾಯ್ತಂದೆಯರೇ ಮಕ್ಕಳಿಗೆ ಭಾರವೆನಿಪರು |

ಪುರುಷ ಆದಿಕಾರಣನೆಂತು ಜಗದ ಭಾರ ಸಹಿಸಿಹನು || || 2 ||

ಭಾರವೆನಿಪುದು ಕಾಲ ದುರ್ಭರ ಕ್ಷಣದಲಿ ಕಳೆಯಲು |

ಭಾರವೆನಿಪುದು ಜೀವಿಸುವ ಜೀವನ ನಿರಾಸೆಯಲಿ ||

ಮರೆಯದೆ ಸರುವ ಭಾರ ಪೊತ್ತಿರುವ ಗುಪ್ತದಿ ವ್ಯಾಪ್ತನಾಗಿ |

ಭಾರತೀಶಪ್ರಿಯ ಶ್ರೀಕೃಷ್ಣವಿಟ್ಠಲನ ಸ್ಮರಿಸೆ ಭಾರವೆಲ್ಲ ಹಾರಿಪೋಪುದು || 3 ||

ಎಎಎ

357. ಹುಟ್ಟನಿಂದ ಸಾವಿನ ತನಕ ಕಟ್ಟಿಕೊಂಡು ಬಂದಬುತ್ತಿ | (ಕರ್ಮ)

ಬಿಟ್ಟು ಬಿಡದೆ ಜೊತೆಯಲಿರುವುದು ಪ್ರತಿಯಾನದಲಿ ||

ಎಷ್ಟು ತಿಂದರೂ ಕರಗದೇ ಅಕ್ಷಯವಾಗುವುದು |

ಕೊಟ್ಟರೂ ಎರವರಿಗೆ ಕೊಡಮಾಡಲಾಗದು ಪೂರ್ಣ ||

ಇಷ್ಟ ಪಟ್ಟರೂ ಪಡದಿದ್ದರೂ ತಿನ್ನುತ್ತಲೇ ಇರಬೇಕು |

ಕೆಟ್ಟು ಹೋಗದಂತಹ ಸಿಹಿ-ಕಹಿ ಗ್ರಾಸ ಒಳಗಿರುವುದು ||

ಗಂಟು ಬಿಚ್ಚಿದ ಮೇಲೆ ಒಳಗೇನಿರುವುದು ಅರಿವಾವುದು | (ಸುಖ-ದು:)

ಒಟ್ಟಿನಲಿ ತಾನೇ ತಿಂದು ಮುಗಿಸಲೇಬೇಕಾದ ಸ್ಥಿತಿ ||

ಕಷ್ಟ ಪಟ್ಟು ಮೂರು ರೀತಿಯಲಿ ತಿಂದರೂ ತಾನೇ ಮುಗಿಯದು | (ತನು, ಮನ, ಬುದ್ದಿ)

ಸುಟ್ಟರೂ ಸುಡದಿರುವಂತಹ ಗಟ್ಟಿ ಪಾಕ ಹೋಗಲು ಒಂದೇ ದಾರಿ || (ಪ್ರಾರಬ್ಧ)

ಸೃಷ್ಟೀಶ ಸಂತುಷ್ಟ ಶ್ರೀಕೃಷ್ಣವಿಟ್ಠಲಗೇ ಸಮರ್ಪಿಸೆ ಕರಗುವುದು || ಬುತ್ತಿ ||

ಎಎಎ

358. ಈಗ ಇದ್ದದ್ದು ಈಗ ಇಲ್ಲ || ಪ್ರಾಣ ||

ಹೇಗೆ ಹೋಯಿತು? ಎಲ್ಲಿಗೆ ಹೋಯಿತು?ಕಾಣದಂತೆ || || ||

ಬಗೆ ಬಗೆಯಲಿ ಚಿಂತಿಸಿದರೂ ಹೊಳೆಯದಾಯ್ತು |

ಹಗರಣ ಇಲ್ಲದೆ ನಿ:ಶಬ್ದದಿ ತಾ ಸರಿದುಹೋಯ್ತು || || ಅಪ ||

ಹೊರಗ್ಹೋದ ಉಸಿರು ಹೊರಗೇ ಉಳಿಯಿತು|

ತೆರೆದ ಕಣ್ಣು ರೆಪ್ಪೆ ಮಿಟಿಕಿಸಲೇ ಇಲ್ಲ ||

ಬರಿದೇ ಶೂನ್ಯದಿ ನೆಟ್ಟಂತೆ ದೃಷ್ಟಿಯಾಯ್ತು |

ಸರಿದು ವಾಲಿತು ಸೋತಂತೆ ಕೊರಳು || || 1 ||

ಉಸಿರಿನ ಅವಧಿ ಮುಗಿಯಿತೋ |

ಕಸುವು ಮೈಯ್ಯಿಂದ ಅಳಿಯಿತೋ ||

ಹೆಸರಿಲ್ಲದೆ ಸಮಯ ಸರಿಯಿತೋ |

ಹೊಸ ಹಾಡಿನ ಸರದಿ ಬಂದಿತೋ || || 2 ||

ಎಂಥಾ ತೆಳ್ಳಗಿನ ಎಳೆ ಸಾವು-ಜೀವನ ನಡುವೆ |

ಮಿಥ್ಯ-ಸತ್ಯತೆಯ ನಡುವಿನ ಬಂಧನದಂತೆ ||

ವ್ಯರ್ಥಾಲಾಪ, ಗೋಳು ಕೇಳಿಸದಂತೆ ತನ್ನಷ್ಟಕ್ಕೆ |

ಪಥ ಹಿಡಿದು ಸಾಗಿತು ಹಿಂತಿರುಗಿ ಬರದಂತೆ || || 3 ||

ಬಂದ ತಕ್ಷಣ ಒಂದರಿಂದ ಅನೇಕವಾಗಿ ಹರಡಿ |

ಒಂದಿನ ಹೇಳ ಹೆಸರಿಲ್ಲದೆ ಮಾಯವಾಹುದು ||

ವಿಧಿಯಾಟವೋ, ಹಣೆಬರಹವೋ ತಿಳಿಯದು |

ತಂದದ್ದು ಇಲ್ಲ, ಜೊತೆ ಒಯ್ಯವುದು ಏನಿಲ್ಲಾ || || 4 ||

ಬಣ್ಣದ ಬದುಕಲಿ ಬಂಧುಬಾಂಧವರ ಓಲೈಸಲು |

ಒಣಪ್ರತಿಷ್ಠೆ, ಹಣಕ್ಕಾಗಿ ಹೋರಾಡಿ ನೊಂದು ಬೆಂದು ||

ಕ್ಷó, ಕಾಲ ಸರಿಯುವುದ ತಿಳಿಯದೇ |

ಮಣ ಭಾರ ಹೊತ್ತಂತೆ ವ್ಯರ್ಥದಿ ಜೀವನಹೋಯಿತು || || 5 ||

ಸೂತ್ರಧಾರನ ಕೈಯ್ಯಲ್ಲಿಯ ಗೊಂಬೆಯಂತೆ |

ಪಾತ್ರ ಇದ್ದಾಗ ಬಂದು ಕುಣಿಸಿದಂತೆ ಕುಣಿದು ||

ಹೊತ್ತು ಹೋಗುವ ಮುನ್ನ ಶಕ್ತ್ಯಾನುಸಾರದಿ |

ಭಕ್ತವತ್ಸಲ ಶ್ರೀಕೃಷ್ಣವಿಟ್ಠಲನ ಒಲಿಸಿಕೋ || || 6 ||

ಎಎಎ

359. ಉತ್ತಮ ಲೋಕ ಪ್ರಾಪ್ತಿಗೆ ಉತ್ಕøಷ್ಟ ದಾನಮಾಡು |

ಉತ್ತಮೋತ್ತಮಾಂಗಾಯ ಒಲಿದು ಸಂಪ್ರೀತನಾಗುವ | || ||

ಸತ್ಪಾತ್ರರಿಗೆ ಕೊಡುವ ಪ್ರತಿ ದಾನವು |

ಸತ್ಫಲ ರೂಪದಿ ಕುಲ ಉದ್ಧರಿಸುವುದು ||

ಅತೀ ಪ್ರಿಯ ವಸ್ತುವನ್ನೇ ದಾನವಾಗಿಸು |

ವ್ಯರ್ಥವಾದ ವಸ್ತುದಾನದಿ ಕೇಡನ್ನೇ ಉಣ್ಣುವಿ || || 1 ||

ಕಾಟಾಚಾರಕ್ಕಾಗಿ ಬೈದು ಕೊಡಬೇಡ |

ಇಟ್ಟು ಒಳ್ಳೆಯ ಮನ ಸದ್ಭಾವನೆಯಲಿ ಕೊಡು ||

ಕೆಟ್ಟದ್ದುದ ಕೊಟ್ಟು ನೀ ಕೆಡಬೇಡ |

ಕೊಟ್ಟಮೇಲೆ ಅದಕ್ಕಾಗಿ ಪರಿತಪಿಸಬೇಡ || || 2 ||

ಬೇರೆಯವರಿಗೆ ಕೊಡಲೆಂದೇ ಬಂದ ವಿದ್ಯೆ, ಧನ, ಸಂತೋಷ |

ವರವಾಗಿಹುದು ನಿನಗೆ ಪೂರ್ವಜನ್ಮಕೃತ ಪುಣ್ಯವು ||

ಹೆರವರಿಗೆ ಕೊಡದಿದ್ದರೆ ಧರ್ಮದೃಷ್ಟಿಯಲಿ ಕಳ್ಳನಾಗುವಿ |

ಬರುವ ಜನ್ಮಾಂತರಗಳಲಿ ತಪ್ಪು ಕಾಣಿಕೆ ಕೊಡಲೇಬೇಕು || || 3 ||

ಕೊಟ್ಟರೊಮ್ಮೆ ದಾನ ಋಣ ಮುಗಿದಂತಲ್ಲಾ |

ಹುಟ್ಟಿನಿಂದಾ ಸಾಯುವರೆಗೂ ಕೊಡುತ್ತಲೇ ಇರು ||

ಮಾತೃ, ಗುರು, ಸಮಾಜ ಋಣ ತೀರದು ಎಂದಿಗೂ |

ಶ್ರೀಕೃಷ್ಣವಿಟ್ಠಲ ಇತ್ತಿದ್ದು ಅವನಿಗೆ ಕೊಟ್ಟು ವರವ ಪಡಿ || || 4 ||

ಎಎಎ

360. ಗುರುಗಳ ಸೇವೆಯಲಿ ದೊರೆಯುವುದು ಜ್ಞಾನಮಾರ್ಗ |

ಸರಿಯಾದ ಪಂಚಭೇದ, ತಾರತಮ್ಯ ಜ್ಞಾನ ||

ಪರಮಾತ್ಮನಲ್ಲಿ ಭಕ್ತಿ, ವಿಷಯ ವಿರಕ್ತಿ ಪುಟ್ಟುವುದು |

ದುರುಳಬುದ್ಧಿ ನಾಶವಾಗಿ ಮನ ನಿರ್ಮಲವಾಹುದು ||

ಬರುವುದೇ ಸುಬುದ್ಧಿ, ಮಾಡುವುದು ಕರ್ಮನಾಶ |

ಕರ್ಮಫಲಾರ್ಪಣೆ ನಿರ್ವಂಚನೆಯಲಿ ಮಾಡಿದಾಗ ||

ದೊರೆಯುವುದೇ ನಿತ್ಯ, ಸತ್ಯ, ಮೋಕ್ಷಫಲ |

ಅರ್ಪಿಸಿ ಏಕಾದಶೇಂದ್ರಿಯ ಕರ್ಮಗಳ, ತದಭಿಮಾನಿ ತತ್ತ್ವೇಶರ ||

ದ್ವಾರಾ ವಾಯ್ವಾಂತರ್ಗತ ಶ್ರೀಕೃಷ್ಣವಿಟ್ಠಲ ಸ್ವಾಮಿಗೆ |

ಸಾರವಿದೇ ಸಾಧನ ಜೀವಿಗಳ ಆಧ್ಯಾತ್ಮ ರಸರಂಜಿನಿ ಸಾರ ||

ಎಎಎ

361. ಜ್ಞಾನ ಬೇಕು, ವಿಶೇಷ ಸುಜ್ಞಾನ ಬೇಕು |

ಜೀವ ಪರಮಾತ್ಮರೊಳುಭೇದ | ಜೀವ ಜೀವಕೆ ಭೇದ ||

ಜೀವ ಜಡಕೆ ಭೇದ ಸಾರುವ ಜ್ಞಾನಬೇಕು |

ಕ್ಷರಾಕ್ಷರ ಭೇದ, ದ್ವೈತಾದ್ವೈತ ಭೇದ, ಜ್ಞಾನವರಿತು ||

ಮುಕ್ತಿಮಾರ್ಗದೆಡೆಗೆ ಸಾಗಲು ಜ್ಞಾನಬೇಕು |

ಎಲ್ಲಕ್ಕಿಂತ ಶ್ರೇಷ್ಠ ಪುರುಷೋತ್ತಮನೆಂಬ ಸಾರುವ ವೇದಗಳ ಜ್ಞಾನ ಬೇಕು ||

ಗುರುಮಧ್ವರಾಯರ ದಯದಿ ಜ್ಞಾನಬೇಕು |

ಶ್ರೀಕೃಷ್ಣವಿಟ್ಠಲ ಗುಣಮಹಿಮೆಗಳ ಜ್ಞಾನಬೇಕು ||

ಎಎಎ

362. ಬಿರುದೇಕೆ ಹೊಗಳಿಕೆ ಯಾತಕೆ, ಈಲೋಕದಲಿ | || ||

ಹೊಗಳುವ ಭಟ್ಟಂಗಿ ಕಂಡರೆ ಅಂಜಿಕೆ ಎನಗಯ್ಯಾ |

ಹೊಗಳಿದವರೇ ಮರುಕ್ಷಣ ತೆಗಳುವರಯ್ಯಾ ||

ಚಿತ್ತಚಂಚಲರಿಂದ ಸದಾ ಎನ್ನ ಕಾಪಾಡು |

ಚಿತ್ತಜನಕ ನಿನ್ನೊಲುಮೆ ಇದ್ದರೆ ಸಾಕು || || 1 ||

ನಶ್ವರಜಗತ್ತು, ನಶ್ವರದೇಹ |

ಶಾಶ್ವತ ಆತ್ಮಕ್ಕೆ ನಿನ್ನ ಸ್ಮರಣೆ ಸಾಕು ||

ಗುರುಗಳಾಶೀರ್ವಾದ ಬಲದಿಂದಲೇ |

ಮುಳ್ಳಿನ ಹಾದಿ ಹುಲ್ಲುಹಾಸಾದರೆ ಸಾಕು | || 2 ||

ನಾಹಂ ಕರ್ತಾ, ಹರಿ:ಕರ್ತಾ ಎಂದಂತೆ |

ಮನನಿನ್ನದು, ತನುನಿನ್ನದು ||

ನೀ ನಡೆಸಿದಂತೆ ನಡೆವ ಈಜೀವ |

ಶ್ರೀಕೃಷ್ಣವಿಟ್ಠಲ ಪ್ರೇರಣೆಯಾ ಪ್ರೀತ್ಯರ್ಥಂ ||

ಎಂದು ಮಾಡುವ ಕೆಲಸಕೆ | || 3 ||

ಎಎಎ

363. ನಮ್ಮ ಪ್ರಾರಬ್ಧಕರ್ಮ ಅನುಭವಿಸದೇ ತೀರದು |

ವಂಚನೆಯಿಂದ ದಾಟಲುಬಾರದು ಯಾರಿಗೂ | || ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು